ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ ೦೮-೦೭-೨೦೧೯

ದಿನಾಂಕ ೦೭-೦೭-೨೦೧೯ ಸಂಜೆ ೦೪:೦೦ ಗಂಟೆಯಿಂದ ದಿನಾಂಕ ೦೮-೦೭-೨೦೧೯ ರ ಸಂಜೆ ೦೪:೦೦ ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

ಜೂಜಾಟ ದಾಳಿ: ೦೬ ಜನರ ಬಂಧನ ರೂ ೨೧,೫೦೦ ವಶ

ವೇಮಗಲ ಪೊಲೀಸ್ ಠಾಣೆಯಲ್ಲಿ ಜೂಜಾಟಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲ್ಲೂಕು  ನರಸಾಪುರ ಹೋಬಳಿ ಎಪಿಸ್ ಕಾಂಪ್ಲಾಕ್ಸ್ ಹಿಂಬಾಗ  ಅಚ್ಚಟ್ನಹಳ್ಳಿ ಬಳಿ ಘಟನೆ ಸಂಬವಿಸಿರುತ್ತದೆ. ದಿನಾಂಕ  ೦೮-೦೭- -೨೦೧೯ ರಂದು ಕಚಿತ ಮಾಹಿತಿ ಮೇರೆಗೆ  ಹೆಚ್ ಸಿ ೧೯೭ಜಗದೀಶ್, ಪಿ ಸಿ ೬೮೨ ವೆಂಕಟಾಚಲಪತಿ ಪಿ ಸಿ ೪೮೧ ಬಾಲಾಜಿ , ಪಿ ಸಿ ೩೬೦ ಮರೇಗೌಡ , ಪಿ ಸಿ  ೬೯೪ ಮುನಿಯಪ್ಪ , ರವರು   ಸರ್ಕಾರಿ ಜೀಪ್ ಸಂಖ್ಯೆ ಕೆ ಎ ೦೭ ಜಿ ೭೩೦ ನಲ್ಲಿ ದಿನಾಂಕ  ೦೮-೦೭-೨೦೧೯ ರಂದು ಸುಮಾರು  ೧೮:೩೦ ಗಂಟೆ ಸಮಯದಲ್ಲಿ ಕೋಲಾರ ತಾಲ್ಲೂಕು  ನರಸಾಪುರ ಹೋಬಳಿ ಎಪಿಸ್ ಕಾಂಪ್ಲಾಕ್ಸ್ ಹಿಂಬಾಗ  ಅಚ್ಚಟ್ನಹಳ್ಳಿ ಬಳಿ ಅಕ್ರಮವಾಗಿ ೦೬ಜನರು ಹಣವನ್ನು ಮದ್ಯ ಇಟ್ಟು ಸುತ್ತಲೂ ಕುಳಿತು ಇಸ್ಪೀಟ್ ಎಲೆಗಳಿಂದ ಜೂಜಾಟ ಆಡುತ್ತಿದ್ದು ಇವರನ್ನು ಗುಪ್ತವಾಗಿ ಬಂದ ಸಿಬ್ಬಂದಿ ಕೂಡಲೆ ದಾಳಿಮಾಡಿ ೦೬ ಜನರ ಬಂಧನ ರೂ ೨೧,೫೦೦ ವಶಪಡಿಸಿಕೊಂಡಿರುತ್ತಾರೆ.

ಬಂದಿತರಾದ ಆರೋಪಿಗಳ ವಿವರ:

೧) ಶ್ರಿನಾಥ್  ಅಚ್ಚಟ್ನಹಳ್ಳಿ  (ಗ್ರಾಮ ) ಕೋಲಾರ ತಾಲ್ಲೂಕು  .

೨)  ಮಂಜುನಾಥ್ .  ಅಚ್ಚಟ್ನಹಳ್ಳಿ  (ಗ್ರಾಮ ) ಕೋಲಾರ ತಾಲ್ಲೂಕು  .

೩) ಬೈರೇಗೌಡ   ಅಚ್ಚಟ್ನಹಳ್ಳಿ  (ಗ್ರಾಮ ) ಕೋಲಾರ ತಾಲ್ಲೂಕು

೪) ನವೀನ್ ಕುಮಾರ್‍   ಅಚ್ಚಟ್ನಹಳ್ಳಿ  (ಗ್ರಾಮ ) ಕೋಲಾರ ತಾಲ್ಲೂಕು  .

೫)  ರವಿ   ಗೇರುಪುರ ಅಚ್ಚಟ್ನಹಳ್ಳಿ  (ಗ್ರಾಮ ) ಕೋಲಾರ ತಾಲ್ಲೂಕು

೬) ಸ್ಕಾರ್ಪ್ ಶಿವು   ಅಚ್ಚಟ್ನಹಳ್ಳಿ  (ಗ್ರಾಮ ) ಕೋಲಾರ ತಾಲ್ಲೂಕು

 

ಬೆಳೆ ನಾಶ :

ಶ್ರಿನಿವಾಸಪುರ ಪೊಲೀಸ್ ಠಾಣೆಯಲ್ಲಿ ಬೆಳೆ ನಾಶ  ಸಂಬಂದಿಸಿದಂತೆ  ಪ್ರಕರಣ  ದಾಖಲಾಗಿರುತ್ತದೆ. ಶ್ರಿನಿವಾಸಪುರ ತಾಲ್ಲೂಕು ಪೇಗಲಪಲ್ಲಿ ಗ್ರಾಮದಲ್ಲಿ ಬಳಿ ಘಟನೆ ಸಂಬವಿಸಿರುತ್ತದೆ. ಪೇಗಲಪಲ್ಲಿ ಗ್ರಾಮದ ಸಮೀಪವಿರುವ ದೊಡ್ಡಗಾಜಲು ದಿನ್ನೆ ಯ ಸರ್ವೆ ನಂ :೧೪ ರಲ್ಲಿ ಸುಮಾರು ೩ ಎಕರೆ   ಜಮೀನಿನಲ್ಲಿ ಪಪ್ಪಾಯ  ಮರಗಳನ್ನು  ಬೆಳೆಸಿದ್ದು  ದಿನಾಲು ಅದಕ್ಕೆ ನಾನೆ ಕಾವಲುಇರುತ್ತಿದ್ದು  ದಿನಾಂಕ ೦೮-೦೭-೨೦೧೯ ರಂದು ಮದ್ಯಾಹ್ನ ಊಟ ಮಾಡಲು ಮನೆಗೆ ಹೋಗಿದ್ದು ಸಂಜೆ ೧೭:೦೦ ಗಂಟೆ ಸಮಯದಲ್ಲಿ  ಬಂದು ತೋಟ ನೋಡಿದಾಗ  ಯಾರೊ ದುಷ್ಕರ್ಮಿಗಳು  ಸುಮಾರು ೪೦೦  ಪಪ್ಪಾಯ  ಮರಗಳನ್ನು   ಕಡಿದು ಬೆಳೆ ನಾಶಮಾಡಿರುತ್ತಾರೆ. ಸುಮಾರು ೪೦೦  ಪಪ್ಪಾಯ  ಮರಗಳ ಬೆಲೆ ರೂ  ೨೦೦೦೦೦ ಗಳಾಗಿರುತ್ತವೆ.

 

ಕಳವು :

ಶ್ರಿನಿವಾಸಪುರ ಪೊಲೀಸ್ ಠಾಣೆಯಲ್ಲಿ ಕಳವುಗೆ    ಸಂಬಂದಿಸಿದಂತೆ  ಪ್ರಕರಣ  ದಾಖಲಾಗಿರುತ್ತದೆ. ಶ್ರಿನಿವಾಸಪುರ  ತಾಲ್ಲೂಕು ಯಲ್ದೂರು ಗ್ರಾಮದಲ್ಲಿ ಬಳಿ ಘಟನೆ ಸಂಬವಿಸಿರುತ್ತದೆ. ಯಲ್ದೂರು ಗ್ರಾಮದ ವಾಸಿಯಾದ ಜಯ್ಯಣ್ಣ ಬಿನ್ ತಿಮ್ಮಯ್ಯ  ರವರು ದಿನಾಂಕ ೦೭-೦೭-೨೦೧೯ ರಂದು ಮುಂಜಾನೆ ೫:೦೦ ಗಂಟೆಗೆ ತಮ್ಮ ಮಕ್ಕಳನ್ನು ನೋಡಿಬರಲು ಬೆಂಗಳೂರಿಗೆ  ಹೊಗಿದ್ದು ನಂತರದ ದಿನ ದಿನಾಂಕ ೦೮ -೦೭-೨೦೧೯ ರಂದು ಮನೆಗೆ ಬಂದು ನೋಡಿದಾಗ ಮನೆಯ ಬೀಗ ಹೊಡೆದು ಮನೆಯಲ್ಲಿಟ್ಟಿದ್ದ ೯ ಜೊತೆ ಓಲೆ,೧ ಜೊತೆ ಜುಮುಕಿ ,೧ಮುತ್ತಿನಸರ , ೪ ಉಂಗುರಗಳು ,ಬ್ರಾಸ್ಲೈಟ್, ೧ ಚಿನ್ನದ ಜಡೆಕುಚ್ಚು,  ೨ಚೈನು, ೧ ನಕ್ಲೀಸ್,೧ಕೊರಳು ಚೈನು,  ಮತ್ತು ೧ಕೆಜಿ ೭೫೦ಗ್ರಾಂ ಬೆಳ್ಳಿ , ಯನ್ನು ಯಾರೊ ಕಳ್ಳರು  ಕಳವು ಮಾಡಿ ಪರಾರಿಯಾಗಿರುತ್ತಾರೆ. ಒಟ್ಟು ಬಂಗಾರ ಮತ್ತು ಬೆಳ್ಳಿ ಯ ಮೊತ್ತ ಸುಮಾರು ರೂ ೯,೭೮,೦೦೦  ಗಳಾಗಿರುತ್ತವೆ.

Leave a Reply

Your email address will not be published. Required fields are marked *