ದಿನಾಂಕ: 30-06-2020 ಸಂಜೆ 04:೦೦ ಗಂಟೆಯಿಂದ ದಿನಾಂಕ: 01-07-2020 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ
ಹಲ್ಲೆ ಮತ್ತು ಪ್ರಾಣ ಬೆದರಿಕೆ:
ಗಲ್ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮತ್ತು ಪ್ರಾಣ ಬೆದರಿಕೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ಕೋಲಾರ ನಗರದ ಗಲ್ಪೇಟೆ ಮುಖ್ಯ ದ್ವಾರದ ಬಳಿ ಘಟನೆ ಸಂಬವಿಸಿರುತ್ತದೆ, ಕೋಲಾರ ತಾಲ್ಲೂಕು , ಗದ್ದೆಕಣ್ಣೂರು ಗ್ರಾಮದ ವಾಸಿಯಾದ ವೆಂಕಟೇಶ್ ಬಿನ್ ಲೇಟ್ ಕೃಷ್ಣಪ್ಪ ಎಂಬುವರು ದಿನಾಂಕ ೨೯-೦೬-೨೦೨೦ ರಂದು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯು ದಿನಾಂಕ ೨೯-೦೬-೨೦೨೦ ರಂದು ಕೋಲಾರ ನಗರದ ಗಲ್ಪೇಟೆ ಮುಖ್ಯ ದ್ವಾರದ ಬಳಿ ತನ್ನ ಬಾಬತ್ತು ಬಾಡಿಗೆಗೆ ನೀಡಿರುವ ಹೋಟಲ್ ಬಳಿ ನಿಂತಿದ್ದಾಗ ಗದ್ದೆಕಣ್ಣೂರು ಗ್ರಾಮದ ವಾಸಿಗಳಾದ ೧) ಕೃಷ್ಣಮೂರ್ತಿ ಬಿನ್ ನಾರಾಯಣಪ್ಪ ೨) ಶ್ರೀನಿವಾಸ ೩) ನಾಗೇಶ್ ೪) ನಾಗರಾಜ್ ಎಂಬುವರು ಒಟ್ಟಿಗೆ ಬಂದು ಅವಾಚ್ಯಶಬ್ದಗಳಿಂದ ಬೈದು, ೨೫ ಲಕ್ಷ ಚೀಟಿ ಹಣ ಪಾವತಿಸಿಲ್ಲ ಎಂದು , ಕೈಗಳಿಂದ ಹೊಡೆದು, ರಕ್ತಗಾಯ ಮಾಡಿ, ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.
ಪರಿಷಿಷ್ಠ ಜಾತಿ ಮತ್ತು ಪರಿಷಿಷ್ಠ ಪಂಗಡ ಎಂದು ಜಾತಿ ನಿಂದನೆ:
ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಪರಿಷಿಷ್ಠ ಜಾತಿ ಮತ್ತು ಪರಿಷಿಷ್ಠ ಪಂಗಡ ಎಂದು ಜಾತಿ ನಿಂದನೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ಶ್ರೀನಿವಾಸಪುರ ತಾಲ್ಲೂಕು ಕೊಪ್ಪವಾರಿಪಲ್ಲಿ ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ, ಸದರಿ ಗ್ರಾಮದ ವಾಸಿಯಾದ ಬಾಲಾಜಿ ಬಿನ್ ಚೌಡಪ್ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ ೩೦-೦೬-೨೦೨೦ ರಂದು ತಮ್ಮ ಜಮೀನಿ ಬಳಿ ಬರಿತ್ತಿರುವಾಗ ಅಲ್ಲಿಯೇ ಕುರಿ ಮೇಯಿಸುತ್ತಿದ್ದ ಸದರಿ ಗ್ರಾಮದ ವಾಸಿಯಾದ ಶುಬಾಶಂಕರರೆಡ್ಡಿ ಮತ್ತು ರಾಮಚಂದ್ರರೆಡ್ಡಿ, ೩) ಭಾಸ್ಕರ್ ಎಂಬುವರು, ಪಿರ್ಯಾದಿಯನ್ನು ಜಾತಿ ನಿಂದನೆ ಮಾಡಿ, ಅವಾಚ್ಯಶಬ್ದಗಳಿಂದ ಬೈದು, ಕೆಳ ಜಾತಿ ಎಂದು ನಿಂದನೆ ಮಾಡಿ ಅವಮಾನ ಮಾಡಿರುತ್ತಾರೆ,