ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ:29-06-2020

ದಿನಾಂಕ: 28-06-2020 ಸಂಜೆ 04:೦೦ ಗಂಟೆಯಿಂದ ದಿನಾಂಕ: 29-06-2020 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ

 

ಕಳವು:

ಕೋಲಾರ ನಗರ  ಪೊಲೀಸ್‌ ಠಾಣೆಯಲ್ಲಿ  ಕಳುವಿಗೆ ಸಂಬಂದಿಸಿದಂತೆ  ಪ್ರಕರಣ ದಾಖಲಾಗಿರುತ್ತದೆ. ಕೋಲಾರ ನಗರದ ಎಪಿಎಂಸಿ ಮಾರ್ಕೆಟ್‌ ,ಎ.ಎನ್.ಆರ್‍ ಮಂಡಿಯ ಬಳಿ  ಘಟನೆ ಸಂಭವಿಸಿರುತ್ತದೆ.  ಚಿಕ್ಕಬಳ್ಳಾಪುರ ಜಿಲ್ಲೆ, ಚಿಂತಾಮಣಿ ತಾಲ್ಲೂಕು, ಗೌಡನಹಳ್ಳಿ ಗ್‌ಆಮದ ವಾಸಿಯಾದ  ಮಂಜುನಾಥ್‌ ಜಿ,ವಿ ಬಿನ್ ವೆಂಕಟಸ್ವಾಮಿ  ರವರು ದಿನಾಂಕ:೨೮-೦೬-೨೦೨೦ ರಂದು ಸಂಜೆ ೫-೦೦ ಗಂಟೆ ಸಮಯದಲ್ಲಿ ಅವರ ಬಾಬತ್ತು ಕೆ.ಎ.೬೭-ಇ.೨೧೫೨, ಫ್ಯಾಷನ್ ಪ್ರೋ ದ್ವಿಚಕ್ರ ವಾಹನವನ್ನು ಕೋಲಾರ ನಗರದ ಎಪಿಎಂಸಿ ಮಾರ್ಕೆಟ್‌ ,ಎ.ಎನ್.ಆರ್‍ ಮಂಡಿಯ ಬಳಿ    ಬೀಗ ಹಾಕಿ ಬಿಟ್ಟು ಮಂಡಿಯ ಬಳಿ  ಹೋಗಿ ವಾಪಸ್ಸು ಬಂದು ನೋಡುವಷ್ಟರಲ್ಲಿ ಯಾರೋ ಕಳ್ಳರು ಸದರಿ ದ್ವಿಚಕ್ರ ವಾಹನವನ್ನು ಕಳುವುಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ವಾಹನದ ಬೆಲೆ ರೂ.೩೫,೦೦೦-೦೦ ಗಳಾಗಿರುತ್ತದೆ.

 

ಕೊಲೆ:

ನಂಗಲಿ ಪೊಲೀಸ್‌ ಠಾಣೆಯಲ್ಲಿ ಕೊಲೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ಮುಳಬಾಗಿಲು ತಾಲ್ಲೂಕು, ನಿಯರ್‍ ಅಂಬಲಿಕಲ್ ಕ್ರಾಸ್ , ವಡ್ಡಹಳ್ಳಿ-ಗುಡಿಪಲ್ಲಿ  ರಸ್ತೆ, ಸರ್ವೆ ನಂ:೬೪ ಬಳಿ ಘಟನೆ ಸಂಬವಿಸಿರುತ್ತದೆ,  ಮುಳಬಾಗಿಲು ತಾಲ್ಲೂಕು ಯಲವಹಳ್ಳಿ ಗ್ರಾಮದ ವಾಸಿಯಾದ  ರಂಜಿತ್ಕುಮಾರ್‍ ಬಿನ್ ಶ್ರೀರಾಮ್‌ ಎಂಬುವರು ದಿನಾಂಕ ೨೮-೦೬-೨೦೨೦ ರಂದು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ಪರ್ಯಾದಿಯು ತನ್ನ ಹೊಲದಲ್ಲಿ ಕಡಲಿ ಬೀಜ ಬಿತ್ತನೆ ಮಾಡುವ ಸಲುವಾಗಿ ದಾನ್ಯ ತೆಗೆದುಕೊಂಡು ಹೊಲದಬಳಿ  ದಿನಾಂಕ ೨೮-೦೬-೨೦೨೦ ರಂದು ಬಂದಾಗ ಸರ್ವೆ ನಂ:೬೪  ಬಳಿ ದುರ್ವಾಸನೆ ಬರುತ್ತಿದ್ದು  ಹೋಗಿ ನೋಡಲಾಗಿ ಯಾವುದೋ ಅಪರಿಚಿತ ಮಹಿಳೆಯ  ಕೊಳೆತ ಮೃತದೇಹ ಕಂಡುಬಂದಿದ್ದು, ಯಾರೊ ದುರ್ಷರ್ಮಿಗಳು ಯಾವುದೋ ಕಾರಣಕ್ಕೆ ಕೆಲೆ ಮಾಡಿ ಪರಾರಿ ಯಾಗಿರುವುದಾಗಿ ದೂರು ನೀಡಿರುತ್ತಾರೆ,

Leave a Reply

Your email address will not be published. Required fields are marked *