ಕರ್ನಾಟಕ ರಾಜ್ಯ ಪೊಲೀಸ್ ವತಿಯಿಂದ ನೂತನ ಮೊಬೈಲ್ ತಂತ್ರಾಂಶ ಬಿಡುಗಡೆ

ಕರ್ನಾಟಕ ರಾಜ್ಯದ ನಾಗರೀಕರೆಡೆಗೆ ಮತ್ತಷ್ಟು ಸನಿಹವಾಗುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಕೆ.ಎಸ್.ಪಿ ಮೊಬೈಲ್ ಆಪ್ ತಂತ್ರಾಂಶವನ್ನು ಅಧಿಕೃತವಾಗಿ ಬಿಡಿಗಡೆಗೊಳಿಸಿದೆ.

ಈ ತಂತ್ರಾಂಶವನ್ನು ಗೂಗಲ್ ಪ್ಲೇ ಸ್ಟೋರ್‍ ಮೂಲಕ ನಾಗರೀಕರು ತಮ್ಮ ಮೊಬೈಲ್ ಫೋನಿಗೆ ಡೌನ್ ಲೋಡ್ ಮಾಡಿಕೊಳ್ಳಬಹುದು. ಈ ತಂತ್ರಾಂಶದ ಮೂಲಕ ರಾಜ್ಯ ಎಲ್ಲಾ ಪೊಲೀಸ್ ಠಾಣೆಗಳ ವಿವರವನ್ನು ತಿಳಿದುಕೊಳ್ಳಬಹುದು. ಯಾವುದೇ ಸ್ಥಳದಲ್ಲಿದ್ದುಕೊಂಡು ಆ ಸ್ಥಳ ಯಾವ ಪೊಲೀಸ್ ಠಾಣೆಯ ಸರಹದ್ದಿಗೆ ಬರುತ್ತದೆ ಎಂಬುದನ್ನು ತಿಳಿಯಬಹದುದು. ಅಲ್ಲದೇ ಬಹು ಮುಖ್ಯವಾಗಿ ನಾಗರೀಕರು ಯಾವುದೇ ರೀತಿಯ ದೂರನ್ನು ಈ ತಂತ್ರಾಂಶದ ಮೂಲಕ ನೇರವಾಗಿ ಪೊಲೀಸ್ ಕಂಟ್ರೋಲ್ ರೂಂಗೆ ವರದಿ ಮಾಡಬಹುದು. ಈ ರೀತಿ ವರದಿ ಮಾಡಿದ ದೂರಿನ ಪ್ರತಿ ಪ್ರಗತಿಯನ್ನು ಸಹಾ ದೂರುದಾರರಿಗೆ ಎಸ್.ಎಂ.ಎಸ್ ಮೂಲಕ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ.

ನಾಗರೀಕರು ಈ ತಂತ್ರಾಂಶದ ಸದುಪಯೋಗ ಪಡೆದುಕೊಳ್ಳಲು ಈ ಮೂಲಕ ಕೋರಲಾಗಿದೆ.

ತಂತ್ರಾಂಶದ ಲಿಂಕ್ 

Comments are closed.