ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ ೧೧-೦೭-೨೦೧೯

ಹಲ್ಲೆ ಮತ್ತು ಪ್ರಾಣ ಬೆದರಿಕೆ:

ಕೋಲಾರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಹಲ್ಲೆ ಮತ್ತು  ಪ್ರಾಣ ಬೆದರಿಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲ್ಲೂಕು ಹೊನ್ನೇನಹಳ್ಳಿ ಗ್ರಾಮದ ಬಳಿ ಘಟನೆ ಸಂಬವಿಸಿರುತ್ತದೆ. ದಿನಾಂಕ ೧೦-೦೭-೨೦೯ ರಂದು  ಸುಮಾರು ೯:೦೦ ಗಂಟೆ ಸಮಯದಲ್ಲಿ ಕೋಲಾರ ತಾಲ್ಲೂಕು ಹೊನ್ನೇನಹಳ್ಳಿ ಗ್ರಾಮದ ವಾಸಿ ಯಾದ ಹೆಚ್,ಎಮ್, ರಾಮಕೃಷ್ಣ ರವರ ಮೇಲೆ  ಕ್ಷುಲ್ಲಕ ಕಾರಣಕ್ಕೆ  ಅದೇ ಗ್ರಾಮದ ವಾಸಿಗಳಾದ  ರಾಜೇಶ್ ಬಿನ್ ವೆಂಕಟಪ್ಪ, ಹರೀಶ್ ಬಿನ್ ವೆಂಕಟಪ್ಪ ,ಮತ್ತು ಯಲ್ಲಮ್ಮ ಕೋಂ ವೆಂಕಟಪ್ಪ  ರವರು ಒಟ್ಟಾಗಿ ಸೇರಿ ದೊಣ್ಣೆಗಳಿಂದ ಹೊಡೆದು ಮನೆಯ ಬಾಗಿಲನ್ನು ಮಚ್ಚಿನಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು  ಹಲ್ಲೆ ಮಾಡಿ   ಸಾಯಿಸಿಬಿಡುವುದಾಗಿ ಪ್ರಾಣಬೆದರಿಕೆ  ಹಾಕಿರುತ್ತಾನೆ.

 

ವಂಚನೆ: ಭಾರತ ಸರ್ಕಾರ ಅಮಾನ್ಯ ಮಾಡಿರುವ ೧೦೦೦=೦೦ರೂ ಮುಖ ಬೆಲೆ ಮತ್ತು ೫೦೦=೦೦ಮುಖ ಬೆಲೆಯ ಒಟ್ಟು ೩೫,೭೭,೫೦೦=೦೦ ರೂ ವಶ  ಮತ್ತು ಜನರ ಬಂದನ:

ಮಾಲೂರು  ಪೊಲಿಸ್ ಠಾಣೆಯಲ್ಲಿ ವಂಚನೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ತಾಲ್ಲೂಕು ಗೋಲ್ಡಕಾಸ್ಟ್ ಲೇಔಟ್ ಲಿಂಗಾಪುರ ರಸ್ತೆ, ಲಿಮಗಾಪುರ  ಗ್ರಾಮದ ಬಳಿ ಘಟನೆ ಸಂಭವಿಸಿರುತ್ತದೆ.,  ದಿನಾಂಕ ೧೦-೦೭-೨೦೧೯ ರಂದು  ಮದ್ಯಾಹ್ನ ೦೩:೦೦ ಗಂಟೆ ಸಮಯದಲ್ಲಿ ಖಚಿತವಾದ ವರ್ತಮಾನದ ಮೇರೆಗೆ ಸಿಬ್ಬಂದಿ ಮತ್ತು ಪಂಚರೊಂದಿಗೆ . ಮಾಲೂರು ತಾಲ್ಲೂಕು ಗೋಲ್ಡಕಾಸ್ಟ್ ಲೇಔಟ್ ಪಾರ್ಕ್‌ನಲ್ಲಿ ಆರೋಪಿಗಳು ಭಾರತ ಸರ್ಕಾರ ಅಮಾನ್ಯ ಮಾಡಿರುವ ೧೦೦೦=೦೦ರೂ ಮುಖ ಬೆಲೆ ಮತ್ತು ೫೦೦=೦೦ಮುಖ ಬೆಲೆಯ ಒಟ್ಟು ೩೫,೭೭,೫೦೦=೦೦ ರೂ ಹಣವನ್ನು ಬ್ಯಾಗ್ ನಲ್ಲಿ ಇಟ್ಟುಕೊಂಡು ಸದರಿ ಹಣವನ್ನು ಚಲಾವಣೆಯಲ್ಲಿ ಇರುವ ಹಣವನ್ನು ಪಡೆದು ಅವ್ಯವಹಾರ ಮಾಡಲು ಕಾಯುತ್ತಿದ್ದಾಗ ಸಿಬ್ಬಂದಿ ಆರೋಪಿಗಳನ್ನು ವಶಕ್ಕೆ ಪಡೆದಿರುತ್ತಾರೆ.

ಆರೋಪಿಗಳ ವಿವರ:

೧) ಅಶೋಕ್ ಬಿನ್ ವೆಂಕಟೇಶಪ್ಪ, ಚಿಂತಾಮಣಿ ತಾಲ್ಲೂಕು ಯಶವಂತಪುರ ಗ್ರಾಮ,

೨) ಆನಂದ್ ಬಿನ್ ಆಂಜಪ್ಪ ,ಚಿಂತಾಮಣಿ ತಾಲ್ಲೂಕು ಸಿದ್ದೇಪಲ್ಲಿ ಗ್ರಾಮ,,

೩) ಹರೀಶ್ ಬಾಬು ಬಿನ್ ಆನಂದರಾವ್, ,ಬೈರಮಂಗಲಮ್ , ತಮಿಳುನಾಡು

೪) ಹರೀಶ್ ಬಿನ್ ಮುನಿರಾಜು , ಕಲಮಂಗಲಮ್ ಗ್ರಾಮ ತಮಿಳುನಾಡು,

Leave a Reply

Your email address will not be published. Required fields are marked *