ಯುವತಿ ಕಾಣೆಯಾಗಿರುವ ಬಗ್ಗೆ:
ನಂಗಲಿ ಪೊಲೀಸ್ ಠಾಣೆಯಲ್ಲಿ ಯುವತಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ತಾಲ್ಲೂಕು ಹಿರಣ್ಯಗೌಡನಹಳ್ಳಿ ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ. ಸದರಿ ಗ್ರಾಮದ ವಾಸಿಯಾದ ಬೀರಪ್ಪ ಬಿನ್ ಲೇಟ್ ಮುನೆಪ್ಪ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯ ಮಗಳು ಕುಮಾರಿ ಪ್ರೇಮ(೧೯) ವರ್ಷ ಎಂಬುವರು ದಿನಾಂಕ ೦೬-೦೯-೨೦೨೦ ರಂದು ಸಂಜೆ ಸುಮಾರು ೭:೩೦ ಗಂಟೆ ಸಮಯದಲ್ಲಿ ಮನೆಯಿಂದ ಹೊರಗೆ ಹೋದವರು ಮರುಳಿ ಮನೆಗೆ ಬಾರದೇ ಮತ್ತು ಸಂಬಂದಿಕರ ಮನೆಗಳಲ್ಲಿ ಇರದೇ ಕಾಣೆಯಾಗಿರುತ್ತಾಳೆ.
ಹಲ್ಲೆ ಮತ್ತು ಪ್ರಾಣ ಬೆದರಿಕೆ:
ಗಲ್ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮತ್ತು ಪ್ರಾಣ ಬೆದರಿಕೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ಕೋಲಾರ ನಗರದ , ಗಾಂದಿನಗರದ ಮಣಿಗಟ್ಟ ರಸ್ತೆ, ನಿಯರ್ ವಾಟರ್ ಪ್ಲಾಂಟ್ ಬಳಿ ಘಟನೆ ಸಂಬವಿಸಿರುತ್ತದೆ, ೧ನೇ ಮೈನ್ ೧೫ ನೆ ಕ್ರಾಸ್, ಗಾಂದಿನಗದ ನಿವಾಸಿ ನವೀನ್ ಕುಮಾರ್ ( ಗೃಹರಕ್ಷಕದಳ) ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ ೦೭-೦೯-೨೦೨೦ ರಂದು ತಾನು ಗಾಂದಿನಗರದ ಮಣಿಗಟ್ಟ ರಸ್ತೆ, ನಿಯರ್ ವಾಟರ್ ಪ್ಲಾಂಟ್ ಬಳಿ ಬರುತ್ತಿದ್ದಾಗ ಹಳೆ ದ್ವೇಷದ ಹಿನ್ನೆಲೆಯಲ್ಲಿ ಅದೇ ವಿಳಾಸದ ವಾಸಿಗಳಾದ ೧)ಗೋಪಾಲ್ ೨)ರಾಮು ೩)ಶ್ರೀನಿವಾಸ್ ಎಂಬಿವರು ಪಿರ್ಯಾದಿಯನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು, ಹೊಟ್ಟೆಗೆ ಚೂಪಾದ ಕಲ್ಲಿನಿಂದ ತಿವಿದು, ರಕ್ತಗಾಯ ಮಾಡಿ ಹಲ್ಲೆ ಮಾಡಿ ಸಾಯಿಸಿಬಿಡುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ,