ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ:12-06-2020

ದಿನಾಂಕ: 11-06-2020 ಸಂಜೆ 04:೦೦ ಗಂಟೆಯಿಂದ ದಿನಾಂಕ:12- 06-2020 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ
ಹಲ್ಲೆ ಮತ್ತು ಪ್ರಾಣ ಬೆದರಿಕೆ:
ಮಾಲುರು ಪೊಲೀಸ್‌ ಠಾಣೆಯಲ್ಲಿ ಹಲ್ಲೆ ಮತ್ತು ಪ್ರಾಣ ಬೆದರಿಕೆಗೆ  ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ಮಾರೂರು ನಗರದ  ಸರ್ಕಾರಿ ಆಸ್ಪತ್ರೆಯಲ್ಲಿ ಘಟನೆ ಸಂಬವಿಸಿರುತ್ತದೆ,  ದಿನಾಂಕ ೧೧-೦೬-೨೦೨೦  ಚನ್ನಕಲ್ಲು ಗ್ರಾಮದ ವಾಸಿ ಹಾಗೂ ಸದರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ  ಎಸ್ . ಸುಬಾಷ್‌ಚಂದ್ರಬೋಸ್‌ ಎಂಬುವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,  ದಿನಾಂಕ ೧೧-೦೬-೨೦೨೦ ರಂದು ತಾನೂ ಆಸ್ಪತ್ರೆಯಲ್ಲಿ   ಕೋವಿದ್ -೧೯ ಕರ್ತವ್ಯದಲ್ಲಿದ್ದಾಗ   ದೊಡ್ಡಿಇಗ್ಗಲೂರು ಗ್ರಾಮದ ವಾಸಿಯಾದ  ಕಾರ್ತಿಕ್‌ ಬಿನ್ ನಾಗರಾಜು ಎಂಬುವರು ಏಕಾಏಕಿ ಬಂದು ಅವಾಚ್ಯಶಬ್ದಗಳಿಂದ ಬೈದು  ಕೈಗಳಿಂದ ಹೊಡೆದು ಸಾಯಿಸಿಬಿಡುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ,
ಕೊಲೆಗೆ ಪ್ರಯತ್ನ:

ಕೋಲಾರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ    ಕೊಲೆಗೆ  ಪ್ರಯತ್ನಕ್ಕೆ   ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ ಕೋಲಾರ ತಾಲ್ಲೂಕು  ಖಾದರಿಪುರ   ಗ್ರಾಮದ ಬಳಿ ಘಟನೆ ಸಂಬವಿಸಿರುತ್ತದೆ,  ಸದರಿ ಗ್ರಾಮದ ವಾಸಿಯಾದ  ಮುನಿವೆಂಕಟಪ್ಪ ಬಿನ್ ವೆಂಕಟಪ್ಪ   ಎಂಬುವರು   ಠಾಣೆಗೆ  ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ , ದಿನಾಂಕ ೧೦-೦೬-೨೦೨೦ ರಂದು   ಯಾವುದೋ ಕ್ಷುಲ್ಲಕ ಕಾರಣಕ್ಕೆ,ಅದೇಗ್ರಾಮದ ವಾಸಿಯಾದ  ಸುಬ್ರಮಣಿ ಬಿನ್ ವೆಂಕಟರವಣಪ್ಪ  ಎಂಬುವರು ಗಲಾಟೆ ಮಾಡುತ್ತಿದ್ದು, ಏ ಗಲಾಟೆ ತೀವ್ರ ಸರೂಪಕ್ಕೆ ಹೋಗಿ ಪಿರ್ಯಾದಿ ಮಗ ಮಂಜುನಾಥ್‌ ಎಂಬುವರನ್ನು ೧) ವೆಂಕಟರವಣಪ್ಪ ,೨) ಬಾಗ್ಯಮ್ಮ, ೩)ಮತ್ತು ಸುಬ್ರಮಣಿ ಎಂಭುವರು ಒಟ್ಟಿಗೆ ಸೇರಿ  ಗಲಾಟೆ ಮಾಡಿ ಸುಬ್ರಮಣಿ ಚಾಕುವಿನಿಂದ ಮೋಜುನಾಥ್‌ ರವರ ಎದೆ ಬಾಗಕ್ಕೆ  ಮತ್ತು ಇನ್ನಿತರ ಬಾಗಕ್ಕೆ ತಿವಿದು ಕೆಗೆ ಪ್ರಯತ್ನಿಸಿ , ಸಾಯಿಸಿಬಿಡುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.
 
ಮಹಿಳೆ  ಕಾಣೆಯಾಗಿರುವ ಬಗ್ಗೆ:
ಗಲ್‌ ಪೇಟೆ  ಪೊಲೀಸ್‌ ಠಾಣೆಯಲ್ಲಿ  ಮಹಿಳೆ  ಕಾಣೆಯಾಗಿರುವ ಬಗ್ಗೆ  ಪ್ರಕರಣ ದಾಖಲಾಗಿರುತ್ತದೆ,  ಕೋಲಾರ ನಗರದ ಗಾಂದಿನಗರ ೬ನೇ ಕ್ರಾಸ್‌   ನಲ್ಲಿ  ಘಟನೆ ಸಂಬವಿಸಿರುತ್ತದೆ,    ಆರತಿ ಕೊಂ ಲೋಕೇಶ್‌,ಜಿ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ಮಗಳು  ವಂದನ ಎಂಬುವರು ಕೋಲಾರ ಚೈತನ್ಯ ಕಾಳೇಜಿನಲ್ಲಿ  ಮೊದಲನೇ ಬಿಕಾಂ ಮಾಡಿತ್ತಿದ್ದು,   ದಿನಾಂಕ ೦೭-೦೬-೨೦೨೦ ರಂದು ಮುಂಜಾನೆ ೪:೩೦ ರಲ್ಲಿ ನೊಡಲಾಗಿ ಮನೆಯಲ್ಲಿ ಇಲ್ಲದೇ  , ಮರುಳಿ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ, 

ಮಹಿಳೆ  ಕಾಣೆಯಾಗಿರುವ ಬಗ್ಗೆ:
ಮಾಲೂರು   ಪೊಲೀಸ್‌ ಠಾಣೆಯಲ್ಲಿ  ಮಹಿಳೆ  ಕಾಣೆಯಾಗಿರುವ ಬಗ್ಗೆ  ಪ್ರಕರಣ ದಾಖಲಾಗಿರುತ್ತದೆ,  ಮಾಲೂರು ನಗರದ ನಂಝಮ್ಮ ಹಾಸ್ಪೆಟಲ್‌, ಮಾರುತಿ ಎಕ್ಸಟೆನ್ಸ್‌ ಬಳಿ   ಘಟನೆ ಸಂಬವಿಸಿರುತ್ತದೆ,    ಜಗನ್ನಾಥ್‌ ಬಿನ್  ಆರ್‍ ಕಂಬಸ್ವಾಮಿ,  ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ಮಗಳು  ಕಲ್ಪನಾ, ಜೆ  ಎಂಬುವರು ಮಾಲೂರು ಪ್ಲಿಪ್ಕಾರ್ಟ್ ಕಂಪನಿಯಲ್ಲಿ ಕೆಸ ಮಾಡಿತ್ತಿದ್ದು, ,   ದಿನಾಂಕ ೦೮-೦೬-೨೦೨೦ ರಂದು ಮುಂಜಾನೆ ೦೯:೩೦ಗಂಟೆಗೆ ಕಾಲೇಜಿಗೆ ಹೋಗಿ ಅಂಕಪಟ್ಟಿ ತರುವುದಾಗಿ ಹೇಳಿ ಹೋದವಳು  , ಮರುಳಿ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ, 

Leave a Reply

Your email address will not be published. Required fields are marked *