ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ:06-01-2020

ದಿನಾಂಕ: 05-01-2020 ಸಂಜೆ 04:೦೦ ಗಂಟೆಯಿಂದ ದಿನಾಂಕ: 06-01-2020 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

 

 ಯುವಕ ಕಾಣೆಯಾಗಿರುವ ಬಗ್ಗೆ:

 ಕೋಲಾರ  ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ  ಯುವಕ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ,  ಕೋಲಾರ ತಾಲ್ಲೂಕು ಶಾನುಬೋಗನಹಳ್ಳಿ ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ,  ಸದರಿ ಗ್ರಾಮದ ನಿವಾಸಿಗಳಾದ  ಸುಜಾತಮ್ಮ ಕೋಂ ಲೇಟ್‌ ಶ್ಯಾಮರಾಜ್‌ ಎಂಬುವರ  ಮಗ ಪವನ್ ಎಸ್‌ ಎಂಬುವರು ದಿನಾಂಕ ೦೩-೦೧-೨೦೨೦ ರಂದು  ಮನೆಯಿಂದ ವಡಗೂರ್‌ ಗೇಟ್‌ ಗೆ ಹೋಗುವುದಾಗಿ ಹೇಳಿ ಹೋದವನು ಮರುಳಿ ಮನೆಗೆ  ಬಾರದೇ ಕಾಣೆಯಾಗಿರುತ್ತಾನೆ,

ಕಾಣೆಯಾದ ಯುವಕನ ವಿವರ;

 ಹೆಸರು : ಪವನ್‌ , ಶ್ಯಾನುಬೋಗನಹಳ್ಳಿ, ಕೋಲಾರ ತಾಲ್ಲೂಕು

ಸುಮಾರು  ೫.೪ ಅಡಿ ಎತ್ತರ, ಕಪ್ಪು ಬಣ್ಣ, ಸಾದಾಋಣ ಮೈಕಟ್ಟು,

ಕಪ್ಪು ಬಣ್ಣದ ಅಂಗಿ , ಕನ್ನಡ, ತೆಲುಗು, ತಮಿಳ್, ಇಂಗ್ಲೀಷ್ ಬಾಷೆ ಮಾತನಾಡಬಲ್ಲನು,

 

 ಮಾರಣಾಂತಿಕ ರಸ್ತೆ ಅಪಘಾತ:

  ಮುಳಬಾಗಿಲು ನಗರ ಪೊಲೀಸ್‌ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂದಿಸಿದಂತೆ  ಪ್ರಕರಣ ದಾಖಲಾಗಿರುತ್ತದೆ, ನಿಯರ್‍ ರಾಂಪ್ರಿಯಾ ಸ್ಕೂಲ್‌ , NH-75 ,ಮುಳಬಾಗಿಲು –ಕೋಲಾರ ರಸ್ತೆ,  ಮುಳಬಾಗಿಲು ತಾಲ್ಲೂಕು, ಮೋತಕಪಲ್ಲಿ ಪಂಚಾಯ್ತಿ, ಜೇಗುಹಳ್ಳಿ, ಗ್ರಾಮದ ನಿವಾಸಿಯಾದ,  ಮಾದವ್ರೆಡ್ಡಿ, ಮತ್ತು,  ಜಂಗಮಹೊಸಳ್ಳಿ ಗ್ರಾಮದ ನಿವಾಸಿಯಾದ ನಾರಾಯಣ ಸ್ವಾಮಿ,  ಮತ್ತು ಗುರುಮೂರ್ತಿರೆಡ್ಡಿ ಎಂಬುವರು ದಿನಾಂಕ ೦೫-೦೧-೨೦೨೦ ರಂದು ಹಸುಗಳಿಗೆ ಮೇವು ಕರೀದಿಸಿ ಎ,ಎ,ಎನ್, ೦೫೩೦ಎ,ಎ,ಎನ್, ೭೫೩೧ ಸಂಖ್ಯೆಯ  ಟ್ರಾಕ್ಟರ್‍ ನಲ್ಲಿ ಮೇವು ತುಂಬಿಸಿಕೊಂಡು ನಿಯರ್‍ ರಾಂಪ್ರಿಯಾ ಸ್ಕೂಲ್‌ , NH-75 ,ಮುಳಬಾಗಿಲು –ಕೋಲಾರ ರಸ್ತೆ, ಬಳಿ   ಗ್ರಾಮಕ್ಕೆ ಬರುತ್ತಿರುವಾಗ   ಚಿತ್ತೂರು ಕಡೆಯಿಂದ ಬಂದ  ಪಿ,ವೈ ೦೫, ಇ ೦೫೪೨ ಎಂಬ ಸಂಕ್ಯೆಯ ವಾಹನ ಅತಿವೇಗ ಮತ್ತು ಅಜಾಗರುಕತೆಯ ಚಾಲನೆಯಿಂದ  ಚಾಲನೆ ಮಾಡಿಕೊಂಡು ಬಂದು , ಸದರಿ ಟ್ರಾಕ್ಟರ್‌ ಗೆ ಹಿಂದೆಯಿಂದ ಬಂದು ಡಿಕ್ಕಿ ಹೋಡೆದು, ಅಪಘಾತ ಉಂಟುಮಾಡಿ,  ಸದರಿ ಅಪಘಾತದ ಪರಿಣಾಮ ಟ್ರಾಕ್ಟರ್‌ ಕೆಳಗೆ ಬಿದ್ದು, ಟ್ರಾಕ್ಟರ್‍ ನಲ್ಲಿದ್ದ ಮಾದವ್‌ರೆಡ್ಡಿ ಎಂಬುವರು ಕೆಳಗೆ ಬಿದ್ದು, ತೀವ್ರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ, ಗಾಯಾಳುಗಳಾದ ನಾರಾಯಣಸ್ವಾಮಿ, ಮತ್ತು, ಗುರುಮೂರ್ತಿರೆಡ್ಡಿ ಎಂಬುವರಿಗೆ ಗಾಯಗಳಾಗಿ  ಜಾಲಪ್ಪ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿರುತ್ತಾರೆ,

 

 ಹಲ್ಲೆ ಮತ್ತು ಪ್ರಾನ ಬೆದರಿಕೆ:

 ಕೋಲಾರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಹಲ್ಲೆ ಮತ್ತು ಪ್ರಾಣಬೆದರಿಕೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ಕೋಲಾರ ತಾಲ್ಲೂಕು,  ನಿಯರ್‌ ಕೆಂದಟ್ಟಿ, ಬಳಿ ಘಟನೆ ಸಂಬವಿಸಿರುತ್ತದೆ,  ದಿನಾಂಕ ೦೪-೦೧-೨೦೨೦ ರಂದು ಸುಮಾರು ೧೧:೪೫ ರಲ್ಲಿ ಅಬಿಷೇಕ್‌ ಗೋಪಿನಾಥ್‌ ಎಂಬುವರು ತನ್ನ ಬಾಬತ್ತು ದ್ವಿಚಕ್ರ ವಾಹನದಲ್ಲಿ  ವಡಗೂರು ಬಳಿ ಕಾಪಿ ಶಾಪ್‌ಗೆ  ಹೋಗಿ ಬರುತ್ತಿರುವಾಗ ಯಾರೊ  ಇಬ್ಬರು ಕೆಎ೪೦ಡಬ್ಲೂ೬೪೪೧ ದ್ವಿಚಕ್ರ ವಾಹನದಲ್ಲಿ ಬಂದು  ತನಗೆ ಡಕ್ಕಿ ಹೊಡೆದು, ಕೇಳಿದಕ್ಕೆ , ಅವಾಚ್ಯ ಶಬ್ದಗಳಿಂದ ಬಯದು, ಅರಿತವಾದ ವಸ್ತುವಿನಿಂದ ಹೊಡೆದು, ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿರುತ್ತಾರೆ,

 

Leave a Reply

Your email address will not be published. Required fields are marked *