ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ:04-08-2020

ದಿನಾಂಕ: 03-08-2020 ಸಂಜೆ 04:೦೦ ಗಂಟೆಯಿಂದ ದಿನಾಂಕ: 04-08-2020 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ

 

ಕಳವು :

ಗಲ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಕಳವಿಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ,  ನಿಯರ್‌ ಮಲ್ಲಿಕಾ ಬಾರ್‍ , ಮೆಕಕೆ ಸರ್ಕಲ್‌ ಬಳಿ ಘಟನೆ  ಸಂಬವಿಸಿರುತ್ತದೆ,  , ಕೋಲಾರ ನಗರದ ನಿವಾಸಿಯಾದ  ರಾಮಚಂದ್ರ ಚಾರಿ ಬಿನ್ ಶ್ರೀ ಶೈಲೇಂದ್ರಚಾರಿ  ಎಂಬುವರು  ದಿನಾಂಕ ೦೩-೦೮-೨೦೨೦ ರಂಧು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನನೆಂದರೆ ಪಿರ್ಯಾದಿ ದಿನಂಪ್ರತಿ ತನ್ನ ಬಾಬತ್ತು  ಕೆಎ ೦೭ಎಸ್೦೯೭೬ ದ್ವಿಚಕ್ರ ವಾಹನವನ್ನು ಮಲ್ಲಿಕಾ ಬಾರ್‍ , ಮೆಕಕೆ ಸರ್ಕಲ್‌ ಬಳಿ ನಿಲ್ಲಿಸಿ  ನರಸಾಪುರದ ಪ್ಯಾಕ್ಟರಿಕೆ  ಕೆಲಸಕ್ಕೆ ಹೋಗಿ ಸಾಯಂಕಾಲ ಬಂದು ನೋಡಲಾಗಿ,    ಸದರಿ ದ್ವಿಚಕ್ರವಾಹನವನ್ನು ಯಾರೋ ಕಳ್ಳರು ಕಳವು ಮಾಡಿ ಪರಾರಿಯಾಗಿರುತ್ತಾರೆ, ಸದರಿ ದ್ವಿಚಕ್ರ ವಾಹನದ ಬೆಲೆ ಸುಮಾರು ರೂ ೧೫,೦೦೦ ಗಳಾಗಿರುತ್ತವೆ.

 

ವ್ಯಕ್ತಿ ಕಾಣೆಯಾಗಿರುವ ಬಗ್ಗೆ:

ಗಲ್‌ಪೇಟೆ ಪೊಲೀಸ್‌ ಠಾಣೆಯಲ್ಲಿ  ವ್ಯಕ್ತಿ ಕಾಣೆಯಾಗಿರು ಬಗ್ಗೆ  ಪ್ರಕರಣ  ದಾಖಲಾಗಿರುತ್ತದೆ, ನಗರದ ನೂರ್‌ ನಗರದಲ್ಲಿ  ಘಟನೆ ಸಂಬವಿಸಿರುತ್ತದೆ,  ಸದರಿ ಸದರಿ ವಿಳಾಸದ ವಾಸಿಯಾದ  ಗಾಯತ್ರಿ ಎಂಬುವರು   ದಿನಾಂಕ ೦೩-೦೮-೨೦೨೦ ರಂದು ಠಣೆಗೆ ಹಾಜರಾಗಿ ನಿಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿ ಶ್ರೀನಿವಾಸಪುರ ತಾಲ್ಲುಕು ಅತ್ತಿಕುಂಟೆ ಗ್ರಾಮದ ವಾಸಿಯಾದ  ಲೇಟ್‌ ವರದಪ್ಪ ಎಂಬುವರನ್ನು  ಇದೇ ವರ್ಷ ವಿವಾಹವಾಗಿದ್ದು, ಸಾಂಸಾರಿಕವಾಗಿ ಇಬ್ಬರೂ ಚೆನ್ನಾಗಿದ್ದು, ದಿನಾಂಒ ೦೩-೦೮-೨೦೨೦ ರಂದು ತನ್ನ ಸ್ವಂತ ಗ್ರಾಮಕ್ಕೆ ಹೋಗಿ ಬರಿವುದಾಗಿ ತಿಳಿಸಿ ಹೋದವರು ಇದುವರೆಗೂ ಮನೆಗೆ ಬಾರದೇ ತನ್ನ ಮೊಬೈಲ್‌ನ್ನು ಸ್ವಿಚ್‌ ಆಪ್‌ ಮಾಡಿಕೊಂಡು  ಮನೆಗೆ ಬಾರದೇ ಕಾಣೆಯಾಗಿರುತ್ತಾರೆ ಎಂದು ಪಿರ್ಯಾದಿ ದೂರು ದಾಖಲಿರಿಸಿರುತ್ತಾರೆ,

 

ಕೊಲೆ:

ಕೋಲಾರ ನಗರ ಪೊಲೀಸ್‌ ಠಾಣೆಯಲ್ಲಿ ಕೊಲೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ನಗರದ ಶಹೀಂಶಾ ನಗರ್‌ ನಿಯರ್‍ ರೈಲ್ವೆ ಟ್ರಾಕ್‌ ಬಳಿ ಘಟನೆ ಸಂಬವಿಸಿರುತ್ತದೆ.  ಕೋಲಾರ ನಗರದ ಎಲೆಕ್ತಾನಿಕ್‌ ಕಾಲೋನಿ ಶೇಕ್‌ ಮೊಹಿಸುದ್ದೀನ್‌ ನಗರದ ವಾಸಿಯಾದ ಇನಾಯತ್‌ಉಲ್ಲಾ ಬಿನ್ ಶೇಕ್‌ ಅಮೀರ್‌ ಜಾನ್‌ ಎಂಬುವರು ದಿನಾಂಕ ೦೪-೦೮-೨೦೨೦ ರಂದು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ಪಿರ್ಯಾದಿಯ ಸ್ವಂತ್ ತಮ್ಮ ನಾದ ಮೌಲಿ ಬಿನ್  ಶೇಕ್‌ ಅಮೀರ್‌ ಜಾನ್‌ ಎಮಬುವರು ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮತ್ತು ಡ್ರೈವಿಂಗ್‌ ಕೆಲಸ ಮಾಡುತ್ತಿದ್ದು, ಅವನಿಗೆ ನಗರದ  ಮಹಾಲಕ್ಷ್ಮಿ ಲೇಔಟ್‌ನ ವಾಸಿಯಾದ ಪಾಜಿಲ್‌ ಮತ್ತು ದರ್ಗಾ ಮೊಹೊಲ್ಲದ ವಾಸಿಯಾದ ನಹೀಮ್‌ ಎಂಬುವರು ಸ್ನೇಹಿತರಿದ್ದು, ಇವರ ಮದ್ಯೆ ಯಾವುದೋ ಹಣದ ವಿಚಾರಕ್ಕೆ ಜಗಳ ಉಂಟಾಗಿ ದಿನಾಂಕ ೦೩-೦೮-೨೦೨೦ ರಂದು ಮೌಲಿ ಕರೆ ಮಾಡಿ  ಶಹೀಂಶಾ ನಗರ್‌ ನಿಯರ್‍ ರೈಲ್ವೆ ಟ್ರಾಕ್‌ ಬಳಿ ಬಾ ಇನ್ನ ಬಳಿ ಮಾತನಾಡಬೇಕು ಎಂದು ಹೇಳಿ ಕರೆಸಿ , ಯಾವುದೋ ಆಯುದಗಳಿಂದ ಕತ್ತಿಗೆ ಮತ್ತು ತಲೆಗೆ ಬಲವಾಗಿ ಹೊಡೆದು  ಯೋಜಿತವಾಗಿಯೇ ಕೆಲೆ ಮಾಡಿರುತ್ತಾರೆ ಎಂದು ಪಿರ್ಯಾದಿ  ದೂರು ದಾಖಲಿಸಿರುತ್ತಾರೆ,

Leave a Reply

Your email address will not be published. Required fields are marked *