ಕೊಲೆ ಪ್ರಕರಣ ಬೇಧಿಸಿದ ಕೋಲಾರ ನಗರ ಪೊಲೀಸರು

ದಿನಾಂಕ:26/08/2017 ರಂದು ರಾತ್ರಿ 7-30 ಗಂಟೆಯಲ್ಲಿ ಸೈಯದ್ ರಿಯಾಜ್ ಬಿನ್ ಲೇಟ್ ಸೈಯದ್ ಮೊಹಿದೀನ್, 60 ವರ್ಷ, ಮೀನಾ ಮಸೀದಿ ಎದುರು, ರಾಜಾ ನಗರ, ಕೋಲಾರ ಎಂಬು ವವನು ಕೋಲಾರ ರಹಮತ್ ನಗರದ ಅಬ್ದುಲ್ ಖಯ್ಯೂಂ ಬಿನ್ ಲೇಟ್ ಅಬ್ದುಲ್ ರಶೀದ್ ಎಂಬುವ ವರನ್ನು ಕರೆದುಕೊಂಡು ಹೋಗಿ ಕೋಲಾರ ಬ್ರಾಹ್ಮಣರ ಬೀದಿಯಲ್ಲಿರುವ ಸುಧಾ ಲಾಡ್ಜಿನಲ್ಲಿ ರೂಂ ಮಾಡಿ ಅಬ್ದುಲ್ ಖಯ್ಯೂಂ ರವರ ಕತ್ತು ಹಿಸುಕಿ ಕೊಲೆ ಮಾಡಿ ರೂಮಿನ ಬಾಗಿಲಿಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದನು. ಈ ಬಗ್ಗೆ ದಿನಾಂಕ:27/08/2017 ರಂದು ಮೃತನ ತಮ್ಮ ರಿಯಾಜ್ ಪಾಷ ರವರು ಕೊಟ್ಟಿರುವ ದೂರಿನ ಮೇರೆಗೆ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಮೊ.ಸಂ:167/2017 ಕಲಂ: 302 ಐ.ಪಿ.ಸಿ ರೀತ್ಯಾ ಕೇಸು ದಾಖಲಾಗಿರುತ್ತದೆ.

ಮಾನ್ಯ ಡಾ|| ರೋಹಿಣಿ ಕಟೋಚ್ ಸೆಪೆಟ್, ಐ.ಪಿ.ಎಸ್, ಪೊಲೀಸ್ ಅಧೀಕ್ಷಕರು, ಕೋಲಾರ ಜಿಲ್ಲೆ, ಕೋಲಾರ, ಶ್ರೀ.ರಾಜೀವ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಕೋಲಾರ ಜಿಲ್ಲೆ, ಕೋಲಾರ ಮತ್ತು ಶ್ರೀ.ಅಬ್ದುಲ್ ಸತ್ತಾರ್, ಪೊಲೀಸ್ ಉಪಾಧೀಕ್ಷಕರು, ಕೋಲಾರ ಉಪವಿಭಾಗ, ಕೋಲಾರ ರವರ ಮಾರ್ಗ ದರ್ಶನದಲ್ಲಿ ಶ್ರೀ.ಲೋಕೇಶ.ಎಂ.ಜೆ, ಸಿ.ಪಿ.ಐ, ಕೋಲಾರ ನಗರ ವೃತ್ತದ ರವರ ನೇತೃತ್ವದಲ್ಲಿ ಈ ಕೇಸಿನ ಆರೋಪಿಗಳ ಪತ್ತೆಯ ಬಗ್ಗೆ ನೇಮಕಗೊಂಡಿದ್ದ ಕೋಲಾರ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ.ಹೊನ್ನೇಗೌಡ, ಎ.ಎಸ್.ಐ ಬೀರೇಗೌಡ ಮತ್ತು ಸಿಬ್ಬಂದಿಯವರಾದ ಹೆಚ್.ಸಿ-39 ಹಮೀದ್ ಖಾನ್, ಹೆಚ್.ಸಿ-199 ರಾಘ ವೇಂದ್ರ, ಹೆಚ್.ಸಿ-183 ನರೇಂದ್ರ ಮತ್ತು ಪಿ.ಸಿ-668 ಆಂಜನಪ್ಪ ರವರು ತಲೆಮರೆಸಿ ಕೊಂಡಿದ್ದ ಆರೋಪಿ ಸೈಯದ್ ರಿಯಾಜ್ ಬಿನ್ ಲೇಟ್ ಸೈಯದ್ ಮೊಹಿದೀನ್ನನ್ನು ಕೇಸು ದಾಖಲಾದ 24 ಗಂಟೆಗಳೊಳಗೆ ದಿನಾಂಕ:28/8/2017 ರಂದು ಬೆಳಿಗ್ಗೆ 11-00 ಗಂಟೆಯಲ್ಲಿ ಪತ್ತೆ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ.

Leave a Reply

Your email address will not be published. Required fields are marked *