ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ:03-08-2020

ದಿನಾಂಕ: 02-08-2020 ಸಂಜೆ 04:೦೦ ಗಂಟೆಯಿಂದ ದಿನಾಂಕ: 03-08-2020 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ

 

ನಂಗಲಿ  ಪೊಲೀಸ್‌ ಠಾಣೆಯಲ್ಲಿ ಕಳವಿಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ,  ಮುಳಬಾಗಿಲು ತಾಲ್ಲುಕು ರಾಜೇಂದ್ರಹಳ್ಳಿ ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ, ಸದರಿ ಗ್ರಾಮದ ವಾಸಿಯಾದ ಗೋಪಾಲಕ್ರಿಷ್ಣ ಎಂಬುವರು  ತನ್ನ ಹೊಸದಾಗಿ ಖರೀದಿ ಮಾಡಿರುವ ಚಾರ್ಸಿ ನಂ:14D2A11C44KCG41868  ENGG NO: DHYCKGE4249 ಸಂಖ್ಯೆಯ ಪಲ್ಸರ್‌ ದ್ವಿಚಕ್ರವಾಹನ ವಾಹನವನ್ನು ದಿನಾಂಕ ೨೧-೦೭-೨೦೨೦ ರಂದು ತನ್ನ ಮನೆಯ ಬಳಿ ನಿಲ್ಲಿಸಿ ಬೆಳಗಿನ ಜಾವ ನೋಡಲಾಗಿ  ಸದರಿ ದ್ವಿಚಕ್ರವಾಹನವನ್ನು ಯಾರೋ ಕಳ್ಳರು ಕಳವು ಮಾಡಿ ಪರಾರಿಯಾಗಿರುತ್ತಾರೆ, ಸದರಿ ದ್ವಿಚಕ್ರ ವಾಹನದ ಬೆಲೆ ಸುಮಾರು ರೂ ೮೦,೦೦೦ ಗಳಾಗಿರುತ್ತವೆ.

ರಾತ್ರಿ ಕಳವು:

ಮಾಸ್ತಿ ಪೋಲೀಸ್ ಠಾಣೆಯಲ್ಲಿ ರಾತ್ರಿಕಳವಿಗೆ ಸಂಬಂದಿಸಿದಂತೆ  ಪ್ರಕರಣ ದಾಖಲಾಗಿರುತ್ತದೆ, ಮಾಲೂರು ತಾಲ್ಲೂಕು ಹುಲದೇನಹಳ್ಳಿ ಗ್ರಾಮದಲ್ಲಿ ಪಿರ್ಯಾದಿಯ ಮನೆಯಲ್ಲಿ ಘಟನೆ ಸಂಬವಿಸಿರುತ್ತದೆ. ಸದರಿ ಗ್ರಾಮದ ವಾಸಿಯಾದ  ಸರಳ ಕೊಂ ಲೇಟ್‌ ಎಚ್ ಎಸ್ ಬಾಲಕೃಷ್ಣ ಎಂಬುವರು ದಿನಾಂಕ ೦೨-೦೮-೨೦೦ ರಂದು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ , ಪಿರ್ಯಾದಿಯು ದಿನಾಂಕ ೨೭-೦೭-೨೦೨೦ ರಂದು  ತಮಿಳುನಾಡಿನ ಕಮ್ಮನಹಳ್ಳಿ ಗ್ರಾಮಕ್ಕೆ ತನ್ನ ತಂದೆ ತೀರಿಕೊಂಡಿರುವ ಕಾರಣ ಮನೆಯನ್ನು ಬೀಗ ಹಾಕಿಕೊಂಡು ತಮಿಳುನಾಡಿಗೆ ಹೊಗಿದ್ದು, ಇದೇ ಸಮಯವನ್ನು ಅವಕಾಶವನ್ನಾಗಿ ಮಾಡಿಕೊಂಡು  ಯಾರೊ ಕಳ್ಳರು ೦೨-೦೮-೨೦೨೦ ರಂದು ರಾತ್ರಿ ಮನೆಗೆ ನುಗ್ಗಿ ಮನೆಯ ಬಾಗಿಲು ಮುರಿದು,  ಮೆನೆಯಲ್ಲಿದ್ದ  ಸುಮಾರು ೨,೧೯,೦೦೦ ರೂ ನಗದು, ಮತ್ತು ೧) ೧ ನಕ್ಲೀಸ್ (೨೮)ಗ್ರಾಂ ೨)ಓಲೆ ಮತ್ತು ಮಾಟಿ (೧೯)ಗ್ರಾಂ ೩)ಕತ್ತಿನ ಸರ (೨೦) ಗ್ರಾಂ  ಒಟ್ಟು ೧೧೫ ಗ್ರಾಂ ಬಂಗಾರ ಮತ್ತು ೨ ಕೆ ಜಿ ೫೦೦ ಗ್ರಾಂ  ಬೆಳ್ಳಿ  ಸುಮಾರು ೭೫,೦೦೦ ರೂ  ಗಳನ್ನು ಕಳವು ಮಾಡಿ ಪರಾರಿಯಾಗಿರುತ್ತಾರೆ. ಎಂದು ಪಿರ್ಯಾದಿ ದೂರು ದಾಖಲಿರಿಸಿರುತ್ತಾರೆ,

 

ಮಹಿಳೆ ಕಾಣೆಯಾಗಿರುವ ಬಗ್ಗೆ:

ಶ್ರೀನಿವಾಸಪುರ ಪೊಲೀಸ್‌ ಠಾಣೆಯಲ್ಲಿ  ಮಹಿಳೆ ಕಾಣೆಯಾಗಿರು ಬಗ್ಗೆ  ಪ್ರಕರಣ  ದಾಖಲಾಗಿರುತ್ತದೆ, ಶ್ರೀನಿವಾಸಪುರ ತಾಲ್ಲೂಕು   ಕಟ್ಟೆಕೆಳಗಿನ ಪಾಳ್ಯ ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ,  ಸದರಿ ಗ್ರಾಮದ ವಾಸಿಯಾದ  ವೇಣುಗೋಪಾಲ್  ಬಿನ್ ವೆಂಕಟೇಶಪ್ಪ ಎಂಬುವರ ಮಗಳು  ಪ್ರಮೀಳ (೨೦) ವರ್ಷ ಎಂಬುವರು ದಿನಾಂಕ೩೧-೭-೨೦೨೦ ರಂದು ರಾತ್ರಿ ಮನೆಯಲ್ಲಿ ಮಲಗಿದ್ದು ಮರುದಿನ  ಬೆಳ್ಳಿಗ್ಗೆ   ಚೌಡೇಶ್ವರಿ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವಳು ಮರುಳಿ ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ.

Leave a Reply

Your email address will not be published. Required fields are marked *