ಕೊಲೆ ಪ್ರಕರಣ ಬೇಧಿಸಿದ ಮುಳಬಾಗಿಲು ಪೊಲೀಸರು

ದಿನಾಂಕ ೨೧-೦೭-೨೦೧೭ ರಂದು ಮುಳಬಾಗಿಲು ಎನ್.ಹೆಚ್ -೪ ರಸ್ತೆಯ ಕಪ್ಪಲಮಡಗು ಗ್ರಾಮದ ಗೇಟ್ ಬಳಿ ವಸಂತಕುಮಾರ್‍ ತಂದೆ ವಾಸುದೇವರಾಜು, ೩೪ ವರ್ಷ, ಎನ್.ಆರ್‍.ಐ ಬಡಾವಣೆ, ಕಲ್ಕೆರೆ, ಕೆ.ಆರ್‍.ಪುರಂ ಬೆಂಗಳೂರು ರವರ ಮೃತ ದೇಹ ದೊರೆತಿದ್ದು ಇದು ಮೇಲ್ನೋಟಕ್ಕೆ ಅಪಘಾತವಲ್ಲದೇ ಕೊಲೆ ಎಂದು ಕಂಡು ಬಂದ ಪರಿಣಾಮ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ರೋಹಿಣಿ ಕಟೋಚ್ ಸೇಪತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ರಾಜೀವ್ ಹಾಗೂ ಮುಳಬಾಗಿಲು ಡಿ.ಎಸ್.ಪಿ ರವರಾದ ಶ್ರೀ ಬಿ.ಕೆ.ಉಮೇಶ್  ರವರ ಮಾರ್ಗದರ್ಶನದಲ್ಲಿ ಮುಳಬಾಗಿಲು ಸಿ.ಪಿ.ಐ ಶ್ರೀ ಸುಧಾಕರ ರೆಡ್ಡಿ ರವರ ನೇತೃತ್ವದಲ್ಲಿ ಮುಳಬಾಗಿಲು ಗ್ರಾಮಾಂತರ ಪಿ.ಎಸ್.ಐ ರವರಾದ ಶ್ರೀ ಬಿ.ಟು.ಗೋವಿಂದ, ಮುಳಬಾಗಿಲು ನಗರ ಪೊಲೀಸ್ ಠಾಣೆ ಪಿ.ಎಸ್.ಐ ರವರಾದ ಶ್ರೀ ಬೈರ ಹಾಗೂ ಇತರೇ ಸಿಬ್ಬಂದಿಯವರನ್ನೊಳಗೊಂಡ ತಂಡವನ್ನು ರಚಿಸಲಾಗಿದ್ದು. ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ ತಂಡವು ಕಾರ್ಯಾಚರಣೆ ನಡೆಸಿ ಈ ಕೆಳಕಂಡ ಆರೀಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

(೧) ಲಕ್ಷ್ಮಿಕಾಂತ ತಂದೆ ನಾರಾಯಣಪ್ಪ, ೩೮ ವರ್ಷ, ವಕ್ಕಲಿಗರು, ಫೈನಾನ್ಸ್ ಕೆಲಸ, ೪ ನೇ ಕ್ರಾಸ್, ಪ್ರಿಯದರ್ಶಿನಿ ಲೇಔಟ್, ದೇವಸಂದ್ರ, ಕೆ.ಆರ್‍.ಪುರಂ, ಬೆಂಗಳೂರು.

(೨) ಮಹೇಶ್ ಕುಮಾರ್‍.ಎನ್ ತಂದೆ ನಾರಾಯಣಸ್ವಾಮಿ, ೩೩ ವರ್ಷ, ಯಾದವ ಜನಾಂಗ, ಫ್ಲೈ ವುಡ್ ವ್ಯಾಪಾರ, ನಂ.೧೫೯, ೧ ನೇ ಕ್ರಾಸ್, ವಿಜಯ ಬ್ಯಾಂಕ್ ಕಾಲೋನಿ, ಬಸವಪುರ ಮೈನ್ ರೋಡ್, ಕೆ.ಆರ್‍.ಪುರಂ, ಬೆಂಗಳೂರು.

ಆರೋಪಿಗಳು ನೀಡಿದ ಸುಳಿವಿನ ಮೇರೆಗೆ ಕೊಲೆ ಮಾಡಲು ಉಪಯೋಗಿಸಿದ್ದ ಚಾಕು, ಹಗ್ಗ, ಎರಡು ಕಾರ್‍ ಹಾಗೂ ಒಂದು ದ್ವಿಚಕ್ರವಾಹನವನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಮೇಲ್ಕಂಡ ಆರೋಪಿಗಳ ಪೈಕಿ ಲಕ್ಷ್ಮಿಕಾಂತ ಎಂಬುವನು ಮೃತ ವಸಂತ ಕುಮಾರ್‍ ರವರ ತಂಗಿಯ ಗಂಡನಾಗಿದ್ದನು. ತನ್ನ ಹೆಂಡತಿಗೆ ಜಮೀನಿನಲ್ಲಿ ಭಾಗ ಗೊಡಲಿಲ್ಲ ಎಂಬ ಕಾರಣಕ್ಕಾಗಿ ವಸಂತಕುಮಾರ್‍ ನನ್ನು ಕೊಲೆ ಮಾಡುವಂತೆ ಮಹೇಶ್ ಕುಮಾರ್‍, ಗೊಣ್ಣೆ ಕುಮಾರ, ಡಾಮ್ನಿಕ್ ಕುಮಾರ ಹಾಗೂ ಕೋರಂಗ ಎಂಬುವರಿಗೆ ೭೫,೦೦೦ ರುಪಾಯಿಗಳಿಗೆ ಸುಪಾರಿ ನೀಡಿದ್ದರು. ದಿನಾಂಕ ೨೧-೦೭-೨೦೧೭ ರಂದು ಆರೋಪಿಗಳು ವಸಮತಕುಮಾರ್‍ ನನ್ನು ಅಪಹರಸಿಕೊಂಡು ಬಂದು ಎನ್.ಹೆಚ್ ೭೫ ರಸ್ತೆಯ ಮುದಿಗೆರೆ ಸಮೀಪದಲ್ಲಿ ವಸಂತಕುಮಾರ್‍ ನ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿ ನಂತರ ಇದು ಅಪಘಾತವೆಂಬುವಂತೆ ಬಿಂಬಿಸಲು ಕಪ್ಪಲಮಡಗು ಗ್ರಾಮದ ಎನ್.ಹೆಚ್ ೭೫ ರಸ್ತೆಯಲ್ಲಿ ಮೃತದೇಹವನ್ನು ಬಿಸಾಕಿ ಹೊರಟುಹೋಗಿರುತ್ತಾರೆ.

ಕಾರ್ಯಾಚರಣೆ ನಡೆಸಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರನ್ನು ಪೊಲೀಸ್ ವರಿಷ್ಠಧಿಕಾರಿಗಳು ಪ್ರಶಂಸಿರುತ್ತಾರೆ.

Leave a Reply

Your email address will not be published. Required fields are marked *