ದಿನಾಂಕ: 25-06-2020 ಸಂಜೆ 04:೦೦ ಗಂಟೆಯಿಂದ ದಿನಾಂಕ: 26-06-2020 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ
ಪರಿಷಿಷ್ಠಜಾತಿ ಮತ್ತು ಪರಿಷಿಷ್ಠ ಪಂಗಡ ಜಾತಿ ನಿಂದನೆ :
ರಾಯಲ್ಪಾಡು ಪೊಲೀಸ್ಠಾಣೆಯಲ್ಲಿ ಜಾತಿ ನಿಂದನೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ಶ್ರೀನಿವಾಸಪುರ ತಾಲ್ಲೂಕು, ಚಕ್ಕಪಲ್ಲಿ ಗ್ರಾಮದ ಸರ್ವೆನಂ:೧೩೫ ಬಳಿ ಘಟನೆ ಸಂಬವಿಸಿರುತ್ತದೆ, ದಿನಾಂಕ ೨೫-೦೬-೨೦೨೦ ರಂದು ಶ್ರೀನಿವಾಸಪುರ ತಾಲ್ಲೂಕು ಜೋಡಿಲಕ್ಷ್ಮಿಸಾಗರ ಗ್ರಾಮದ ವಾಸಿ ಲಕ್ಷ್ಮಿದೇವಮ್ಮ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ ೨೩-೦೬-೨೦೨೦ ರಂದು ಪಿರ್ಯಾದಿ ಮತ್ತು ಅವರ ಗಂಡ ಮಂಜುನಾಥ್ ಎಂಬುವರು ಚಕ್ಕಪಲ್ಲಿ ಗ್ರಾಮದ ಸರ್ವೆನಂ: ೧೩೫ ಬಳಿ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ,ಗೊರವಿಮಾಕಲಹಳ್ಳೀ ಗ್ರಾಮದ ವಾಸಿಗಳಾದ ೧) ಆವುಲಪ್ಪ ಬಿನ್ ವೆಂಕಟರಾಮಣ್ಣ ,೨) ಶ್ರಿನಿವಾಸರೆಡ್ಡಿ ಬಿನ್ ಆವುಲಪ್ಪ ,೩) ಮಂಜುನಾಥ್ ಎಂಬುವರು ಹಳೇ ದ್ವೇಷದ ಹಿನ್ನೆಲೆಯಲ್ಲಿ ಏಕಾಏಕಿ ಂಉವರು ಗುಂಪುಕಟ್ಟಿಕೊಂಡು ಬಂದು ಕೈಗಳಿಂದ ಹಿಡೆದು, ಕೆಳಜಾತಿ ಎಂದು ನಿಂದಿಸಿ, ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ,