ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ:08-01-2020

ದಿನಾಂಕ: 07-01-2020 ಸಂಜೆ 04:೦೦ ಗಂಟೆಯಿಂದ ದಿನಾಂಕ: 08-01-2020 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

 

 ಯುವತಿ ಕಾಣೆಯಗಿರುವ ಬಗ್ಗೆ :

 ಮಾಲೂರು  ಪೊಲೀಸ್‌ ಠಾಣೆಯಲ್ಲಿ  ಯುವತಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ,  ಕೋಲಾರ ತಾಲ್ಲೂಕು, ಮಾಲೂರು ನಗರದ ಶಕ್ತಿ ನಗರದಲ್ಲಿ ಘಟನೆ ಸಂಬವಿಸಿರುತ್ತದೆ,  ಸದರಿ ವಿಳಾಸದ ನಿವಾಸಿಯಾದ  ಹೇಮಾವತಿ ಕೊಂ ಭವಾನಿ ಶಂಕರ್‌ ಎಂಬುವರ  ಮಗಲು ಪಲ್ಲವಿ, ಟಿ,ಬಿ, ಎಂಬುವರು ನಗರದ ಸರ್ಕಾರಿ  ಬಾಲಕಿಯರ ಕಾಲೇಜಿನಲ್ಲಿ  ದ್ವಿತಿಯ ಪಿ,ಯು,ಸಿ ವ್ಯಾಸಾಂಗ ಮಾಡಿತ್ತಿದ್ದು,   ದಿನಾಂಕ ೦೬-೦೧-೨೦೨೦ ರಂದು ಎಂದಿನಂತೆ ಕಾಲೇಜಿಗೆ ಹೋಗಿ ಮರುಳಿ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ,

 

 ವ್ಯಕ್ತಿ ಕಾಣೆಯಾಗುರುವ ಬಗ್ಗೆ:

 ಕೋಲಾರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ  ವ್ಯಕ್ತಿ ಕಾಣೆಯಾಗಿರುವ  ಬಗ್ಗೆ  ಪ್ರಕರಣ ದಾಖಲಾಗಿರುತ್ತದೆ,  ಕೋಲಾರ ತಾಲ್ಲೂಕು ಭಟ್ರಹಳ್ಳಿ, ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ,  ಸದರಿ ಗ್ರಾಮದ ನಿವಾಸಿಯಾದ  ಚಂದ್ರಶೇಖರ್‌ ಬಿನ್  ಬಿಸೇಗೌಡ ಎಂಬುವರ ತಂದೆಯಾದ ಬಿಸೇಗೌಡ ಎಂಬುವರು ದಿನಾಂಕ ೦೭-೧೨-೨೦೧೯ ರಂದು ಕೋಲಾರದ ಚೊಕ್ಕ ಕನ್ವೆಂಷನಲ್‌ ಹಾಲ್‌ ಗೆ ಮದುವೆಗೆ ಹೋದವರು ಮರುಳಿ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ,

 

 ಯುವತಿ  ಕಾಣೆಯಗಿರುವ ಬಗ್ಗೆ :

  ಕೋಲಾರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಯುವತಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ,  ಕೋಲಾರ ತಾಲ್ಲುಕು ಕೂಟೇರಿ ಮಜರಾ ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ, ಸದರಿ ಗ್ರಾಮದ ನಿವಾಸಿಯಾದ  ನಾರಾಯಣಸ್ವಾಮಿ ಬಿನ್ ನಾಗಪ್ಪ ಎಂಬುವರ ಮಗಳು ಲಾವಣ್ಯ ಎಂಬುವರು ೧೦ ನೇ ತರಗತಿ ವ್ಯಾಸಂಗ ಮಾಡಿದ್ದು,  ಪ್ರಸ್ತುತ ಮನೆಯಲ್ಲಿಯೇ ಇದ್ದು ಕೂಲಿ ಕೆಲಸ ಮಾಡಿಕೊಂಡಿದ್ದು,  ದಿನಾಂಕ ೦೬-೦೧-೨೦೨೦ ರಂದು ಮನೆಯಿಂದ ಹೊರಗೆ ಹೋದವಳು ಮರುಳಿ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ,  ಪಿರ್ಯಾದಿದಾರರು ೯೬೧೧೬೩೯೦೦೮ ನಂಬರ್‌ ಬಳಕೆದಾರರ ಮೇಲೆ ಅನುಮಾನ ವ್ಯಕ್ತ ಪಡಿಸಿರುತ್ತಾರೆ.

Leave a Reply

Your email address will not be published. Required fields are marked *