ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ:10-06-2020

ದಿನಾಂಕ: 09-06-2020 ಸಂಜೆ 04:೦೦ ಗಂಟೆಯಿಂದ ದಿನಾಂಕ:10- 06-2020 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ

 

ಕೊಲೆ:

ವೇಮಗಲ್  ಪೊಲೀಸ್‌ ಠಾಣೆಯಲ್ಲಿ ಕೊಲೆಗೆ  ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ ಕೋಲಾರ ತಾಲ್ಲೂಕು ಕರ್ಕಿ ಗ್ರಾಮದಲ್ಲಿ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಬಳಿ ಘಟನೆ ಸಂಬವಿಸಿರುತ್ತದೆ, ಸದರಿ ಗ್ರಾಮದ ವಾಸಿಯಾದ ಮಂಜುಳ ಕೋಂ ರಾಮಕ್ರಿಷ್ಣ ಎಂಬುವರು   ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ , ದಿನಾಂಕ ೦೮-೦೬-೨೦೨೦ ರಂದು ರಾತ್ರಿ ತನ್ನ ತಂದೆಯಾದ ಮುನಿಯಪ್ಪ ರವರು ಕರ್ಕಿ ಗ್ರಾಮದಲ್ಲಿ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಬಳಿ ಹೋಗಿ ಮಲಗಿದ್ದು, ಅದೇ ದಿನ ರಾತ್ರಿ ಪಿರ್ಯಾದಿಯ ತಂದೆ ಮತ್ತು ಅದೇ ಗ್ರಾಮದ ವಾಸಿಯಾದ ಕೃಷ್ಣಪ್ಪ ಎಂಬುವರು ಗಲಾಟೆ ಮಾಡುತ್ತಿದ್ದು, ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡು ದೊಣ್ಣೆಯಿಂದ ತಲೆಗೆ ಹೊಡೆದು,   ರಕ್ತ ಗಾಯ ಮಾಡಿ ಕೊಲೆ ಮಾಡಿರುತ್ತಾರೆ. ದೊಣ್ಣೆಯ ಹೊಡೆತಕ್ಕೆ ತೀವ್ರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ,

 

ವ್ಯಕ್ತಿ ಕಾಣೆಯಾಗಿರುವ ಬಗ್ಗೆ:

 

ಕೋಲಾರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವ್ಯಕ್ತಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ, ಕೋಲಾರ ತಾಲ್ಲೂಕು ಸುಗಟೂರು ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ, ಸದರಿ ಗ್ರಾಮದ ವಾಸಿಯಾದ ಮಂಜುಳ ಕೋಂ ಶಿವ ಎಂಬುವರು ಟಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತನ್ನ ಗಂಡ ಶಿವ ಎಂಬುವರು ದಿನಾಂಕ ೨೧-೦೫-೨೦೨೦ ರಂದು ಮನೆಯಿಂದ ಹೊರಗೆ ಹೋದವರು ಮರುಳಿ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ, , ಪಿರ್ಯಾದಿ ಗಂಡ ಕೋಲಾರದ ಕಾರಂಜಿಕಟ್ಟೆ ವಾಸಿಯ ರೂಪ ಎಂಬುವರ ಜೋತೆ ಹೆಚ್ಚಾಗಿ ಮಾತನಾಡುತ್ತಿದ್ದು, ಅವರ ಮೇಲೆ ಅನುಮಾನ ವ್ಯಕ್ತ ಪಡಿಸಿರುತ್ತಾರೆ,

 

ಮಹಿಳೆ ಕಾಣೆಯಾಗಿರುವ ಬಗ್ಗೆ:

 

ಕೋಲಾರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಮಹಿಳೆ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ, ಕೋಲಾರ ತಾಲ್ಲೂಕು ಚನ್ನರಾಯಪುರ ದ   ಶ್ರೀ ಮಹಾಲಕ್ಷ್ಮಿ ಓಳಿ ಪಾರಂ   ನಲ್ಲಿ ಘಟನೆ ಸಂಬವಿಸಿರುತ್ತದೆ,   ಬಿಕಾ ರಾಂ ಪತ್ತಲ್‌ ಬಿನ್ ಪಪೂಲ್‌ ಪತ್ತರ್‌ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿಯು ಮೂಲತಹ ಒರಿಸ್ಸಾದಿಂದ ಕೂಲಿ ಕೆಲಸಕ್ಕೆ   ಕೋಲಾರ ತಾಲ್ಲೂಕು ಚನ್ನರಾಯಪುರ ದ   ಶ್ರೀ ಮಹಾಲಕ್ಷ್ಮಿ ಓಳಿ ಪಾರಂ ಗೆ ಬಂದಿದ್ದು, ಸುಮಾರು ೨ ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಅದರಂತೆ ತನ್ನ ಪತ್ನಿಯಾದ ಜಾನೂ ಪತ್ತರ್‌ ಎಂಬುವರು ದಿನಾಂಕ ೦೫-೦೬-೨೦೨೦ ರಂದು ಪಾರಂನಿಂದ ಕೋಲಾರಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ಮರುಳಿ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ, ಪಿರ್ಯಾದಿದಾರ ಅದೇ ಪಾರಂನಲ್ಲಿ ಕೆಸ ಮಾಡುವ ಸೂಪ್‌ವೈಸರ್‌ ಥಾಮರಾಯ್‌ ‌ ಸೆಲ್ವನ್‌ ಎಂಬುವರ ಮೇಲೆ ಅನುಮಾನ   ವ್ಯಕ್ತ ಪಡಿಸಿರುತ್ತಾರೆ.

Leave a Reply

Your email address will not be published. Required fields are marked *