ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ:02-07-2020

ದಿನಾಂಕ: 01-07-2020 ಸಂಜೆ 04:೦೦ ಗಂಟೆಯಿಂದ ದಿನಾಂಕ: 02-07-2020 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ

 

ಹಲ್ಲೆ ಮತ್ತು ಪ್ರಾಣ ಬೆದರಿಕೆ:

ನಂಗಲಿ ಪೊಲೀಸ್‌ ಠಾಣೆಯಲ್ಲಿ ಹಲ್ಲೆ ಮತ್ತು ಪ್ರಾಣ ಬೆದರಿಕೆಗೆ  ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ಮುಳಬಾಗಿಲು ತಾಲ್ಲೂಕು ಮಣಿಘಟ್ಟಮಿಟ್ಟ ಗ್ರಾಮದ  ಬಳಿ ಘಟನೆ ಸಂಬವಿಸಿರುತ್ತದೆ,  ಸದರಿ   ಗ್ರಾಮದ ವಾಸಿಯಾದ  ರೆಡೆಮ್ಮ ಕೊಂ ನಾಗರಾಜ್  ಎಂಬುವರು ದಿನಾಂಕ ೦೧-೦೭-೨೦೨೦ ರಂದು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ಪಿರ್ಯಾದಿಯು ದಿನಾಂಕ ೦೧-೦೭-೨೦೨೦ ರಂದು  ಮನೆಯ ಬಳಿ ಕೂತಿದ್ದಾಗ ಕ್ಷುಲ್ಲಕ ಕಾರಣಕ್ಕೆ  ಅದೇ ಗ್ರಾಮದ ವಾಸಿಗಳಾದ ೧) ಚಿಕ್ಕರೆಡ್ಡಪ್ಪ ೨) ರಮೇಶ್ ೩)  ನವೀನ್ ಕುಮಾರ್‍ ಎಂಬುವರು ಒಟ್ಟಿಗೆ ಏಕಾಏಕಿ ಬಂದು ಅವಾಚ್ಯ ಶಬ್ದಗಳಿಂದ ಬೈದು, ಜಗಳ ಮಾಡಿ  ಕೈಗಳಿಂದ ಹೊಡೆದು, ರಕ್ತಗಾಯ ಮಾಡಿ,  ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.

 

ಕಳವು:

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಕಳವಿಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ಶ್ರೀನಿವಾಸಪುರ ನಗರದ ಮುನಿಸಿಪಾಲ್ ಪಾರ್ಕ್ ಬಳಿ ಘಟನೆ ಸಂಬವಿಸಿರುತ್ತದೆ. ಬಂಗಾರಪೇಟೆ ತಾಲ್ಲೂಕು, ಬೂದಿಕೋಟೆ ಗ್ರಾಮದ ವಾಸಿಯಾದ ನಾರಾಯಣ ಎನ್ ಬಿನ್ ಲೇಟ್ ಚಿನ್ನಪ್ಪ ಎಂಬುವರು ದಿನಾಂಕ ೦೧-೦೭-೨೦೨೦ರಂದು ಯಾವುದೋ ಕೆಲಸದ ನಿಮಿತ್ತ ತನ್ನ ಬಾಬತ್ತು ಕೆಎ೦೮ಕೆ೨೩೭೩ ಸಂಖ್ಯೆಯ    ದ್ವಿಚಕ್ರ ವಾಹನದಲ್ಲಿ ಶ್ರೀನಿವಾಸಪುರ ನಗರಕ್ಕೆ  ಬಂದಿದ್ದು ಸದರಿ ದ್ವಿಚಕ್ರ ವಾಹನವನ್ನು  ಶ್ರೀನಿವಾಸಪುರ ನಗರದ ಮುನಿಸಿಪಾಲ್ ಪಾರ್ಕ್ ಬಳಿ ಬಿಟ್ಟು ಬೀಗ  ಹಾಕಿ, ನಗರದಲ್ಲಿ ದಿನಸಿ ಸಾಮಾಗ್ರಿಗಳನ್ನು ಖರೀದಿ ಮಾಡಿಕೊಂಡು ವಾಪಸ್ಸು ಬಂದು ನೋಡಲಾಗಿ ಪಿರ್ಯಾದಿಯ ದ್ವಿಚಕ್ರವಾಹನವನ್ನು ಯಾರೋ ಕಳ್ಳರು ಕಳವು ಮಾಡಿ ಪರಾರಿಯಾಗಿರುತ್ತಾರೆ, ಸದರಿ ದ್ವಿಚಕ್ರ ವಾಹನದ ಬೆಲೆ ಸುಮಾರು ರೂ ೨೫,೦೦೦ ಗಳಾಗಿರುತ್ತವೆ,

 

ಹಲ್ಲೆಗೆ ಪ್ರಯತ್ನ:

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ಕೋಲಾರ ತಾಲ್ಲೂಕು  ವಕ್ಕಲೇರಿ ಗ್ರಾಮದ ಸರ್ಕಾರಿ ಪ್ರೌಡಶಾಲೆ  ಮುಂಬಾಗ  ಘಟನೆ ಸಂಬವಿಸಿರುತ್ತದೆ,  ಮಾರ್ಕೊಂಡಾಪುರ ಗ್ರಾಮದ ವಾಸಿಯಾದ  ರಂಜಿತ್ ಬಿನ್ ಚಂದ್ರಪ್ಪ  ಎಂಬುವರು ಠಾಣೆಗೆ ಹಾಜರಾಗಿ  ನೀಡಿದ ದೂರಿನ ಸಾರಾಂಶವೇನೆಂದರೆ,  ದಿನಾಂಕ ೦೧-೦೭-೨೦೨೦  ರಂದು ಪಿರ್ಯಾದಿ ಮತ್ತು ತನ್ನ ಸ್ನೇಹಿತರಾದ ೧) ನಿತಿನ್ ೨)ಕಿರಣ್  ಮತ್ತು ಇತರೆ ಇಬ್ಬರು  ವ್ಯಕ್ತಿಗಳು  ಸೇರಿ  ವಕ್ಕಲೇರಿ ಗ್ರಾಮದ ಸರ್ಕಾರಿ ಪ್ರೌಡಶಾಲೆ  ಮುಂಬಾಗ   ಮಾತನಾಡಿತ್ತಿದ್ದು,  ಅದೇ ಸಮಯದಲ್ಲಿ ಪಿರ್ಯಾದಿಯ ತಂದೆ ಅಲ್ಲಿ ಬಂದು  ಇಲಿ ಏನೋ ಕೆಲಸ ನಿನಗೆ ಇವರ ಜೊತೆಯಲ್ಲಿ  ಎಂಬು ಬೈದಿದ ಕಾರಣ ಅಲ್ಲೇ ಇದ್ದ ನಿತಿನ್ ಕೋಪಗೊಂಡು ಅಲ್ಲಿಯೇ ಇದ್ದ ಮಧ್ಯದ ಬಾಟಲ್‌ನಿಂದ ಪಿರ್ಯಾದಿಯ ತಂದೆ ತಲೆಗೆ ಹೊಡೆದು ರಕ್ತಗಾಯ ಮಾಡಿ, ಕೈಗಳಿಂದ ಹೊಡೆಯುತ್ತಿದ್ದು,  ಜಗಳ ಬಿಡಿಸಲು  ಪಿರ್ಯಾದಿ ಹೋಗಿದ್ದು ಏಕಾ ಏಕಿ ಕಿರಣ್ ತನ್ನ ಬಳಿ ಇದ್ದ ಚಾಕುವಿನಿಂದ ಪಿರ್ಯಾದಿಯ ಕತ್ತಿಗೆ ಹಲ್ಲೆ ಮಾಡಿ ರಕ್ತ ಗಾಯ ಮಾಡಿ , ಹಲ್ಲೆಗೆ ಪ್ರಯತ್ನಿಸಿರುತ್ತಾರೆ,

 

 ಸರ್ಕಾರಿ ಅಧಿಕಾರಿಯ ಆದೇಶ ಉಲ್ಲಂಘನೆ:

ನಂಗಲಿ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಅಧಿಕಾರಿಯ ಆದೇಶ ಉಲ್ಲಂಘನೆ ಪ್ರಕರಣ ದಾಖಲಾಗಿರುತ್ತದೆ, ಮುಳಬಾಗಿಲು ತಾಲ್ಲೂಕು  ನಂಗಲಿ ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ,  ದಿನಾಂಕ ೦೧-೦೭-೨೦೨೦ ರಂದು ನಂಗಲಿ ಗ್ರಾಮದ ವಾಸಿ ತಲ್ಲೂಕು ಆರೋಗ್ಯ ಅಧಿಕಾರಿ   ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ ೨೭-೦೬-೨೦೨೦ ರಂದು ನಂಗಲಿ ಗ್ರಾಮದ ವಾಸಿ ರವಿ  ಎಂಬುವರನ್ನು  ಗೃಹ ಕ್ವಾರೆಂಟೈನ್‌ಗೆ ಸೂಚಿಸಿದ್ದು, ಅದರಂತೆ  ಯಾರ ಮಾತು ಕೇಳದೇ  ಸಾರ್ವಜನಿಕರಲ್ಲಿ ಒಡಾಡುತ್ತಿದ್ದು  ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತುದ್ದು,  ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ರಾಷ್ಟ್ರಿಯ ವಿಪ್ಪತ್ತು  ಕಾಯ್ದೆಯಡಿಯಲ್ಲಿ  ದೂರು ದಾಖಲಿಸಿರುತ್ತಾರೆ.

Leave a Reply

Your email address will not be published. Required fields are marked *