ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ:07-01-2020

ದಿನಾಂಕ: 06-01-2020 ಸಂಜೆ 04:೦೦ ಗಂಟೆಯಿಂದ ದಿನಾಂಕ: 07-01-2020 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

 ಹಲ್ಲೆ ಮತ್ತು ಪ್ರಾಣ ಬೆದರಿಕೆ:

 ಕೋಲಾರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಹಲ್ಲೆ ಮತ್ತು ಪ್ರಾಣಬೆದರಿಕೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ,  ಕೋಲಾರ ತಾಲ್ಲೂಕು ಚಿಕ್ಕನಹಳ್ಳಿ ಗ್ರಾದ ಸರ್ವೆ ನಂ: ೭೮ ಜಮೀನ್ನ ಬಳಿ ಘಟನೆ ಸಂಬವಿಸಿರುತ್ತದೆ, ಸದರಿ ಗ್ರಾಮದ  ನಿವಾಸಿಗಳಾದ ಅಕ್ಕಯ್ಯಮ್ಮ ಕೊಂ ಅನಂತಪ್ಪ ಎಂಬುವರು  ಸದರಿ ಸರ್ವೆ ನಂಬರ್‌ ಜಮೀನಿನಲ್ಲಿ  ಚಿಕ್ಕ ಗುಡಿಸಿಲು ಕಟ್ಟಿಕೊಂಡು ವಾಸವಿದ್ದು,  ದಿನಾಂಕ ೦೪-೦೧-೨೦೨೦ ರಂದು ಸುಮಾರು  ರಾತ್ರಿ ೧೦:೩೦ ಗಂಟೆ ಸಮಯದಲ್ಲಿ  ಅದೇ ಗ್ರಾಮದ ನಿವಾಸಿಯಾದ ಕುಮಾರ್‌, ಮಿತುನ್ ಕುಮಾರ್‌, ರಘು, ಮಂಜುಳಮ್ಮ, ವಿಶ್ವನಾಥ್, ಎಬುವರು ಅಕರಮವಾಗಿ ಗುಂಪುಕಟ್ಟಿಕೊಂಡು, ಏಕಾ-ಏಕಿ ಅತಿಕ್ರಮವಾಗಿ ಗುಡಿಸಲು ಪ್ರವೇಶಿಸಿ  ಗುಂಪಾಗಿ ಸೇರಿ ಹೊಡೆದು, ಅವಾಚ್ಯ ಶಬ್ದಗಳಿಂದ ಬೈದು,  ಹಲ್ಲೆ ಮಾಡಿ, ಪ್ರಾಣ ಬೆದರಿಕೆ ಹಾಕಿರುತ್ತಾರೆ,

 

 ಸ್ವತ್ತು ನಾಶ:

 ಕೋಲಾರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ  ಸ್ವತ್ತು ನಾಶಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತದೆ,   ೧ ನೇ ಕ್ರಾಸ್, ಮಾಲೂರು ನಗರದಲ್ಲಿ, ಘಟನೆ ಸಂಬವಿಸಿರುತ್ತದೆ,  ಸದರಿ ವಿಳಾಸದ ನಿವಾಸಿಯಾದ  ಕುಮಾರಿ ಕಾವ್ಯ, ಎಂಬುವರು, ಸದರಿ ವಿಳಾಸದಲ್ಲಿ ತನ್ನ ತಂದೆಗೆ ಆಶ್ರಯ ಯೋಜನೆಯಡಿಯಲ್ಲಿ, ಮಂಜುರಾದ  ಮನೆಯಲ್ಲಿ ವಾಸವಿದ್ದು, ಸದರಿ ಮನೆಯ ವಿಚಾರವಾಗಿ [ಪಿರ್ಯಾದಿದಾರರಿಗೂ ಮತ್ತು ಅದೇ ವಿಳಾಸದ  ವನಿತಾ ಎಂಬುವರಿಗೂ ನ್ಯಾಯಾಲಯದಲ್ಲಿ  ಪ್ರಕರಣ ನಡೆಯುತ್ತಿದ್ದು,  ದಿನಾಂಕ ೦೬-೦೧-೨೦೨೦ ರಂದು ಅದೇ ವಿಳಾಸದ ನಿವಾಸಿಗಳಾದ  ವಿನಿತಾ, , ಮಂಜುಳಮ್ಮ, ವಿಜಿಯಮ್ಮ, ಮಂಜುನಾಥ್, ಚೇತನ್‌, ಅಪ್ಪಿ,  ಎಂಬುವರು  ಇನ್ನಿತರೊಡನೆ ಅತಿಕ್ರಮವಾಗಿ   ಗುಂಪುಕಟ್ಟಿಕೊಂಡು, ಜೆ,ಸಿ,ಬಿ, ಯೊಡನೆ ಬಂದು, ಮನೆಯನ್ನು ದ್ವಂಸ ಮಾಡಿ, ಮನೆಯಲ್ಲಿನ ವಿದ್ಯಾಬ್ಯಾಸ ದಾಖಲೆಗಳು, ಒಡವೆ, ವಸ್ತ್ರ, ಎಲ್ವನ್ನು ನಾಶ ಮಾಡಿ,  ಸುಮಾರು ರೂ, ೯ ಲಕ್ಷ , ಸ್ವತ್ತು ನಾಶ ಮಾಡಿರುತ್ತಾರೆ,

Leave a Reply

Your email address will not be published. Required fields are marked *