ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ ೧೦-೦೭-೨೦೧೯

 

ದಿನಾಂಕ ೦೯-೦೭-೨೦೧೯ ಸಂಜೆ ೦೪:೦೦ ಗಂಟೆಯಿಂದ ದಿನಾಂಕ ೧೦-೦೭-೨೦೧೯ ರ ಸಂಜೆ ೦೪:೦೦ ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

ಹಲ್ಲೆ ಮತ್ತು ಪ್ರಾಣ ಬೆದರಿಕೆ:

ಗಲ್‌ಪೇಟೆ ಪೋಲಿಸ್ ಠಾಣೆಯಲ್ಲಿ ಹಲ್ಲೆ ಮತ್ತು  ಪ್ರಾಣ ಬೆದರಿಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ನಗರದ ಮಿಲ್ಲಾತ್ ನಗರ ದ ಬಳಿ ಘಟನೆ ಸಂಬವಿಸಿರುತ್ತದೆ.ದಿನಾಂಕ ೦೯-೦೭-೨೦೯ ರಂದು ಸುಮಾರು ೧೩;೩೦ಗಂಟೆ ಸಮಯದಲ್ಲಿ ಕೋಲಾರ ನಗರದ ರೆಹಮತ್ ನಗರದ ವಾಸಿಯಾದ ಪ಼಼ರ್ಜಾನ ರವರು ಮಿಲ್ಲಾತ್ ನಗರ ದ ಸುರೈನಾ ರವರಿಗೆ ಸಂಘದ ಹಣ ಕೊಟ್ಟು ಮನೆಯಂದ  ಬರುತ್ತಿರುವಾಗ ಕೋಲಾರ ನಗರದ ಮಿಲ್ಲಾತ್ ನಗರ ದ ವಾಸಿಯಾದ  ಅಸ್ಲಂ ಎಂಬುವನು ದುರುದ್ದೇಶದಿಂದ  ಪ಼಼ರ್ಜಾನ ರನ್ನು ಛೇಡಿಸಿದ್ದಾನೆ ,ಆಗ ಪ಼಼ರ್ಜಾನ ರವರು ಹೀಗೆಲ್ಲಾ ಅಸಬ್ಯವಾಗಿ ಆಡಿದರೆ ನಾನು ನನ್ನ ಗಂಡನಿಗೆ ಹೇಳುತ್ತೇನೆ  ಎಂದಾಗ  ಅಸ್ಲಂ ಏಕಾ ಏಕಿ ಕಬ್ಬಿಣದ ರಾಡ್ ನಿಂದ ಪ಼಼ರ್ಜಾನ ರವರ ತಲೆಗೆ ಹೊಡೆದು ರಕ್ತ ಗಾಯ ಮಾಡಿ  ಸಾಯಿಸಿಬಿಡುವುದಾಗಿ ಪ್ರಾಣಬೆದರಿಕೆ  ಹಾಕಿರುತ್ತಾನೆ.

 

 ಮಹಿಳೆ ಕಾಣೆಯಾಗಿರುವ ಬಗ್ಗೆ:

ಕೋಲಾರ ಗ್ರಾಮಾಂತರ ಪೊಲಿಸ್ ಠಾಣೆಯಲ್ಲಿ ಮಹಿಳೆ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಕೊಲಾರ ತಾಲ್ಲೂಕು ಹೆಚ್ ಜಿ ಹೊಸುರು ಗ್ರಾಮದಲ್ಲಿ ಘಟನೆ ಸಂಭವಿಸಿರುತ್ತದೆ. ಕೊಲಾರ ತಾಲ್ಲೂಕು ಹೆಚ್ ಜಿ ಹೊಸುರು ಗ್ರಾಮದ ವಾಸಿಯಾದ ಗೋವಿಂದಪ್ಪ ಬಿನ್ ಲೆಟ್ ವೆಮಕಟಪ್ಪ   ರವರ ಮಗಳಾದ ಭವಾನಿ (೨೪) ರವರು,  ದಿನಾಂಕ ೮-೦೭-೨೦೧೯ ರಂದು  ಮದ್ಯಾಹ್ನ ೧೨:೦೦ ಗಂಟೆ ಸಮಯದಲ್ಲಿ ಹೊರಗಡೆ  ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೋದವಳು ಮತ್ತೆ ಮನೆಗೆ ವಾಪಸ್ಸು ಬಾರದೆ ಕಾಣೆಯಾಗಿರುತ್ತಾಳೆ.

ಕಾಣೆಯಾಗಿರುವ ಮಹಿಳೆಯ ವಿವರ:

ಸಾದಾರಣ ಮೈಕಟ್ಟು,  ಕಪ್ಪು ಬಣ್ಣ, ಕೊಲು ಮುಖ ,  ಎತ್ತರ ೫ ಅಡಿ,

Leave a Reply

Your email address will not be published. Required fields are marked *