ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ:23-06-2020

ದಿನಾಂಕ: 22-06-2020 ಸಂಜೆ 04:೦೦ ಗಂಟೆಯಿಂದ ದಿನಾಂಕ:23- 06-2020 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ

 

ಅಕ್ರಮ ಗಾಂಜ  ಮಾರಾಟ ಓರ್ವನ ಬಂಧನ:

ವೇಮಗಲ್ ಪೊಲೀಸ್  ಠಾಣೆಯಯಲ್ಲಿ  ಅಕ್ರಮ ಗಾಂಜ ಮಾರಾಟಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ವೇಮಗಲ್ ಬಸ್ ನಿಲ್ದಾಣದ ಬಳಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೨-೦೬-೨೦೨ ರಂದು ವೇಮಗಲ್ ಪೊಲೀಸ್‌ ಠಾಣೆಯ  ಮಾನ್ಯ ಪಿ.ಎಸ್.ಐ  ಕೇಶಮೂರ್ತಿ ರವರಿಗೆ ಬಂದ ಖಚಿತ ಮಾಹಿತಿ ಮೇಲೆ  ಪಂಚರ ಸಮಕ್ಷಮದೊಂದಿಗೆ  ಸುಮಾರು ೧೨:೪೦ ಗಂಟೆ ಸಮಯಕ್ಕೆ ವೇಮಗಲ್‌ ಬಸ್ ನಿಲ್ದಾಣದಲ್ಲಿ ಅನುಮಾನಿತವಾಗಿ ಒಬ್ಬ ವ್ಯಕ್ತಿ ಕೈಯಲ್ಲಿ ಒಂದು ಬ್ಯಾಗನ್ನು ಇಟ್ಟುಕೊಂಡು ಸಮವಸ್ತ್ರದಲ್ಲಿ ಇದ್ದ ಪೊಲೀಸ್ ಸಿಬ್ಬಂದಿಯನ್ನು ನೋಡಿ ಅಲ್ಲಿಂದ ಓಡುತ್ತಿದ್ದವನನ್ನು ಪೊಲೀಸ್ ಸಿಬ್ಬಂದಿ ಹಿಮ್ಮೆಟ್ಟಿಸಿ  ಹಿಡಿದು, ಬ್ಯಾಗನ್ನು ನೋಡಲಾಗಿ ಮಾಹಿತಿ ಖಚಿತವಾಗಿದ್ದು ಸುಮಾರು ೧ ಕೆ.ಜಿ ೪೦೦ ಗ್ರಾಂನಷ್ಟು  ಗಾಂಜ ಸದರಿ ಬ್ಯಾಗ್‌ನಲ್ಲಿದ್ದು, ಮಾಲನ್ನು ಮತ್ತು ಆರೋಪಿಯನ್ನು ಪಂಚರ ಸಮಕ್ಷಮದಲ್ಲಿ ವಶಕ್ಕೆ ಪಡೆದಿರುತ್ತಾರೆ.

ಕಳವು:

ಕೋಲಾರ ನಗರ  ಪೊಲೀಸ್‌ ಠಾಣೆಯಲ್ಲಿ  ಕಳುವಿಗೆ ಸಂಬಂದಿಸಿದಂತೆ  ಪ್ರಕರಣ ದಾಖಲಾಗಿರುತ್ತದೆ. ಕೋಲಾರ ನಗರದ ಅಂತರಗಂಗೆ ರಸ್ತೆಯ ಮಯೂರ ಬೇಕರಿ ಬಳಿ  ಘಟನೆ ಸಂಭವಿಸಿರುತ್ತದೆ.  ಕೋಲಾರ ನಗರದ ಆರ್‌.ಜೆ.ಲೇ ಔಟ್ ವಾಸಿಯಾದ ಶೇಕ್ ದಸ್ತಗೀರ್‌ ಸಾಬ್ ರವರು ದಿನಾಂಕ:೨೧-೦೬-೨೦೨೦ ರಂದು ಸಂಜೆ ೫-೦೦ ಗಂಟೆ ಸಮಯದಲ್ಲಿ ಅವರ ಬಾಬತ್ತು ಕೆ.ಎ.೦೭-ಇ.ಡಿ.೪೪ ಫ್ಯಾಷನ್ ಪ್ರೋ ದ್ವಿಚಕ್ರ ವಾಹನವನ್ನು ಕೋಲಾರ ನಗರದ ಅಂತರಗಂಗೆ ರಸ್ತೆಯ ಮಯೂರ ಬೇಕರಿ ಬಳಿ  ಬೀಗ ಹಾಕಿ ಬಿಟ್ಟು ಆತನ ಸ್ನೇಹತನ ಮನೆಯ ಬಳಿ ಹೋಗಿ ವಾಪಸ್ಸು ಬಂದು ನೋಡುವಷ್ಟರಲ್ಲಿ ಯಾರೋ ಕಳ್ಳರು ಸದರಿ ದ್ವಿಚಕ್ರ ವಾಹನವನ್ನು ಕಳುವುಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ವಾಹನದ ಬೆಲೆ ರೂ.೬೦,೦೦೦-೦೦ ಗಳಾಗಿರುತ್ತದೆ.

Leave a Reply

Your email address will not be published. Required fields are marked *