ಕಾನೂನು ಅರಿವು ಕಾರ್ಯಾಗಾರದ ಬಗ್ಗೆ

 

ದಿನಾಂಕ:10/09/2017 ರಂದು ನ್ಯಾಯಾಂಗ ಇಲಾಖೆ, ಅಭಿಯೋಜನೆ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಒಂದು ದಿನದ ಕಾನೂನು ಅರಿವು ಕಾಯರ್ಾಗಾರವನ್ನು ಕೋಲಾರ ಜಿಲ್ಲಾ ಪಂಚಾಯಿತಿ ಸಂಭಾಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸದರಿ ಕಾಯರ್ಾಗಾರವನ್ನು ಜಿಲ್ಲಾ ಸತ್ರ ನ್ಯಾಯಾಲಯದ ಗೌರವಾನ್ವಿತ ನ್ಯಾಯಾದೀಶರಾದ ಶ್ರೀಮತಿ ಎಸ್.ಮಹಾಲಕ್ಷ್ಮೀ ನೇರಳೆ ರವರು ಉದ್ಘಾಟನೆ ಮಾಡಿದರು. ಕಾಯರ್ಾಗಾರದ ಅಧ್ಯಕ್ಷತೆಯನ್ನು ಕೋಲಾರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ|| ರೋಹಿಣಿ ಕಟೋಚ್ ಸೆಪೆಟ್, ಐ.ಪಿ.ಎಸ್, ರವರು ವಹಿಸಿದ್ದರು.

ಕಾಯರ್ಾಗಾರದಲ್ಲಿ ಪೋಕ್ಸೋ ಕಾಯಿದೆ, ನೊಂದವರಿಗೆ ಪರಿಹಾರದ ಯೋಜನೆ-2011, ಎನ್.ಡಿ.ಪಿ.ಎಸ್. ಕಾಯಿದೆ ಕುರಿತು ಚಚರ್ಿಸಲಾಯಿತು. ಕಾಯರ್ಾಗಾರದಲ್ಲಿ ಪೋಕ್ಸೋ ಕಾಯಿದೆ ಅಡಿಯಲ್ಲಿ ವರದಿಯಾಗುವ ಪ್ರಕರಣಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನ್ಯಾಯಾಧೀಶರಾದ ಶ್ರೀಮತಿ ರೇಖಾ ಮತ್ತು ಶ್ರೀ ಜಗದೀಶ್ವರ ರವರು ಸೂಚನೆಗಳನ್ನು ನೀಡಿದರು. ಕೃತ್ಯ ವರದಿಯಾದ ತಕ್ಷಣ ಪ್ರಕರಣಕ್ಕೆ ಸಂಬಂಧಪಟ್ಟ ಸೂಕ್ತ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಸಂಬಂಧಪಟ್ಟ ಆರೋಪಿಗಳ ವಿರುದ್ದ ಶೀಘ್ರವಾಗಿ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿ ಆರೋಪಿಗಳಿಗೆ ಶಿಕ್ಷೆಯಾಗಲು ಕ್ರಮ ಕೈಗೊಳ್ಳುವಂತೆ ಸಲಹೆ ನೀಡಲಾಯಿತು. ಪೋಕ್ಸೋ ಪ್ರಕರಣಗಳಲ್ಲಿ ಸಂತ್ರಸ್ಥೆಯಿಂದ ಹೇಳಿಕೆ ಪಡೆಯುವ ವೇಳೆಯಲ್ಲಿ ಪೊಲೀಸರು ಸಮವಸ್ತ್ರದಲ್ಲಿ ಇರಬಾರದು ಮತ್ತು ಅವರ ಆಪ್ತರ ಸಮ್ಮುಖದಲ್ಲಿ ಹೇಳಿಕೆ ಪಡೆಯುವುದು ಸೂಕ್ತವೆಂದು ತಿಳಿಸಿದರು. ಪೋಕ್ಸೋ ಕಾಯಿದೆ ಅಡಿಯಲ್ಲಿ ವರದಿಯಾಗುವ ಪ್ರಕರಣಗಳಲ್ಲಿ 2 ತಿಂಗಳ ಒಳಗಾಗಿ ತನಿಖಾಧಿಕಾರಿಗಳು ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಬೇಕು ಎಂದು ಸುಪ್ರಿಂ ಕೋಟರ್್ ಆದೇಶ ನೀಡಿದೆ ಹಾಗೆಯ 30 ದಿನಗಳ ಒಳಗಾಗಿ ಸಂತ್ರಸ್ಥೆಯ ಹೇಳಿಕೆ ಪಡೆಯಬೇಕು ಎಂದು ಹೈಕೋಟರ್್ ಆದೇಶಿಸಿದೆ ಎಂದು ಶ್ರೀಮತಿ ಎಸ್.ಮಹಾಲಕ್ಷ್ಮೀ ನೇರಳೆ ರವರು ತಿಳಿಸಿದರು.

ಎನ್.ಡಿ.ಪಿ.ಎಸ್. ಪ್ರಕರಣಗಳಲ್ಲಿ ಕೈಗೊಳ್ಳಬಹುದಾದ ತನಿಖಾ ವಿಧಾನಗಳ ಬಗ್ಗೆ ಶಿವಮೊಗ್ಗೆ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಬ್ಕಾರಿ ಇಲಾಖೆಯ ಇನ್ಸ್ಪೆಕ್ಟರ್ ರವರಾದ ಶ್ರೀ ಸೈಯದ್ ತಫ್ಜೀಲ್ ಉಲ್ಲಾರವರು ತಿಳಿಸಿದರು.

ಪ್ರಕರಣಗಳಲ್ಲಿ ನೊಂದವರಿಗೆ ನೀಡುವಂತಹ ಪರಿಹಾರಗಳ ಬಗ್ಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿಗಳಾದ ಮಾನ್ಯ ಗುರುರಾಜ್ ಜಿ.ಶಿರೋಲ್ ರವರು ವಿವರಣೆಗಳನ್ನು ನೀಡಿದರು.

ಕಾಯರ್ಾಗಾರದಲ್ಲಿ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳ ನ್ಯಾಯಾಧೀಶರು, ಸಕರ್ಾರಿ ಅಭಿಯೋಜಕರು ಸಹಾಯಕ ಅಭಿಯೋಜಕರು, ಕೆ.ಜಿ.ಎಫ್. ಜಿಲ್ಲೆಯ ಪೊಲೀಸ್ ಅಧೀಕ್ಷಕರು, ಕೋಲಾರ ಮತ್ತು ಕೆ.ಜಿ.ಎಫ್. ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *