ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ:09-01-2020

ದಿನಾಂಕ: 08-01-2020 ಸಂಜೆ 04:೦೦ ಗಂಟೆಯಿಂದ ದಿನಾಂಕ: 09-01-2020 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

 

  ಹಲ್ಲೆ ಮತ್ತು ಪ್ರಾಣ ಬೆದರಿಕೆ:

 ಮುಳಬಾಗಿಲು ನಗರ ಪೊಲೀಸ್‌ ಠಾಣೆಯಲ್ಲಿ  ಹಲ್ಲೆ ಮತ್‌ಉ ಪ್ರಾಣಬೆದರಿಕೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ,  ಮುಳಬಾಗಿಲು ನಗರದ ಪ್ಲೈಓವರ್‍ ಸರ್ಕಲ್‌ ಬಳಿ ಘಟನೆ ಸಂಬವಿಸಿರುತ್ತದೆ,  ಮುಳಬಾಗಿಲು ತಾಲ್ಲೂಕು  ಕೆ ಬೈಯಪ್ಪಲ್ಲಿ  ರಸ್ತೆ  ಮುತ್ಯಾಲ ಪೇಟೆಯ ನಿವಾಸಿಯಾದ  ವೆಂಕಟರವಣಪ್ಪ ಎಂಬುವರ ಹೆಂಡತಿ ಅನಾರೊಗ್ಯದಿಂದ ಆಸ್ಪತ್ರೆಯಲ್ಲಿ ಸುಮಾರು ೯೮ ತಿಂಗಳಿಂದ  ಚಿಕಿತ್ಸೆ  ಪಡೆದು ಚಿಕಿತ್ಸೆ ಪಲಕಾರಿಯಾಗದೇ ಮೃತರಾಗಿದ್ದು, ಸದರಿ ಚಿಕಿತ್ಸೆಗೆ ಎಂದು ಮೃತರ ತಮ್ಮ  ತನ್ನ ಮಾವನ ಕೈಗೆ  ಸುಮಾರು ೩೦೦೦೦೦ ರೂ ಕೊಟ್ಟಿದ್ದು , ಸದರಿ ಹನವನ್ನು ವಾಪಸ್ಸು ಮಾಡು ಎಂದು ದಿನಂಪ್ರತಿ ಪೀಡಿಸುತ್ತಿದ್ದು, ದಿನಾಂಕ ೦೫-೦೧-೨೦೨೦ ರಂದು ೧೨:೦೦ ಗಂಟೆ ಸಮಯದಲ್ಲಿ ಮುಳಬಾಗಿಲು ಪ್ಲೈಓವರ್‌ ಸರ್ಕಲ್‌ ಬಳಿ ಮನೆಗೆ ಹೋಗುತ್ತಿದ್ದಾಗ ಬಾಮೈದ ಮಂಜುನಾಥ್‌ ಎಂಬುವರು ಹಣ ಹಿಂತಿರುಗಿಸು ಎಂದು ಪೀಡಿಸಿ , ಗಲಾಟೆ ಮಾಡಿ , ಅವಾಚ್ಯ ಶಬ್ದಗಳಿಂದ ಬೈದು , ಕೈಗಳಿಂದ ಹೊಡೆದು ,ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿರುತ್ತಾರೆ,

 

  ಹಲ್ಲೆ ಮತ್ತು ಪ್ರಾಣ ಬೆದರಿಕೆ :

 ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮತ್ತು ಪ್ರಾಣ ಬೆದರಿಕೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ,  ಮಾಲೂರು ತಾಲ್ಲುಕು , ವಕ್ಕಲೇರಿ ಹೋಬಳಿ,  ಉದಯ್‌ ಗಾರ್ಡನ್‌ ಬಾರ್‍ ಮುಂಬಾಗ ಘಟನೆ ಸಂಬವಿಸಿರುತ್ತದೆ, , ಮುಳಬಾಗಿಲು ತಾಲ್ಲೂಕು ವಕ್ಕಲೇರಿ ಹೋಬಳಿ, ಶ್ಯಾವನಹಳ್ಳಿ ಗ್ರಾಮದ ನಿವಾಸಿಯಾದ  ಮನೋಹರ್‌ ಬಿನ್ ನಾಗರಾಜು ಎಂಬುವರು ದಿನಾಂಕ  ೦೭-೦೧-೨೦೨೦ ರಂದು ಸುಮಾರು ರಾತ್ರಿ ೦೮:೪೫ ಸಮಯದಲ್ಲಿ  ಸದರಿ ಬಾರ್‍ ಬಳಿ ನಿಂತ್ತಿದ್ದಿದ್ದಾಗ   ಕ್ಶುಲ್ಲಕ ಕಾಋಣಕ್ಕೆ  ಕಿರಣ್ ಕುಮಾರ್‍  ಮತ್ತು ಅರುಣ್ ಕುಮಾರ್‌ ಇಬ್ಬರು, ಕುಡಿದ ಅಮಲಲ್ಲಿ ನಮ್ಮ ಊರಿನ ಹೆಸರು ಹೇಳಿ, ತಮ್ಮ ಬಳಿ ಇದ್ದ ಬೀರ್‌ ಬಾಟಲ್‌ ಗಳಿಂದ  ತಲೆಗೆ ಹೊಡೆದು ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿರುತ್ತಾರೆ,

 

Leave a Reply

Your email address will not be published. Required fields are marked *