ದಿನಾಂಕ:28-07-2020 ಸಂಜೆ 04:೦೦ ಗಂಟೆಯಿಂದ ದಿನಾಂಕ: 29-07-2020 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರ
ಮಹಿಳೆ ಕಾಣೆಯಾಗಿರುವ ಬಗ್ಗೆ:
ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಮಹಿಳೆ ಕಾಣೆಯಾಗಿರುವ ಪ್ರಕರಣ ದಾಖಲಾಗಿರುತ್ತದೆ. , ಶ್ರೀನಿವಾಸಪುರ ತಾಲ್ಲೂಕು ಕಸಬಾ ಹೋಬಳಿ ತೆಮ್ಮಹಳ್ಲಿ ಗ್ರಾಮದ ಬಳಿ ಘಟನೆ ಸಂಬವಿಸಿರುತ್ತದೆ. ಸದರಿ ಗ್ರಾಮದ ವಾಸಿಯಾದ ಮುನಿಯಪ್ಪ ಬಿನ್ ಚಿಕ್ಕಮುನಿಯಪ್ಪ ಎಂಬು ವರು ದಿನಾಂಕ ೨೮-೦೭-೨೦೨೦ ರಂದು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತನ್ನ ಪತ್ನಿ ಯಾದ ಲಲಿತಾ ಎಂಬುವರು ದಿನಾಂಕ ೨೪-೦೭-೨೦೨೦ ರಂದು ರಾತ್ರಿ ಮನರಯಲ್ಲಿ ಮಲಗಿದ್ದು, ಮರುದಿನ ಬೆಳಿಗ್ಗೆ ಎದ್ದು ನೋಡಲಾಗಿ ಯಾರಿಗೂ ತಿಳಿಸದೇ ಮನೆಯಿಂದ ಹೊರಗೆ ಹೋದವಳು ಇದುವರೆಗೂ ಮನಗೆ ಬಾರದೇ ಕಾಣೆಯಾಗಿರುತ್ತಾರೆ. ಸ್ನೇಹಿತರು.ಹಾಗೂ ಸಂಬಂದಿಕರ ಮನೆಯಲ್ಲಿ ಇದುವರೆಗೂ ಹುಡುಕಿ ಸಿಗದೇ ಇರುವ ಕಾರಣ ತಡವಾಗಿ ದೂರು ನೀಡಿರುತ್ತಾರೆ.
ಹಲ್ಲೆಗೆ ಪ್ರಯತ್ನ:
ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಪ್ರಯತ್ನಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಶ್ರೀನಿವಾಸಪುರ ತಾಲ್ಲೂಕು ,ಎಲ್ದೂರು ಹೋಬಳಿ, ಹೊಸಹಳ್ಳಿ ಗ್ರಾಮದ ಬಳಿ ಘಟನೆ ಸಂಬವಿಸಿರುತ್ತದೆ. ಸದರಿ ಗ್ರಾಮದ ವಾಸಿಯಾದ ಗೌರಮ್ಮ ಕೊಂ ವೆಂಕಟರತ್ನಂ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಮಗೂ ಮತ್ತು ಅದೇ ಗ್ರಾಮದ ವಾಸಿಯಾದ ಹೋಟೆಲ್ ಸೀನಪ್ಪ ಎಂಬುವರಿಗೆ ಸದರಿ ಗ್ರಾಮದ ಸರ್ವೆನಂ:೧೮ ಜಮೀನಿನ ತಕಾರಾರು ಇದ್ದು, ಅದರಂತೆ ದಿನಾಂಕ ೨೧-೦೭-೨೦೨೦ ರಂದು ಪಿರ್ಯಾದಿಯ ಗಂಡ ವೆಂಕಟರತ್ನಂ ಎಂಬುವರು ಸುಮಾರು ೩:೧೫ ಗಂಟೆ ಸಮಯದಲ್ಲಿ ತಮ್ಮ ಬಾಬತ್ತು ಜಮೀನಿನಲ್ಲಿ ನೇಗಿಲು ಉಳಿಮೆ ಮಾಡುಲು ಹೋಗಿದ್ದಾಗ ಪಕ್ಕದ ಜಮೀನಿನ ಮಾಲಿಕರಾದ ಹೋಟೆಲ್ ಸೀನಪ್ಪ ಎಂಬುವರು ಹಳೇ ದ್ವೇಷದ ಹಿನ್ನೆಲೆಯಲ್ಲಿ ಜಮೀನಿನ ವಿಚಾರವಾಗಿ ಜಗಳ ತೆಗೆದು ಉದ್ದೇಶಪೂರ್ವಕವಾಗಿಯೇ ಮಚ್ಷಿನಿಂದ ಹಲ್ಲೆ ಮಾಡಲು ಹೊರಟಿದ್ದು,ಕೈಗೆ ರಕ್ತ ಗಾಯ ವಾಗಿದ್ದು, ಚಿಕಿತ್ಸೆಗೆ ಜಿಲ್ಲಾಆಸ್ಪತ್ರೆಗೆ ದಾಖಲಾಗಿದ್ದ ಕಾರಣ, ಚಿಕಿತ್ಸೆ ನಂತರ ಠಾಣೆಗೆ ಹಾಜರಾಗಿ ತಡವಾಗಿ ದೂರು ದಾಖಲಿರಿಸಿರುತ್ತಾರೆ.
ಹಲ್ಲೆ ಮತ್ತು ಪ್ರಾಣ ಬೆದರಿಕೆ:
ನಂಗಲಿ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮತ್ತು ಪ್ರಾಣಬೆದರಿಕೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ತಾಲ್ಲೂಕು ಅಮ್ಬಿಕಲ್ ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ. ಸದರಿ ಗ್ರಾಮದ ವಾಸಿಯಾದ ನಾಗೇಶ್ ಬಿನ್ ವೆಂಕಟರಾಮಯ್ಯ ಎಂಬುವರು ದಿನಾಂಕ ೨೮-೦೭-೨೦೨೦ ರಂದು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಗೆ ಮತ್ತು ಅದೆ ಗ್ರಾಮದ ವಾಸಿಗಳಾದ ಮೊಗಿಲಪ್ಪ ಎಂಬುವರಿಗೆ ಜಮೀನಿನ ವಿಚಾರವಾಗಿ ತಕರಾರು ಇದ್ದು, ಇದರಂತೆ ದಿನಾಂಕ೨೮-೦೭-೨೦೨೦ ಮೊಗಿಲಪ್ಪ ಎಂಬುವರು ಪಿರ್ಯಾದಿಯ ಮನೆಗೆ ಬಂದು ಪಿರ್ಯಾದಿಯ ಮೇಲೆ ಅವಾಚ್ಯಶಬ್ದಗಳಿಂದ ಬೈದು ಹಳೇ ದ್ವೇಷದ ಹಿನ್ನೆಲೆಯಲ್ಲಿ ಏಕಾ ಏಕಿ ದೊಣ್ಣೆಯಿಂದ ಹೊಡೆದು, ಕೈಗಳಿಂದ ಗುದ್ದಿ, ಬಾಯಿಂದ ಕಚ್ಚಿ ರಕ್ತ ಗಾಯ ಮಾಡಿ ಕುಟುಂಬ ಸಮೇತ ಜೀವ ಸಹಿತ ಬಿಡುವುದಿಲ್ಲವೆಂದು ಪ್ರಾಣ ಬೆದರಕೆ ಹಾಕಿರುತ್ತಾರೆ.
ದಿ