ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ:30-06-2020

ದಿನಾಂಕ: 29-06-2020 ಸಂಜೆ 04:೦೦ ಗಂಟೆಯಿಂದ ದಿನಾಂಕ: 30-06-2020 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ

 

ಕಳವು:

ಗಲ್‌ಪೇಟೆ  ಪೊಲೀಸ್‌ ಠಾಣೆಯಲ್ಲಿ  ಕಳುವಿಗೆ ಸಂಬಂದಿಸಿದಂತೆ  ಪ್ರಕರಣ ದಾಖಲಾಗಿರುತ್ತದೆ. ಕೋಲಾರ ನಗರದ ರೆಹಮತ್ ನಗರದ ನೂರಾನಿ ಮಸೀದಿ  ಬಳಿ  ಘಟನೆ ಸಂಭವಿಸಿರುತ್ತದೆ.  ಸದರಿ ವಿಳಾಸದ  ವಾಸಿಯಾದ  ನವಾಜ್‌ ಪಾಷ ಬಿನ್ ಚಾಂದ್ ಬೈ    ರವರು ದಿನಾಂಕ:೨೯-೦೬-೨೦೨೦ ರಂದು ಸಂಜೆ ೫-೦೦ ಗಂಟೆ ಸಮಯದಲ್ಲಿ ಅವರ ಸಾಕಿದ್ದ ಹಸುವನ್ನು ರೆಹಮತ್ ನಗರದ ನೂರಾನಿ ಮಸೀದಿ  ಬಳಿ      ಕಟ್ಟಿಹಾಕಿ ತಾನೂ ಆಟೊ ಓಡಿಸಿ ಸಂಜೆ ನಗರದ ಒಳಗಡೆ ಹೋಗಿ ವಾಪಸ್ಸು ಬಂದು ನೋಡುವಷ್ಟರಲ್ಲಿ ಯಾರೋ ಕಳ್ಳರು ಸದರಿ ಹಸುವನ್ನು  ಕಳುವುಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ಹಸುವಿನ ಬೆಲೆ ರೂ.೨೫,೦೦೦-೦೦ ಗಳಾಗಿರುತ್ತದೆ.

 

ಹಲ್ಲೆ ಮತ್ತು ಪ್ರಾಣ ಬೆದರಿಕೆ:

ಗೌನಿಪಲ್ಲಿ ಪೊಲೀಸ್‌ ಠಾಣೆಯಲ್ಲಿ ಹಲ್ಲೆ ಮತ್ತು ಪ್ರಾಣ ಬೆದರಿಕೆಗೆ  ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ಶ್ರಿನಿವಾಸಪುರ  ತಾಲ್ಲೂಕು, ಯಾಡಗಾನಪಲ್ಲಿ ಗ್ರಾಮದ  ಬಳಿ ಘಟನೆ ಸಂಬವಿಸಿರುತ್ತದೆ,  ಸದರಿ  ಗ್ರಾಮದ ವಾಸಿಯಾದ  ವೈ, ಆರ್‍ ಶ್ರೀನಿವಾಸರೆಡ್ಡಿ ಬಿನ್ ಲೇಟ್ ರಾಮಚಂದ್ರಾರೆಡ್ಡಿ ಎಂಬುವರು ದಿನಾಂಕ ೨೯-೦೬-೨೦೨೦ ರಂದು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ಪಿರ್ಯಾದಿ ಮತ್ತು ತನ್ನ ಅಣ್ಣ ತಮ್ಮಂದಿರಿಗೆ ಜಮೀನಿನ ವಿಚಾರಗಳಲ್ಲಿ ವಿವಾದಗಳಿದ್ದು, ಅದರಂತೆ ದಿನಾಂಕ ೨೯-೦೬-೨೦೨೦ ರಂದು ತಮ್ಮ ಜಮೀನಿನಲ್ಲಿರುವ ಅರಳಿ ಮರದಲ್ಲಿ ಸೊಪ್ಪು ಕಡೆಯುತ್ತುದ್ದಾಗ, ೧) ರಘುನಾಥ್ ರೆಡ್ಡಿ, ೨) ನಾರಾಯಣರೆಡ್ಡಿ, ೩) ಲಕ್ಷ್ಮಿದೇವಮ್ಮ  ರವರು ಒಟ್ಟಿಗೆ ಬಂದು ಜಗಳ ಮಾಡಿ  ೧) ರಘುನಾಥ್ ರೆಡ್ಡಿ, ರವರ ಕೈಯಲ್ಲಿದ್ದ ಮಚ್ಚಿನಿಂದ ಪಿರ್ಯಾದಿಯ ಕಿವಿಗೆ ಹೊಡೆದು ರಕ್ತಗಾಯ ಮಾಡಿ ಹಲ್ಲೆ ಮಾಡಿ ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ,

 

ಮಹಿಳೆ ಕಾಣೆ:

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಮಹಿಳೆ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ, ಶ್ರೀನಿವಾಸಪುರ ತಾಲ್ಲೂಕು , ಶಿವಪುರ ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ,  ಸದರಿ ಗ್ರಾಮದ ವಾಸಿಯಾದ  ಮುರಳಿ ಬಿನ್ ವೆಂಕಟೇಶ್  ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ ೨೯-೦೬-೨೦೨೦ ರಂದು ತನ್ನ ಹೆಂಡತಿ ಅಂಜಲಿ ಎಂಬುವರು ೪:೩೦  ಗಂಟೆಗೆ ಮನೆಯಲ್ಲಿ ಇಲ್ಲದೇ , ಇದುವರೆಗೂ ಮನೆಗೆ ಭಾರೆದೇ ಕಾಣೆಯಾಗಿರುತ್ತಾರೆ, ಕಮ್ಮಸಂದ್ರ ವಾಸಿಯಾದ ಮಣಿ  ಎಂಬುವರ ಮೇಲೆ  ಪಿರ್ಯಾದಿದಾರ ಅನುಮಾನ ವ್ಯಕ್ತ ಪಡಿಸಿರುತ್ತಾರೆ.

Leave a Reply

Your email address will not be published. Required fields are marked *