ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ:09-06-2020

ದಿನಾಂಕ: 08-06-2020 ಸಂಜೆ 04:೦೦ ಗಂಟೆಯಿಂದ ದಿನಾಂಕ: 09- 06-2020 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ

 

ಕೊಲೆ:

ಶ್ರೀನಿವಾಸಪುರ  ಪೊಲೀಸ್‌ ಠಾಣೆಯಲ್ಲಿ ಕೊಲೆಗೆ   ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ ಶ್ರೀನಿವಾಸಪುರ  ತಾಲ್ಲೂಕು  ತೂಪಲ್ಲಿ  ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ,  ಸದರಿ ಗ್ರಾಮದ ವಾಸಿಯಾದ  ಗಂಗರಾಜು ಬಿನ್ ವೆಂಕಟರವಣಪ್ಪ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,  ಪಿರ್ಯಾದಿಯ ಚಿಕ್ಕಪ್ಪ ವೆಂಕಟರವನಪ್ಪ ಮತ್ತು ಅದೇ ಗ್ರಾಮದ ವಾಸಿಯಾ   ಸಂತೋಶ್‌ ಬಿನ್ ಗೋವಿಂದಪ್ಪ ಎಂಬುವರಿ ಗೆ ಪಿರ್ಯಾಧಿಯ ಚಿಕ್ಕಪ್ಪ ತನ್ನ ಆಟೋವನ್ನು ಸಂತೋಷ್‌ ರವ ಮನೆಯ  ಪಕ್ಕ ರಸ್ತೆಯಲ್ಲಿ ನಿಲ್ಲಿಸುತ್ತಿದ್ದು, ಇದರ ವಿಚಾರವಾಗಿ ಇಬ್ಬರ ಮದ್ಯೆ ದಿನಂಪ್ರತಿ ಜಗಳ ವಾಡಿತ್ತಿದ್ದು, ಅರದಂತೆ ದಿನಾಂಕ ೦೮-೦೬-೨೦೨೦ ರಂದು ಸುಮಾರು  ಬೆಳಿಗ್ಗೆ ೧೦:೩೦ ಸಮಯದಲ್ಲಿ  ಸಂತೋಷ್‌ ಪಿರ್ಯಾದಿಯ ಚಿಕ್ಕನ ಮೇಲೆ ಜಗಳ ತೆಗೆದು ನಿನ್ನನ್ನು ಬಿಡುವುದಿಲ್ಲಾ, ಸಾಯಿಸಿಬಿಡುತ್ತೇನೆ ಎಂದು ಗಲಾಟೆ ಮಾಡಿ ಮನೆಯಲ್ಲಿದ್ದ ಒನಕೆಯನ್ನು ತೆಗೆದುಕೊಂಡು ಬಂದು  ,  ಪಿರ್ಯಾದಿಯ ಚಿಕ್ಕಪ್ಪ ವೆಂಕಟರವನಪ್ಪ ರವರ ಮೇಲೆ ಹಲ್ಲೆ ಮಾಡಲು ಹೋಗಿ ಮನೆಯಲ್ಲಿದ್ದ ಕಮಲಮ್ಮ ರವರ ತಲೆಗೆ ಹೊಡೆದು ರಕ್ತ ಗಾಯ ಮಾಡಿ, ಚಿಕಿತ್ಸೆಗೆ ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆ ಪಲಕಾರಿ ಯಾಗದೇ ಪಿರ್ಯಾದಿಯ ಚಿಕ್ಕಮ್ಮ ರವರಾದ ಕಮಲಮ್ಮ ರವರು ಮೃತಪಟ್ಟಿರುತ್ತಾರೆ,

 

 ಹಲ್ಲೆ ಮತ್ತು ಪ್ರಾಣ ಬೆದರಿಕೆ:

 

ವೇಮಗಲ್ ಪೊಲೀಸ್‌ ಠಾಣೆಯಲ್ಲಿ  ಹಲ್ಲೆ ಮತ್ತು ಪ್ರಾಣಬೆದರಿಕೆಗೆ  ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ,  ನರಸಾಪುರ ಬಳಿಯ ದೊಡ್ಡವಲ್ಲಬಿ ಬಳಿ ಘಟನೆ ಸಂಬವಿಸಿರುತ್ತದೆ, ಸದರಿ ಗ್ರಾಮದ ವಾಸಿಗಳಾದ ರವಿ ಬಿನ್ ವೆಂಕಟೇಶಪ್ಪ ಮತ್ತು ಅದೇ ಗ್ರಾಮದವಾಸಿಗಳಾದ ಶ್ರೀನಿವಾಸಪ್ಪ ರವರ ಕುಟುಂಬಕ್ಕೆ  ಸರ್ವೇ ನಂಬರ್‍ ೧೯೮ ರಲ್ಲಿ ಜಮೀನಿನ ಗಲಾಟೆಗಳು ಇದ್ದು, ಅದರಂತೆ ದಿನಾಂಕ ೦೮-೦೬-೨೦೨೦ ರಂದು  ಸದರಿ ಸರ್ವೆ ನಂಬರ್‌ ಜಮೀನಿನಲ್ಲಿ ಪಿರ್ಯಾದಿ ಕೋಸು ಬೆಳೆ ಹಾಕಿದ್ದು, ಅದನ್ನು ಬೇಕಂತಲೇ ಗ್ರಾಮದ ವಾಸಿ ಶ್ರೀನಿವಾಸಪ್ಪ ರವರು ಕಳಿ ತೆಗೆದು ಅದರಲ್ಲಿ ಹಾಕಿದ್ದು ಅದನ್ನು ಕೇಳಿದಕ್ಕೆ  , ಪಿರ್ಯಾದಿಯ ಮೇಲೆ  ೧) ಶ್ರೀನಿವಾಸಪ್ಪ ೨) ಪದ್ಮಮ್ಮ ೩) ಪುನೀತ್‌ ೪)ಮಮತಾ ಎಂಬುವರು ಕುಟುಂಬ ಸಮೇತ ಜಗಳ ತೆಗೆದುಅದರಲ್ಲಿ  ಶ್ರೀನಿವಾಸಪ್ಪ ರವರು ತನ್ನ ಕೈನಲ್ಲಿದ್ದ ಕುಡುಗೋಲಿನಿಂದ ತಲೆಗೆ ಹೊಡೆದು ರಕ್ತ  ಗಾಯ ಮಾಡಿ, ಹಲ್ಲೆ ಮಾಡಿ  ಸಾಯಿಸುವುದಾಗಿ ರಾಣ ಬೆದರಿಕೆ ಹಾಕಿರುತ್ತಾರೆ..

 

 ಹಲ್ಲೆ ಮತ್ತು ಪ್ರಾಣ ಬೆದರಿಕೆ:

 

ಮುಳಬಾಗಿಲು ನಗರ ಪೊಲೀಸ್‌ ಠಾಣೆಯಲ್ಲಿ  ಹಲ್ಲೆ ಮತ್ತು ಪ್ರಾಣಬೆದರಿಕೆಗೆ  ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ,  ಮುಳಬಾಗಿಲು  ನಗರ ಯು ಬೆಡ್‌ ಶಾಪ್‌ ಮುಂಬಾಗ ಘಟನೆ ಸಂಬವಿಸಿರುತ್ತದೆ,  ಮುಳಬಾಗಿಲು ನಗರ ಕುರುಬುರು ಪೇಟೆ ನಿವಾಸಿಯಾದ ತಾಸಿಪ್‌ ಪಾಷ ಬಿನ್ ಗುಜರ್‌ ಪಾಷ ಎಂಬುವರು ಠಾಣೆಗೆ ಹಾಜರಾಗಿ  ನೀಡಿದ ದೂರಿನ ಸಾರಾಂಶವೇನೆಂದರೆ,  ನೀರಿನ ವಿಚಾರವಾಗಿ  ಪಿಯಾðದಿಗೆ ಮತ್ತು ವಹೀದ್‌ ಎಂಬುವರಿಗೆ ಜಗಳವಾಗಿ, ಅದರಂತೆ ದಿನಾಂಕ ೦೮-೦೬-೨೦೨೦ ರಂದು ೦೨:೪೫ ಗಂಟೆ ಸಮಯದಲ್ಲಿ ಅದೇ ಗಲಾಟೆ ದೊಡ್ಡದಾಗಿ ,ಪಿರ್ಯಾದಿಯ ಮೇಲೆ ೧) ಆಸಿಪ್‌, ೨)ಜುಬೇರ್‌,೩)ಜುಮರ್‌ ೪)ಸಲೀಮ್‌ ೦೫) ನವೀದ್‌ ಎಂಬುವರು  ಒಟ್ಟಿಗೆ ಸೀರಿ ಗುಂಪಾಗಿ ಪಿರ್ಯಾದಿಯನ್ನು ಅವಾಚ್ಯ ಶಬ್ದಗಳಿಂದ ಬೈದು,  ಚಾಕುವಿನಿಂದ ಎದೆ ಬಾಗಕ್ಕೆ ರಕ್ತ ಗಾಯ ಮಾಡಿ, ಸಾಯಿಸುವುದಾಗಿ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿರುತ್ತಾರೆ,

Leave a Reply

Your email address will not be published. Required fields are marked *