ಕುಖ್ಯಾತ ಸರಗಳ್ಳರ ಬಂಧನ: ೧೮೦ ಗ್ರಾಂ ಚಿನ್ನ ಹಾಗೂ ನಾಲ್ಕು ದ್ವಿಚಕ್ರ ವಾಹನಗಳ ವಶ

 

ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ರೋಹಿಣಿ ಕಟೋಚ್ ಸೇಪತ್, ಐ.ಪಿ.ಎಸ್ ಹಾಗೂ ಶ್ರೀ. ರಾಜೀವ್.ಎಂ, ಅಪರ ಪೊಲೀಸ್ ಅಧೀಕ್ಷಕರು, ಕೋಲಾರ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಮುಳಬಾಗಿಲು ಡಿ.ವೈ.ಎಸ್.ಪಿ ರವರಾದ ಬಿ.ಕೆ.ಉಮೇಶ್ ರವರ ನೇತೃತ್ವದಲ್ಲಿ ಶ್ರೀ ವೆಂಕಟಾಚಲಪತಿ, ಪಿ.ಐ, ಡಿ.ಸಿ.ಬಿ ಮತ್ತು ಶ್ರೀ ಎಂ.ವೆಂಕಟರಾಮಪ್ಪ, ಸಿ.ಪಿ.ಐ ಶ್ರೀನಿವಾಸಪುರ ವೃತ್ತ ರವರು ತಮ್ಮ ಸಿಬ್ಬಂದಿಯವರೊಡನೆ ದಿನಾಂಕ ೧೬-೦೭-೨೦೧೭ ರಂದು ಕುಖ್ಯಾತ ಸರಗಳ್ಳನನ್ನು ಬಂಧಿಸಿರುತ್ತಾರೆ. ಬಂಧಿತ ಆರೋಪಿಯ ವಿವರ ಕೆಳಕಂಡಂತೆ ಇರುತ್ತದೆ

(೧) ತಜಮುಲ್ ಪಾಷ @ ತಜ್ಜು, ಮುಳಬಾಗಿಲು ನಗರ.

(೨) ರಿಜ್ವಾನ್, ಮುಳಬಾಗಿಲು ನಗರ

ಬಂಧಿತ ಆರೋಪಿಗಳು ಕೋಲಾರ, ಶ್ರೀನಿವಾಸಪುರ, ಮುಳಬಾಗಿಲು ಪೊಲೀಸ್ ಠಾಣಾ ಸರಹದ್ದುಗಳಲ್ಲಿ ಹಾಗೂ ಇನ್ನಿತರ ಕಡೆಗಳಲ್ಲಿ ಮಹಿಳೆಯರು ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದಾಗ ಹಿಂಬಾಲಿಸಿಕೊಂಡು ಹೋಗಿ ಅವರ ಕತ್ತಿನಲ್ಲಿದ್ದ ಸರಗಳನ್ನು ಕಳವು ಮಾಡುತ್ತಿದ್ದರು. ಇವುಗಳನ್ನು ರಿಜ್ವಾನ್ ಎಂಬುವನು ಮಾರಾಟ ಮಾಡುತ್ತಿದ್ದ. ಬಂಧಿತ ಆರೋಪಿಳು ಕೊಟ್ಟ ಮಾಹಿತಿಯ ಮೇರೆಗೆ ರೂ. ೫,೦೦,೦೦೦-೦೦ ಲಕ್ಷ ಬೆಲೆ ಬಾಳುವ ೧೮೦ ಗ್ರಾಂ ಮೌಲ್ಯದ ಚಿನ್ನ ಹಾಗೂ ರೂ. ೨,೦೦,೦೦೦-೦೦ ಬೆಲೆ ಬಾಳುವ ನಾಲ್ಕು ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಕಾರ್ಯಾಚರಣೆ ನಡೆಸಿದ ತಂಡವನ್ನು ಪೊಲೀಸ್ ವರಿಷ್ಟಾಧಿಕಾರಿಗಳು ಶ್ಲಾಘಿಸಿರುತ್ತಾರೆ.

Leave a Reply

Your email address will not be published. Required fields are marked *