ಅಕ್ರಮ ಮರಳು ಸಾಗಾಣಿಕೆ: ಲಾರಿ ಹಾಗೂ ಮರಳು ವಶ

ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ ಲಾರಿಯನ್ನು ವಶಪಡಿಸಿಕೊಂಡಿದ್ದು ಈ ಬಗ್ಗೆ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೩-೦೭-೨೦೧೭ ರಂದು ಬೆಳಗಿನ ಜಾವ ೦೨:೩೦ ಗಂಟೆ ಸಮಯಲ್ಲಿ ಕೋಲಾರ ಜಿಲ್ಲೆಯ ರಾತ್ರಿ ಗಸ್ತಿನ ಕರ್ತವ್ಯದಲ್ಲಿದ್ದ ಶ್ರೀನಿವಾಸಪುರ ವೃತ್ತದ ನಿರೀಕ್ಷಕರಾದ ಶ್ರೀ ವೆಂಕಟರಮಣಪ್ಪ ರವರು ಕೋಲಾರ ಹೊರವಲಯದ ಸ್ಯಾನಿಟೋರೊಯಂ ಬಳಿ ಕರ್ತವ್ಯದಲ್ಲಿದ್ದರು. ಆ ಸಮಯದಲ್ಲಿ ಬಂಗಾರಪೇಟೆ ಕಡೆಯಿಂದ ಬಂದ ಟಿಪ್ಪರ್‍ ವಾಹನ ಸಂಖ್ಯೆ ಕೆಎ-೦೮-೫೮೦೨ ಅನ್ನು ತಡೆದು ನಿಲ್ಲಿಸಿರುತ್ತಾರೆ. ಟಿಪ್ಪರ್‍ ನಲ್ಲಿ ಹೋಗಿ ನೋಡಿದಾಗ ಅಕ್ರಮವಾಗಿ ಮರಳನ್ನು ತುಂಬಿಸಿ ಸಾಗಾಣಿಕೆ ಮಾಡಲಾಗುತ್ತಿದ್ದ ಸಂಗತಿ ಬೆಳಕಿಗೆ ಬಂದಿರುತ್ತದೆ. ಅಷ್ಟರಲ್ಲಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದು ಲಾರಿ ಹಾಗೂ ಅಕ್ರಮ ಮರಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲು ಮಾಡಲಾಗಿರುತ್ತದೆ.

Leave a Reply

Your email address will not be published. Required fields are marked *