ಕಳವು ಪ್ರಕರಣಗಳ ಆರೋಪಿ ಬಂಧನ; ಚಿನ್ನ ಹಾಗೂ ಬೆಳ್ಳಿಯ ಆಭರಣಗಳು ವಶಕ್ಕೆ

ದಿನಾಂಕ: 25/11/2017 ರಂದು ಮುಂಜಾನೆ ಗಸ್ತಿನಲ್ಲಿದ್ದ ಮುಳಬಾಗಲು ನಗರ ಪೊಲೀಸ್ ಠಾಣೆಯ ಶ್ರೀ ಭೈರ ಪಿ.ಎಸ್.ಐ (ಕಾ&ಸು) ಮತ್ತು ಅಪರಾಧ ಸಿಬ್ಬಂದಿಯವರಾದ ಹೆಚ್.ಸಿ 105 ಆನಂದ್, ಹೆಚ್.ಸಿ. 140 ಸುಧಾಕರ್, ಹೆಚ್.ಸಿ 203 ಸುರೇಶ್, ಪಿಸಿ 577 ಶ್ರೀನಿವಾಸ್ ರವರೊಂದಿಗೆ ಕಳವು ಪ್ರಕರಣಗಳಲ್ಲಿ ಆರೋಪಿ ಮತ್ತು ಮಾಲು ಪತ್ತೆ ಬಗ್ಗೆ ಮುಳಬಾಗಿಲು ನಗರ ಪ್ರಮುಖ ಬೀದಿಗಳಲ್ಲಿ ಗಸ್ತು ಮಾಡಿಕೊಂಡು ಬರುತ್ತಿದ್ದಾಗ ಬೆಳಗ್ಗೆ ಸುಮಾರು 07:00 ಗಂಟೆ ಸಮಯದಲ್ಲಿ ಯಾರೋ ಒಬ್ಬ ಆಸಾಮಿಯು ಅನುಮಾನಸ್ಪದವಾಗಿ ಓಡಾಡುತ್ತಿದ್ದವನು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ಕಂಡು ಓಡಿ ಹೋಗಲು ಪ್ರಯತ್ನಿಸಿದ್ದು ಪೊಲೀಸರು ಆತನನ್ನು ಹಿಡಿದುಕೊಂಡು ನೋಡಲಾಗಿ ಸದರಿ ಆಸಾಮಿಯು ಈ ಹಿಂದೆ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಆತನ ಹೆಸರು ಸೈಯದ್ ನಯಾಜ್ ಪಾಷ @ ನಯಾಜ್ ಬಿನ್ ಸೈಯದ್ ಇಬ್ರಾಹೀಂ ಸಾಬ್, 37 ವರ್ಷ, ಮುಸ್ಲಿಂರು, ಗಾರೆ ಕೆಲಸ, ವಾಸ: ಹರಳಕುಂಟೆ ಗ್ರಾಮ, ಶ್ರೀನಿವಾಸಪುರ ತಾಲ್ಲೂಕು ಆಗಿದ್ದು ಆತನ ವರ್ತನೆ ಬಗ್ಗೆ ಸಂಶಯಗೊಂಡು ಸದರಿ ಆಸಾಮಿಯನ್ನು ಚೆಕ್ ಮಾಡಲಾಗಿ ಆತನ ಜೇಬಿನಲ್ಲಿ ಒಂದು ಚಿನ್ನದ ನೆಕ್ಲೇಸ್ ಇಟ್ಟುಕೊಂಡಿದ್ದು, ಸದರಿ ಮಾಲಿನ ಬಗ್ಗೆ ವಿಚಾರಿಸಲಾಗಿ ಯಾವುದೇ ಸಮಂಜಸವಾದ ಉತ್ತರ ನೀಡದ ಕಾರಣ ಕಳವು ಮಾಡಿರಬಹುದು ಎಂದು ಅನುಮಾನಗೊಂಡು ಸದರಿ ಆಸಾಮಿಯನ್ನು ಠಾಣೆಗೆ ಕರೆತಂದು ವಿಚಾರಿಸಲಾಗಿ ಆತನ ಬಳಿ ಇದ್ದ ನೆಕ್ಲೇಸ್ ಅನ್ನು ಮುಳಬಾಗಿಲು ಟೌನ್ ಮುತ್ಯಾಲಪೇಟೆಯ ಕಾಮಾಕ್ಷಿ ದೇವಸ್ಥಾನದ ಬಳಿ ಇರುವ ಒಂದು ಮನೆಯಲ್ಲಿ ಸುಮಾರು ಒಂದು ತಿಂಗಳ ಹಿಂದೆ ಕಳವು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿರುತ್ತಾನೆ. ಆತನನ್ನು ಮುಂದಿನ ತನಿಖೆಗಾಗಿ ಸಿಪಿಐ ಮುಳಬಾಗಿಲು ವೃತ್ತ ರವರ ಮುಂದೆ ಹಾಜರುಪಡಿಸಿದ್ದು ವಿಚಾರಣೆ ಮಾಡಲಾಗಿ ಈಗ್ಗೆ 6 ತಿಂಗಳ ಹಿಂದೆ ನೂಗಲುಬಂಡೆಯ ಮನೆಯೊಂದರಲ್ಲಿ ಹಾಗು ಶಿವಕೇಶವನಗರದ ಮನೆಯೊಂದರಲ್ಲಿ ಕಳ್ಳತನ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದು ಆತನ ಹೇಳಿಕೆಯ ಮೇರೆಗೆ ಕಳವು ಮಾಡಿ ಅಡಮಾನ ಇಟ್ಟಿದ್ದ ಸುಮಾರು 3,20,000 ರೂ ಮೌಲ್ಯದ 103 ಗ್ರಾಂ ಚಿನ್ನದ ಆಭರಣಗಳನ್ನು ಹಾಗು 275 ಗ್ರಾಂ ಬೆಳ್ಳಿ ಆಭರಣಗಳನ್ನು ಮತ್ತು ಒಂದು ಟಿ.ವಿಯನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ.

ಕೋಲಾರ ಜಿಲ್ಲೆಯ ಮಾನ್ಯ ಪೊಲೀಸ್ ಅಧೀಕ್ಷಕರಾದ ಡಾ. ರೋಹಿಣಿ ಕಟೋಚ್ ಸೆಪಟ್, ಐ.ಪಿ.ಎಸ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಎಂ. ರಾಜೀವ್, ಕೆ.ಎಸ್.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಶ್ರೀ ಬಿ.ಕೆ. ಉಮೇಶ, ಡಿ.ವೈ.ಎಸ್.ಪಿ ಮುಳಬಾಗಿಲು ಉಪ ವಿಭಾಗ ರವರ ನೇತೃತ್ವದಲ್ಲಿ ಶ್ರೀ ಎ. ಸುಧಾಕರರೆಡ್ಡಿ, ಸಿ.ಪಿ.ಐ ಮುಳಬಾಗಿಲು ವೃತ್ತ, ಶ್ರೀ ಭೈರ ಪಿ.ಎಸ್.ಐ ಮುಳಬಾಗಿಲು ನಗರ ಪೊಲೀಸ್ ಠಾಣೆ, ಮತ್ತು ಸಿಬ್ಬಂದಿಯವರಾದ ಸುಧಾಕರ್, ಸುರೇಶ್, ಶ್ರೀನಿವಾಸ, ಆನಂದ, ನಸ್ರೀನ್ ತಾಜ್ ಎಂ.ಕೆ, ನಾಗರಾಜ್, ಶಂಕರ, ಗಣೇಶ ರವರ ತಂಡವು ಆರೋಪಿಯಾದ ಸೈಯದ್ ನಯಾಜ್ನನ್ನು ವಶಕ್ಕೆ ಪಡೆದು ಆತನ ಮಾಹಿತಿ ಮೇರೆಗೆ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಹಾಗು ಒಂದು ಟಿ.ವಿಯನ್ನು ವಶಪಡಿಸಿಕೊಂಡು ಮೂರು ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.

 

Leave a Reply

Your email address will not be published. Required fields are marked *