ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ:08-06-2020

ದಿನಾಂಕ: 07-06-2020 ಸಂಜೆ 04:೦೦ ಗಂಟೆಯಿಂದ ದಿನಾಂಕ: 08- 06-2020 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ

 

ವರದಕ್ಷಿಣೆ ಕಿರುಕುಳ ಮಹಿಳೆ ಆತ್ಮಹತ್ಯೆ:

ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ ಮುಳಬಾಗಿಲು ನಗರ ಹೈದರ್‌ ನಗರ ದಲ್ಲಿ ಘಟನೆ ಸಂಬವಿಸಿರುತ್ತದೆ,  ದಿನಾಂಕ ೦೭-೦೬-೨೦೨೦ ರಂದು ಮುಳಬಾಗಿಲು ನಗರ ಹೈದರ್‌ ನಗರ ನಿವಾಸಿ  ನಯಾಜ್‌ಉಲ್ಲಾಖಾನ್‌ ಬಿನ್ ಅಕ್ಬರ್‌ ಖಾನ್‌  ಎಂಬುವರು ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ಮಗಳು  ತಾಸ್ಮಿಯಾಖಾನಂ ಎಂಬುವರನ್ನು ನಕೆ, ಆರ್‌ ಪುರಂ ಬೆಂಗಳೂರು, ನಿವಾಸಿ ಸುಹೇಬ್‌ ಎಂಬುವರಿಗೆ ಸುಮಾರು ೧೦ ಲಕ್ಷ ನಗದು, ಸುಮಾರು ೨೫೦ ಗ್ರಾಂ ಬಂಗಾರದೊಂದಿಗೆ  ೧೦-೦೬-೦೧೯ ರಲ್ಲಿ ವಿವಾಹ ಮಾಡಿದ್ದು,  ಮೊದಲು ಚನ್ನಾಗಿದ್ದು, ನಂತರ ದಿನಗಳಲ್ಲಿ ವರದಕ್ಷಿಣೆಗೆ  ಕಿರುಕುಳ ನೀಡಿ,  ಹೋಗಿ ತವರಿನಿಂದ ದುಡ್ಡು ತರದಿದ್ದರೆ ನಿನ್ನ ಜೀವಸಹಿತ ಬಿಡುವುದಿಲ್ಲ ಎಂದು ಕುಟುಂಬ ಸದಸ್ಯರೊಂದಿಗೆ ಪ್ರಾಣ ಬೆದರಿಕೆ ಹಾಕಿರುತ್ತಾರೆ, ಅದರಂತೆ  ತಾಸ್ಮಿಯಾಖಾನಂ ಗಂಡನ ಮನೆಯಿಂದ ತನ್ನ ತವರು  ಮುಳಬಾಗಿಲು ನಗರ ಹೈದರ್‌ ನಗರಕ್ಕೆ ಬಂದು ಮನೆಯಲ್ಲಿ ವಿಚಾರ ಹೇಳಿ ,  ಮನನೊಂದು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ದಿನಾಂಕ ೦೭-೦೬-೨೦೨೦ ರಂದು ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿರುತ್ತಾರೆ, ತನ್ನ ಮಗಯ ಈ ಮರಣಕ್ಕೆ ತನ್ನ ಅಳಿಯ  ಮತ್ತು ಅಳಿಯನ ಕುಟುಂಬವೇ ಕಾರಣ ಎಂದು ಪಿರ್ಯಾದುದಾರ ದೂರು ದಾಖಲಿಸಿರುತ್ತಾನೆ,

ಆರೋಪಿಗಳ ವಿವರ:

೧) ಸುಹೇಬ್‌ ಬಿನ್ ಗಾಚರ್‌ ಆರ್‌ ಪುರಂ ಬೆಂಗಳೂರು

೨) ಆಯಿಷಾ, ಆರ್‌ ಪುರಂ, ಬೆಂಗಳೂರು,

೩) ಲಮರ್‌, ಆರ್‌ ಪುರಂ, ಬೆಂಗಳೂರು,

೪) ಸಲಾಮ್‌ , ಆರ್‌ ಪುರಂ, ಬೆಂಗಳೂರು,

 

ಕೊಲೆಗೆ ಯತ್ನ:

ಮುಳಬಾಗಿಲು ಗ್ರಾಮಾಂತರ  ಪೊಲೀಸ್‌ ಠಾಣೆಯಲ್ಲಿ ಕೆಲೆಗೆ ಯತ್ನ ಕ್ಕೆ  ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ ಮುಳಬಾಗಿಲು  ತಾಲ್ಲೂಕು  ಕೆ, ಶೆಟ್ಟಿಹಳ್ಳಿ ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ,  ,  ದಿನಾಂಕ ೦೭-೦೬-೨೦೨೦ ಮುಳಬಾಗಿಲು  ತಾಲ್ಲೂಕು  ಕೆ, ಶೆಟ್ಟಿಹಳ್ಳಿ ಗ್ರಾಮದ ನಿವಾಸಿಯಾದ ಪುಷ್ಪ ಕೊಂ ಮರೇಶ್‌   ಎಂಬುವರು ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ  ಹಾಗೂ ಅ ದೇ ಗ್ರಾಮದ ನಿವಾಸಿಯಾದ  ಮುನಿವೆಂಕಟಪ್ಪ ಎಂಬುವರಿಗೆ  ಜಮೀನಿನ ವಿಚಾರದಲ್ಲಿ  ತಕರಾರು ಇದ್ದು,  ಅದರಂತೆ ದಿನಾಂಕ ೦೬-೦೬-೨೦೨೦ ರಂದು ತನ್ನ ಮನೆಯ ಪಕ್ಕದಲ್ಲಿ ಮಗುವನ್ನು ಹೊರಗಡೆ ಬಿಟ್ಟಿದ್ದು, ಮಗುವನ್ನು ಮನೆಗೆ ತರಲು ಹೊರಗಡೆ ಹೋದಾಗ , ಅದನ್ನೇ  ಹೊಂಚು  ಹಾಕಿ ಕುಳಿತಿದ್ದ ೧) ಆನಂದ ಬಿನ್ ಮುನವೆಂಕಟಪ್ಪ  ೨) ಮುನವೆಂಕಟಪ್ಪ ಬಿನ್ ಮುನಿಸ್ವಾಮಿ, ೩) ರಮೇಶ ಬಿನ್   ಮುನವೆಂಕಟಪ್ಪ,  ಎಂಬುವರು ಏಕಏಕಿ ಬಂದು ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು, , ದೊಣ್ಣೆಯಿಂದ ಹೊಡೆದು, ಅದರಲ್ಲಿ ಆನಂದ್‌ ಎಂಬುವನು ಕಬ್ಬಿಣದ ಲಾಂಗ್‌ನಿಂದ ಕತ್ತಿಗೆ ಬೀಸಿದ್ದು ಅದನ್ನು ತಪ್ಪಿಸಿಕೊಂಡಿ ಕಿವಿಗೆ ಬಿದ್ದು ರಕ್ತಗಾಯ ವಾಗಿದ್ದು,  ಉದ್ದೇಶಪೂರ್ವಕವಾಗಿಯೇ  ಪಿರ್ಯಾದಿಯನ್ನು ಕೊಲೆಮಾಡಲು ಪ್ರಯತ್ನಿಸಿ  ಸಾಯಿಸಿಬಿಡುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ,

Leave a Reply

Your email address will not be published. Required fields are marked *