ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ:03-06-2020

ದಿನಾಂಕ: 02-06-2020 ಸಂಜೆ 04:೦೦ ಗಂಟೆಯಿಂದ ದಿನಾಂಕ: 03- 06-2020 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ

 

ಹಲ್ಲೆ ಮತ್ತು ಪ್ರಾಣ ಬೆದರಿಕೆ:

ಗೌನಿಪಲ್ಲಿ  ಪೊಲೀಸ್ ಠಾಣೆಯಲ್ಲಿ  ಹಲ್ಲೆ ಮತ್ತು ಪ್ರಾಣ ಬೆದರಿಕೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ಶ್ರೀನಿವಾಸಪುರ ತಾಲ್ಲೂಕು ಕಾಶೆಟ್ಟಿಪಲ್ಲಿ ಗ್ರಾಮದ ಸರ್ವೆ ನಂ: ೧೫೦/೦೩ ಬಳಿ ಘಟನೆ ಸಂಬವಿಸಿರುತ್ತದೆ,  ಸದರಿ ಗ್ರಾಮದ ವಾಸಿಯಾದ ಎನ್. ವೆಂಕಟಸ್ವಾಮಿ ಬಿನ್ ಲೇಟ್ ನಾರಾಯಣಪ್ಪ ಎಂಬವರು   ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ ವೇನೆಂದರೆ. ತನ್ನ ಪಿತ್ರಾರ್ಜಿತ  ಸುಮಾರು ೧೪-೧೫ ಎಕರೆ ಜಮೀನು ತಮ್ಮ ತಂದೆಯ ಹೆಸರಿನಲ್ಲಿಯೇ ಇದ್ದು, ಸದರಿ ಜಮಿನಲ್ಲಿ ತಾವು ಅನುಭವದಲ್ಲಿರುವ ಜಮೀನಿನಲ್ಲಿ ಸುಮಾರು ಒಂದುವರೆ ಎಕರೆಯಲ್ಲಿ ಮಾವಿನ ಗಿಡ ಬೆಳೆಸಿದ್ದು, ಸದರಿ ಜಮೀನಿನ ವಿಚಾರವಾಗಿ  ಪಿರ್ಯಾದಿ ಮೇಲೆ ಅದೇ ಗ್ರಾಮದ ವಾಸಿಗಳು  ಹಾಗೂ ತನ್ನ ಅಣ್ಣಮತ್ತು ಮಕ್ಕಳು  ದಿನಾಂಕ ೦೩-೦೬-೨೦೨೦ ರಂದು  ಪಿಯಾರ್ಧಿಯ ಮೇಲೆ ಗಲಾಟೆ ಮಾಡಿ, ದೊಣ್ಣೆಗಳಿಂದ ಹೊಡೆದು,  ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.

ಆರೋಪಿಗಳ ವಿವರ:

೧) ಮೋಹನ್ , ಬಿನ್ ವೆಂಕಟರೆಡ್ಡಿ, ಶ್ರೀನಿವಾಸಪುರ ತಾಲ್ಲೂಕು ಕಾಶೆಟ್ಟಿಪಲ್ಲಿ ಗ್ರಾಮ

೨) ವೆಂಕಟರೆಡ್ಡಿ ಬಿನ್ ಲೇಟ್ ನಾರಾಯಣಪ್ಪ , ಶ್ರೀನಿವಾಸಪುರ ತಾಲ್ಲೂಕು ಕಾಶೆಟ್ಟಿಪಲ್ಲಿ ಗ್ರಾಮ

೩) ಮಂಜುನಾಥ ಬಿನ್ ನಾರಾಯಣಸ್ವಾಮಿ, ಶ್ರೀನಿವಾಸಪುರ ತಾಲ್ಲೂಕು ಕಾಶೆಟ್ಟಿಪಲ್ಲಿ ಗ್ರಾಮ

 

 

ಮಾರಣಾಂತಿಕ ರಸ್ತೆ ಅಪಘಾತ:

ವೇಮಗಲ್ ಪೊಲೀಸ್ ಠಾಣೆಯಲ್ಲಿ  ಮಾರಣಾಂತಿಕ ರಸ್ತೆ ಅಪಘಾತಕ್ಕೆ  ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ನಿಯರ್‍  ಇಂಡಿಯನ್ ಪೆಟ್ರೋಲ್ಬಂಕ್, ಕೋಲಾರ ಚಿಕ್ಕಬಳ್ಳಾಪುರ ರಸ್ತೆ, ವೇಮಗಲ್, ಬಳಿ ಘಟನೆ ಸಂಬವಿಸಿರುತ್ತದೆ, ಚಿಕ್ಕಂಡಹಲ್ಲಿ ಗ್ರಾಮ, ನಂದಗುಡಿ ಹೋಬಳಿ, ಹೋಸಕೋಟೆ ತಾ, ಬೆಂಗಳೂರು  ನಿವಾಸಿಯಾದ ಅವಿನಾಶ್‌ ಸಿ,ಎ ಎಂಬುವರು ದಿನಾಂಕ ೦೩-೦೬-೨೦೨೦ ರಂದು ಠಾಣಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯ  ದೊಡ್ಡಪ್ಪನ ಮಗನಾದ ರವಿ ಕುಮಾರ್‍ ಎಂಬುವರು ದಿನಾಂಕ ೦೨-೦೬-೨೦೨೦ ರಂದು ಕೆ,ಎ೫೩ ಇ ೧೮೧೮ ಬುಲೆಟ್ ದ್ವಿಚಕ್ರ ವಾಹನದಲ್ಲಿ ಅದೇ ಗ್ರಾಮದ ವಾಸಿಯಾದ  ಸಾದಿಕ್ ಪಾಷ  ಎಂಬುವರೊಂದಿಗೆ ಸದರಿ ದ್ವಿಚಕ್ರ ವಾಹನದಲ್ಲಿ  ಕೋಲಾರಕ್ಕೆ ಬಂದು ಮರುಳಿ ಮನೆಗೆ ಬರುತ್ತಿರುವಾಗ ಅತಿವೇಗಮತ್ತು ಅಜಾಗರುಕತೆ ಚಾಲನೆಯಿಂದ ರವಿಕುಮಾರ್‍ ದ್ವಿಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಬಂದು  ರಸ್ತೆಯ ಮದ್ಯೆಯ  ಡಿವೈಡರ್‍ಗೆ ಹೊಡೆದು ವಾಹನ ಸಮೇತ ಕೆಳಗೆ ಬಿದ್ದು, ತೀವ್ರ ಗಾಯವಾಗಿದ್ದು, ಚಿಕಿತ್ಸೆಗೆ ಬೆಂಗಳೂರು ಹೆಲ್ತ್ ಇಂಡಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಪಲಕಾರಿಯಾಗದೆ ೦೩-೦೬-೨೦೨೦ ರಂದು ಸಾದಿಕ್ ಪಾಷ ಮರಣ ಹೊಂದಿರುತ್ತಾರೆ,

ಕೊಲೆ:

ಮಾಲೂರು ಪೊಲೀಸ್ ಠಾಣೆಯಲ್ಲಿ ಕೊಲೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ಮಾಲೂರು ತಾಲೂಕು, ಆಲಂಬಾಡಿ ಗ್ರಾಮದ ಸೊಸೌಟಿ ಗೋಪಾಲಪ್ಪ ಲ್ಯಾಂಡ್ ಬಳಿ  ಘಟನೆ ಸಂಬವಿಸಿರುತ್ತದೆ,  ಮಾಲೂರು ತಾಲೂಕು, ಆಲಂಬಾಡಿ ಗ್ರಾಮದ ವಾಸಿಯಾದ  ರಾಮದಾಸ್ ಬಿನ್ ಲೇಟ್ ವೆಂಕಟೇಶಪ್ಪ ಎಂಬುವರು ರಂದು ಠಾಣೆಗೆ ಹಾಜರಾಗಿ ನೀಡುದ ದೂರಿನ ಸಾರಾಂಶವೇನೆಂದರೆ,  ದಿನಾಂಕ ೦೩-೦೬-೨೦೨೦ ರಂದು  ಸದರಿ ಗ್ರಾಮದ ನಿವಾಸಿಯಾದ  ಸುನೀಲ್ ಎಂಬುವರು ಅದೆ ಗ್ರಾಮದ ವಾಸಿಯಾದ ವಜ್ರಸ್ವಾಮಿ ಎಂಬುವರ ಕಾರಿಗೆ ಚಾಲಕನಾಗಿದ್ದು, ಅದರಂತೆ ದಿನಾಂಕ ೦೩-೦೬-೨೦೨೦ ರಂದು ವಜ್ರಸ್ವಾಮಿ, ಮತ್ತು ಇತರರೊಂದಿಗೆ ಸುನೀಲ್ ಕುಮಾರ್‍ ಮದ್ಯ ಸೇವನೆಗೆ  ಆಲಂಬಾಡಿ ಗ್ರಾಮದ ಸೊಸೌಟಿ ಗೋಪಾಲಪ್ಪ ಲ್ಯಾಂಡ್ ಬಳಿ   ಹೋಗಿದ್ದು ಅಲ್ಲಿ, ತನ್ನ ಸುನೀಲ್ ಕುಮಾರ್‍ ರವರ ಹೆಂಡತಿ ವಿಚಾರವಾಗಿ ಜಗಳ ಉಂಟಾಗಿ,  ವಜ್ರಸ್ವಾಮಿ ಇತರರೊಂದಿಗೆ ಸೇರಿ  ಕಾರಿನಲ್ಲಿದ್ದ ಮೊಚ್ಚಿನಿಂದ ಸುನಿಲ್ ಗೆ ಹೊಡೆದು ಉದ್ದೇಶಪೂರ್ವಕವಾಗಿಯೇ ಕೆಲೆ ಮಾಡಿರುತ್ತಾರೆ ಎಂದು ಪಿರ್ಯಾದಿದಾರ ದೂರು ಧಾಖಲಿಸಿರುತ್ತಾರೆ.

 

ಆರೋಪಿಗಳ ವಿವರ:

 ೧) ವಜ್ರಸ್ವಾಮಿ ಮಾಲೂರು ತಾಲೂಕು, ಆಲಂಬಾಡಿ ಗ್ರಾಮ

 ೨) ಬಾಬು, ಮಾಲೂರು ತಾಲೂಕು, ಆಲಂಬಾಡಿ ಗ್ರಾಮ

Leave a Reply

Your email address will not be published. Required fields are marked *