ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ:31-07-2020

ದಿನಾಂಕ: 30-07-2020 ಸಂಜೆ 04:೦೦ ಗಂಟೆಯಿಂದ ದಿನಾಂಕ: 31-07-2020 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ

 

ನಂಬಿಕೆ ಮತ್ತು ವಿಶ್ವಾಸ ದ್ರೋಹ :

ಶ್ರೀನಿವಾಸಪುರ  ಪೊಲೀಸ್‌ ಠಾಣೆಯಲ್ಲಿ ನಂಬಿಕೆ ಮತ್ತು ವಿಶ್ವಾಸ ದ್ರೋಹಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ಶ್ರೀನಿವಾಸಪುರ ನಗರದ ಶ್ರೀನಿವಾಸಪುರ ಕೋರ್ಟ್ ವೃತ್ತದಲ್ಲಿ ಘಟನೆ ಸಂಬವಿಸಿರುತ್ತದೆ.  ನಗರದ ವಾಸಿಯಾದ  ಮತ್ತು ಸದರಿ ಕೋರ್ಟ್‌ನಲ್ಲಿ ವಕೀಲರಾದ ಜಯರಾಮೇಗೌಡ ಬಿನ್ವೆಂಕಟೇಶಪ್ಪ ಎಂಬುವರು ದಿನಾಂಕ  ೩೧-೦೭-೨೦೨೦ ಠಾಣೆಗೆ ಹಾಜರಾಗಿ ನೀಡಿದ  ದೂರಿನ ಸಾರಾಂಶವೇನೆಂದರೆ ಅದೇ ಶ್ರೀನಿವಾಸಪುರ ನ್ಯಾಯಾಲಯದಲ್ಲಿ, ವಕೀಲ ಸಂಘದ ಅನುಮತಿ ಇಲ್ಲದೇ. ಮತ್ತು  ಅಕಿಲಭಾರತ ವಕೀಲ್ ಪರೀಕ್ಷೆಯನ್ನು ಬರೆಯದೇ ಸಂಘದ ಸದಸ್ಯನಾದ ವೆಂಕಟೇಶ್‌ ಎಂಬುವರ ಸಹಿಗಳನ್ನು ಪೊರ್ಜರಿ ಮಾಡಿ ದಾವೆಗಳನ್ನು ನಡೆಸುತ್ತಿರುವುದು ಗಮನಕ್ಕೆ ಬಂದಿದ್ದು, ಸಂಗದ ಮೂಲಕ ಎಚ್ಚರಿಕೆ ಕೊಟ್ಟರೂ ಲೆಕ್ಕಿಸದೇ ಕಾನೂನು ಬಾಹಿರ ಕೆಲಸ ಮಾಡುವುದಲ್ಲದೇ ಸಂಘದ ಹೆಸರು ಮತ್ತು ಸದಸ್ಯನ ಸಹಿಗಳನ್ನು ನಕಲಿ ಮಾಡಿ  ಬಳಸಿ   ನಂಬಿಕೆ ಮತ್ತು ವಿಶ್ವಾಸ ದ್ರೋಹ ಬಗೆದಿದದ್‌ಆರೆ ಎಂದು ದೂರು ದಾಖಲಾಗಿರುತ್ತದೆ.

ಹಲ್ಲೆಗೆ ಪ್ರಯತ್ನ:

ಕೋಲಾರ ಗ್ರಾಮಾಂತರ  ಪೊಲೀಸ್‌ ಠಾಣೆಯಲ್ಲಿ   ಹಲ್ಲೆಗೆ ಪ್ರಯತ್ನಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲ್ಲೂಕು ,ಸೂಲೂರು  ಗ್ರಾಮದ ಬಳಿ ಘಟನೆ ಸಂಬವಿಸಿರುತ್ತದೆ. ಸದರಿ ಗ್ರಾಮದ ವಾಸಿಯಾದ ಸುನಿಲ್ಕುಮಾರ್‍ ಬಿನ್ವೆಂಕಟೇಶಪ್ಪ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ತಮಗೂ ಮತ್ತು ಅದೇ ಗ್ರಾಮದ ವಾಸಿಯಾದ ಮತ್ತು ಚಿಕ್ಕಪ್ಪ ನಾದ ಗಂಗಪ್ಪ  ಎಂಬುವರಿಗೆ ಸದರಿ ಗ್ರಾಮದ ಸರ್ವೆನಂ:೬೨ ಜಮೀನಿನ ತಕಾರಾರು ಇದ್ದು, ಅದರಂತೆ ದಿನಾಂಕ ೩೧-೦೭-೨೦೨೦ ರಂದು ಸದರಿ ಜಮೀನಿನಲ್ಲಿ ಯರನ್ನೂ ಕೇಳದೇ ಏನೋ ಕೆಲಸ ಮಾಡುತ್ತಿದ್ದು,ಇದನ್ನು ಕೇಳಿದಕ್ಕೆ ಪಿರ್ಯಾದಿಯ ಮೇಲೆ  ಹಳೇ ದ್ವೇಷದ ಹಿನ್ನೆಲೆಯಲ್ಲಿ  ಜಮೀನಿನ ವಿಚಾರವಾಗಿ ಜಗಳ ತೆಗೆದು ಉದ್ದೇಶಪೂರ್ವಕವಾಗಿಯೇ ಗಂಗಪ್ಪ ಮತ್ತು ಮಗ ಗಂಗಾದರ್‌ ಹೊಡೆದು ಈ ಪೈಕಿ ಗಂಗಾದರ್‌ ಎಂಬುವರು ತನ್ನ ಕೈಯಲ್ಲಿದ್ದ ಚಾಕುವಿನಿಂದ ಪಿರ್ಯಾದಿಯ ಹೊಟ್ಟೆಗೆ ತಿವಿದು ಹಲ್ಲೆ ಮಾಡಿ ಹೊರಟಿದ್ದು,ಕೈಗೆ ರಕ್ತ ಗಾಯ ವಾಗಿದ್ದು, ಚಿಕಿತ್ಸೆಗೆ ಜಿಲ್ಲಾಆಸ್ಪತ್ರೆಗೆ ದಾಖಲಾಗಿದ್ದ ಕಾರಣ, ಚಿಕಿತ್ಸೆ ನಂತರ ಠಾಣೆಗೆ ಹಾಜರಾಗಿ ತಡವಾಗಿ ದೂರು ದಾಖಲಿರಿಸಿರುತ್ತಾರೆ.

Leave a Reply

Your email address will not be published. Required fields are marked *