ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ:08-09-2020

ಕಳವು:

ಮುಳಬಾಗಿಲು ನಗರ  ಪೊಲೀಸ್‌ ಠಾಣೆಯಲ್ಲಿ ಕಳವಿಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ಮುಳಬಾಗಿಲು ನಗರದ    ಎಸ್ ಎಲ್ ವಿ  ಬಿಂದು ಡಾಬಾ ಸೋಮೇಶನಪಾಳ್ಯ ಬಳಿ ಘಟನೆ ಸಂಬವಿಸಿರುತ್ತದೆ, ಹೊಸಪಾಳ್ಯ ,ಮೊದಲನೇ ಕ್ರಾಸ್ ನಿಯರ್‍ ಗಂಗಮ್ಮ ಗುಡಿ  ವಿಳಾಸದ ನಿವಾಸಿಯಾದ ಶಿವಕುಮಾರ್‌ ಬಿನ್ ಚಿನ್ನವೆಂಕಟಪ್ಪ ಎಂಬುವರು ದಿನಾಂಕ೦೭-೦೯-೨೦೨೦ ರಂದು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ ೨೯-೦೮-೨೦೨೦ ರಂದು ತನ್ನ ಬಾಬತ್ತು ಸಂಖ್ಯೆ  ಕೆ.ಎ೦೭ ಇ.ಎ ೬೩೫೭  ಹೋಂಡಾ ದ್ವಿಚಕ್ರ ವಾಹನವನ್ನು  ನಗರದ    ಎಸ್ ಎಲ್ ವಿ  ಬಿಂದು ಡಾಬಾ ಸೋಮೇಶನಪಾಳ್ಯ ಬಳಿ ನಿಲ್ಲಿಸಿ ಊಟ  ಪಾರ್ಸಲ್‌ ಪಡೆದು ಬರುಷ್ಟರಲ್ಲಿ ಸದರಿ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿ ಪರಾರಿಯಾಗಿರುತ್ತಾರೆ,  ಸದರಿ ದ್ವಿಚಕ್ರ ವಾಹನದ ಬೆಲೆ ಸುಮಾರು ರೂ ೨೮,೦೦೦

ಕಳವು:

ಮಾಲುರು ಪೊಲೀಸ್‌ ಠಾಣೆಯಲ್ಲಿ ಕಳವಿಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ನಗರದ     ೪ ನೇ ಪೇಸ್‌ ಶಾಬೊಲ್ಲಾ ಗ್ರಾನೆಟ್‌ ಪ್ಯಾಕ್ಟರಿ  ಮಾಲೂರು  ಇಂಡಸ್ಟ್ರಿಯಲ್ ಏರಿಯಾ  ಬಳಿ ಘಟನೆ ಸಂಬವಿಸಿರುತ್ತದೆ, ಮಣಿಕುಂಟೆ ಹೊಸೂರು  ಗ್ರಾಮ ದೊಡ್ಡಜಾಲ ಅಂ, ಬೆಂಗಳೂರು , ಸದರಿ ವಿಳಾಸದ ನಿವಾಸಿಯಾದ ಸುನಿಲ್‌ಕುಮಾರ್‌  ಬಿನ್ ಮಂಜಪ್ಪ ಎಂಬುವರು ದಿನಾಂಕ೦೭-೦೯-೨೦೨೦ ರಂದು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ ೦೪-೦೬ -೨೦೨೦ ರಂದು ತನ್ನ ಬಾಬತ್ತು ಸಂಖ್ಯೆ  ಕೆ.ಎ ೫೦ ಕ್ಯೂ ೮೮೫೨ ದ್ವಿಚಕ್ರ ವಾಹನವನ್ನು  ನಗರದ    ೪ ನೇ ಪೇಸ್‌ ಶಾಬೊಲ್ಲಾ ಗ್ರಾನೆಟ್‌ ಪ್ಯಾಕ್ಟರಿ  ಮಾಲೂರು  ಇಂಡಸ್ಟ್ರಿಯಲ್ ಏರಿಯಾ  ಬಳಿ  ನಿಲ್ಲಿಸಿ ಲೋಡ್‌ ಮಾಡಿಕೊಂಡು ಬೆಂಗಳೂರಿಗೆ ಹೋಗಿ ಮರು ದಿನ ಮನೆಗೆ ಹೋಗಲು  ದ್ವಿಚಕ್ರ ವಾಹನ ನೋಡಲಾಗಿ  ಸದರಿ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿ ಪರಾರಿಯಾಗಿರುತ್ತಾರೆ,  ಸದರಿ ದ್ವಿಚಕ್ರ ವಾಹನದ ಬೆಲೆ ಸುಮಾರು ರೂ ೨೫,೦೦೦

ಮಾರಣಾಂತಿಕ ರಸ್ತೆ ಅಪಗಘಾತ:

ಮುಳಬಾಗಿಲು ನಗರ  ಪೊಲೀಸ್‌ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಗಘಾತಕ್ಕೆ  ಸಂಬಂದಿಸಿಒದಂತೆ ಪ್ರಕರಣ ದಾಖಲಾಗಿರುತ್ತದೆ, ಮುಳಬಾಗಿಲು ಕೋಲಾರ  ನಗರದ NH-75    ನಿಯರ್‌  ಪೆಟ್ರೋಲ್‌ ಬಂಕ್‌ ಬಳಿ ಘಟನೆ ಸಂಬವಿಸಿರುತ್ತದೆ, ಮುಳಬಾಗಿಲು ತಾಲ್ಲೂಕು  ಕುರುಬರಪೇಟೆ  ನಿವಾಸಿಯಾದ ಜಬಿಯುಲ್ಲಾಖಾನ್ ಬಿನ್ ಶೈಕ್ ಯಾಕುಬ್‌ ಖಾನ್  ಎಂಬುವರು ದಿನಾಂಕ೦೭-೦೯-೨೦೨೦ ರಂದು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ ೦೮-೦೯-೨೦೨೦ ರಂದು ತನ್ನ ಬಾಬತ್ತು ಹೋಂಡಾ ದ್ವಿಚಕ್ರ ವಾಹನದಲ್ಲಿ ಮುಳಬಾಗಿಲು ಕೋಲಾರ  ನಗರದ NH-75    ನಿಯರ್‌  ಪೆಟ್ರೋಲ್‌ ಬಂಕ್‌ ಬಳಿ ಬರುತ್ತಿರುವಾಗ  ಯಾವುದೋ ವಾಹನ ಒಬ್ಬ ಅಪರಿಚಿತ ವ್ಯಕ್ತಿಗೆ ಅಪಗಘಾತ ಉಂಟುಮಾಡಿ  ಮೂಳೆ ಮುರಿತ ಗಾಯ, ತೀವ್ರ ಗಾಯ ಉಂಟು ಮಾಡಿ ವಾಹನ ನಿಲ್ಲಿಸದೇ ಅಲ್ಲಿಂದ ಹೊರಟು ಹೋಗಿದ್ದು, ಅಪಗಾತಕ್ಕೆ ಒಳಗಾದ ಆಸಾಮಿ ಸ್ಥಳದಲ್ಲೇ  ಮೃತಪಟ್ಟಿರುತ್ತಾರೆ,ಮುಂದಿನ ಕ್ರಮಕ್ಕಾಗಿ ಪಿರ್ಯಾದಿ ದೂರು ದಾಖಲಿಸಿರುತ್ತಾರೆ,

 

Leave a Reply

Your email address will not be published. Required fields are marked *