ದಿನಾಂಕ: 18-06-2020 ಸಂಜೆ 04:೦೦ ಗಂಟೆಯಿಂದ ದಿನಾಂಕ:19- 06-2020 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ
ಕೊಲೆ:
ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ಕೊಲೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ಶ್ರೀನಿವಾಸಪುರ ತಾಲ್ಲೂಕು , ಚೀಮಟವಾರಿಪಲ್ಲಿ ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ, ದಿನಾಂಕ ೧೭-೦೬-೨೦೨೦ ರಂದು ಸದರಿ ಗ್ರಾಮದ ವಾಸಿಯಾದ ಚೈತ್ರ ಕೊಂ ವೆಂಕಟೇಶ್ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ , ಪಿರ್ಯಾದಿಯ ಗಂಡ ವೆಂಕಟೇಶ್ ಎಂಬುವರ ಬಳಿ ತನ್ನ ಮಾವ ಆದ ವೆಂಕಟರಾಮಪ್ಪ ಎಂಬುವರು ಕುಡಿದು ಜಗಳ ತೆಗೆದು ಅದರಂತೆ ತನ್ನ ಗಂಡನೂ ಸಹ ಜಗಳ ಮಾಡಿ ತನ್ನ ಮನೆಗೆ ನೀನು ಬರಬೇಡ ಎಂಬು ಹೇಳಲಾಗಿ, ನಂತರ ಪಿರ್ಯಾದಿಯ ಮಾವ ಅವಾಚ್ಯ ಶಬ್ದಗಳಿಂದ ಬೈದು, ನಾನೆನೊ ಹೋಗೋದು ನಿನ್ನನೇ ಮೇಲಕ್ಕೆ ಕಳುಹಿಸುತ್ತೇನೆ ಅಂದು ಬೆದರಿಕೆ ಹಾಕಿ ಹೋಗಿದ್ದು ಆದಿನ ರಾತ್ರಿ ಮನೆಯಲ್ಲಿ ಮಲಗಿದ್ದಾಗ ಹೇಳಿದಂತೆ ಕಲ್ಲಿನಿಂದ ಮಲಗಿದ್ದ ಪಿರ್ಯಾದಿಯ ಗಂಡನ ತಲೆಯ ಮೇಲೆ ಹಾಕಿ, ಜಜ್ಜಿ, ಕೊಲೆ ಮಾಡಿರುತ್ತಾರೆ ಎಂದು ಪಿರ್ಯಾದಿ ದೂರುನೀಡಿರುತ್ತಾರೆ,
ಕೊಲೆ:
ಮಾಲೂರು ಪೊಲೀಸ್ ಠಾಣೆಯಲ್ಲಿ ಕೊಲೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ಮಾಲೂರು ನಗರದ ಮುದ್ದುಕ್ರಿಷ್ಣಪ್ಪ ಬಿಲ್ಡಿಂಗ್ , ತಿರುಮಲ ಕ್ಯಾಣ ಮಂಟಪ ಬಳಿ ಘಟನೆ ಸಂಬವಿಸಿರುತ್ತದೆ, ದಿನಾಂಕ ೧೮-೦೬-೨೦೨೦ ರಂದು ಸದರಿ ಗ್ರಾಮದ ವಾಸಿಯಾದ ರಮೇಶ್ ಬಿನ್ ಲಕ್ಷ್ಮಿನಾರಾಯಣ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ , ಪಿರ್ಯಾದಿಯ ತಾಯಿ ಮತ್ತು ತನ್ನ ಹೆಂಡತಿ ಇಬ್ಬರೂ ದೈಹಿಕ ತೋದರಿಯಿಂದ ಮಂಚ ಹಿಡಿದಿದ್ದು, ಪಿರ್ಯಾದಿಯ ಹೆಂಡತಿ ಪದ್ಮ ಮತ್ತು ತಾಯಿ ಆದಿನಾರಾಯಣಮ್ಮ ರವರು ಆಸ್ಪತ್ರೆಗೆ ಕರೆದುಕೊಂಡು ಹೊಗುವಂತೆ ದಿನಾಗಲು ಪೀಡಿಸುತ್ತಿದ್ದು, ಅದರಂತೆ ದಿನಾಂಕ ೧೮-೦೬-೨೦೨೦ ರಂದು ರಾತ್ರಿ ಮೊದಲೇ ತಂದಿದ್ದ ಕ್ರಿಮಿನಾಶಕ ಮದ್ದನ್ನು ನೀರಿನಲ್ಲಿ ಮಿಶ್ರಣ ಮಾಡಿ ಕುಡಿಸಿ ಇದರಿಂದ ವಾಂತಿಯಾಗಿ ತನ್ನ ತಾಯಿ ಮತ್ತು ಹೆಂಡತಿಯನ್ನು ಕೊಲೆ ಮಾಡಿರುತ್ತಾರೆ ಎಂದು ಪಿರ್ಯಾದಿಯ ಅಕ್ಕ ದೂರು ನೀಡಿರುತ್ತಾರೆ,
ಮಹಿಳೆ ಕಾಣೆಯಾಗಿರುವ ಬಗ್ಗೆ:
ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಮಹಿಳೆ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಶ್ರೀನಿವಾಸಪುರ ತಾಲ್ಲೂಕು, ಎಲ್ದೂರು ಹೋಬಳಿ, ಕೊಲತೂರು ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ, ದಿನಾಂಕ ೧೭-೦೬-೨೦೨೦ ರಂದು ಸದರಿ ಗ್ರಾಮದ ವಾಸಿಯಾದ ನಾರೆಮ್ಮ ಕೊಂ ವೆಂಕಟೇಶಪ್ಪ ಎಂಬುವರ ಮಗಳು ನಾಗರತ್ನ ಕೆ. ವಿ. ಎಂಬುವರು ದಿನಾಂಕ ೧೭-೦೬-೨೦೨೦ ರಂದು ಮನೆಯಲ್ಲಿ ಯಾರಿಗೂ ಹೇಳದೇ ಮನೆಯಿಂ ಹೊರಗೆ ಹೋದವಳು ಇದುವರೆಗೂ ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ, ಎಲ್ದೂರು ಗ್ರಾಮದ ವಾಸಿಯಾದ ಸುರೇಶ್ ಎಂಬುವನ ಮೇಲೆ ಪಿರ್ಯಾದಿದಾರರು ಅನುಮಾನ ವ್ಯಕ್ತ ಪಡಿಸಿರುತ್ತಾರೆ.
ಮಾರಣಾಂತಿಕ ಅಪಘಾತ:
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಾರಣನಾಂತಿಕ ಅಪಘಾತಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲ್ಲೂಕು, ಮಲ್ಲಾಂಡಹಳ್ಳಿ ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ, ಸದರಿ ಗ್ರಾಮದ ವಾಸಿಯಾದ ಸತ್ಯನಾರಾಯಣ ಬಿನ್ ಲೇಟ್ ಕೃಷ್ಣಪ್ಪ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ ೧೮-೦೬-೨೦೨೦ ರಂದು ಪಿರ್ಯಾದಿಯ ದೊಡ್ಡಪ್ಪನ ಮಗ ಗೋಪಾಲ ಎಂಬುವರು ಕೆ.ಎ ೦೮ ಟಿ.೫೧೮೬ ಸಂಖ್ಯೆಯ ಟ್ರಾಕ್ಟರ್ ನಲ್ಲಿ ಉಳಿಮೆ ಮಾಡಿತ್ತಿದ್ದಾಗ ಹೊಲದ ಪಕ್ಕದಲ್ಲಿ ನಿಂತಿದ್ದ ಅದೇ ಗ್ರಾಮದ ವಾಸಿಯಾದ ಅಶೊಕನ ಮೇಲೆ ನಿರ್ಲಷ್ಯದಿಂದ ಚಾಲನೇ ಮಾಡಿಕೊಂದು ಬಂದು ಡಿಕ್ಕಿ ಒಡೆದ ಪರಿಣಾಮ ಅಶೋಕ್ ಎಂಬುವರ ಮೇಲೆ ಸದರಿ ಟ್ರಾಕ್ಟರ್ ಬಿದ್ದು, ಎದೆಯ ಬಾಗ ಮತ್ತು ಕತ್ತಿನ ಬಾಗಕ್ಕೆ ತೀವ್ರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾನೆ.