ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ:13-01-2020

ದಿನಾಂಕ: 12-01-2020 ಸಂಜೆ 04:೦೦ ಗಂಟೆಯಿಂದ ದಿನಾಂಕ: 13-01-2020 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

 

  ಹಲ್ಲೆ ಮತ್ತು ಪ್ರಾಣ ಬೆದರಿಕೆ:

 ಮುಳಬಾಗಿಲು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ  ಹಲ್ಲೆ ಮತ್ತು ಪ್ರಾಣ ಬೆದರಿಕೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ,  ಮುಳಬಾಗಿಲು ತಾಲ್ಲೂಕು , ಚೋಳಂಗುಂಟೆ ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ,  ಸದರಿ ಗ್ರಾಮದ ನಿವಾಸಿಯಾದ  ಸುಮಿತ್ರಮ್ಮ  ಕೊಂ ಕೃಷ್ನಪ್ಪ ಎಂಬುವರು ದಿನಾಂಕ ೧೨-೦೧-೨೦೨೦ ರಂದು ಬೆಳಿಗ್ಗೆ ಸುಮಾರು ೦೮:೦೦ ಗಂಟೆ ಸಮಯದಲ್ಲಿ  ನೀರಿಗಾಗಿ ಹೋಗುತ್ತಿದ್ದಾಗ  ಗ್ರಾಮದಲ್ಲಿ ಹಣದ ವಿಚಾರವಾಗಿ  ಗಲಾಟೆಗಳಿದ್ದು, ಅದೇ ಗ್ರಾಮದ ನಿವಾಸಿಗಳಾದ ೧) ವೆಂಕಟರಾಮಪ್ಪ , ೨) ಯಲ್ಲಮ್ಮ, ೩) ಗಂಗೋತ್ರಿ, ೪) ಶೃತಿ, ೫)ತೇಜ ೬) ಕಿರಣ್,  ಎಂಬುವರು  ಪಿರ್ಯಾದಿದಾರರನ್ನು ಅವಾಚ್ಯ ಶಬ್ದಗಳಿಂದ ಬೈದು, ಜಗಳ ತೆಗೆದು, ಕೈಗಳಿಂದ ಕೊಡೆದು, ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿ ಪ್ರಾಣ ಬೆದರಿಕರ ಹಾಕಿರುತ್ತಾರೆ,

 

ವ್ಯಕ್ತಿ ಕಾಣೆಯಾಗಿರುವ ಬಗ್ಗೆ;

 ಕೋಲಾರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ  ವ್ಯಕ್ತಿ ಕಾಣೆಯಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ,  ಕೋಲಾರ  ತಾಲ್ಲುಕು ಪಾರೇಹೊಸಳ್ಲಿ ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ,   ದಿನಾಂಕ ೧೧/೦೮/೨೦೧೯ ರಂದು ಹೊಸಹೂಡ್ಯ ಗ್ರಾಮ, ದೇವನಹಳ್ಳಿ ತಾಲ್ಲೂಕು , ಬೆಂಗಳೂರು ಗ್ರಾಮಾಂತರ ಜಿಲ್ಲೆ ಯ ನಿವಾಸಿಯಾದ ಲಕ್ಷ್ಮಿ ಎಂಬುವರನ್ನು ಪಾರೇಹೊಸಳ್ಲಿ ಗ್ರಾಮದ ನಿವಾಸಿಯಾದ ಚಲಪತಿ ಎಂಬುವರು ವಿವಾಹ ವಾಗಿದ್ದು, ದಿನಾಂಕ ೧೧-೧೧-೨೦೧೯ ರಂದು ಬೆಳಿಗ್ಗೆ ಸುಮಾರು ೮:೩೦ ಸಮಯದಲ್ಲಿ ಮನೆಯಿಂದ ಹೊರಗಡೆ ಹೋದವರು ಮರುಳಿ ಮನೆಗೆ ಬಾರದೇ  ಕಾಣೆಯಾಗಿರುತ್ತಾರೆ,

 

ಹಲ್ಲೆ ಮತ್ತು ಪ್ರಾಣ ಬೆದರಿಕೆ:

 ಶ್ರೀನಿವಾಸಪುರ ಪೊಲೀಸ್‌ ಠಾಣೆಯಲ್ಲಿ  ಹಲ್ಲೆ ಮತ್ತು ಪ್ರಾಣ ಬೆದರಿಕೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ,  ಶ್ರೀನಿವಾಸಪುರ ತಾಲ್ಲೂಕು ತಾಡಗೋಳ್‌ ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ,  ದಿನಾಂಕ ೧೨-೧-೨೦೨೦ ರಂದು ಸುಮಾರು ೫:೩೦ ಗಂಟೆ ಸಮಯದಲ್ಲಿ ಸದರಿ ವಿಳಾಸದ ನಿವಾಸಿಯಾದ ವೆಂಕಟರಾಮಪ್ಪ ಎಂಬುವರ ಮೇಲೆ ಅದೇ ಗ್ರಾಮದ ನಿವಾಸಿಯಾದ ಪರಮೇಶ ಬಿನ್ ಕೃಷ್ಣಪ್ಪ ಎಂಬುವರು ಹಳೇ ದ್ವೇಷದ ಹಿನ್ನೆಲೆಯಲ್ಲಿ , ಅವಾಚ್ಯ ಶಬ್ದಗಳಿಂದ ಬೈದು, ಏಕಾ-ಏಕಿ ಕಲ್ಲಿನಿಂದ ತಲೆಯ ಹಿಂಬಾಗಕ್ಕೆ ಹೊಡೆದು , ರಕ್ತ ಗಾಯ ಮಾಡಿ , ಪ್ರಾಣಬೆದರಿಕೆ ಹಾಕಿರುತ್ತಾರೆ,

Leave a Reply

Your email address will not be published. Required fields are marked *