ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ:10-09-2020

ದಿನಾಂಕ: 09-09-2020 ಸಂಜೆ 04:೦೦ ಗಂಟೆಯಿಂದ ದಿನಾಂಕ: 10-02-2020 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ

 

 

ಮಾರಣಾಂತಿಕ ರಸ್ತೆ ಅಪಘಾತ:

ಗೌನಿಪಲ್ಲಿ ಪೊಲೀಸ್  ಠಾಣೆಯಲ್ಲಿ  ಮಾರಣಾಂತಿಕ ರಸ್ತೆ ಅಪಘಗಾತಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ ,  ಶ್ರೀನಿವಾಸಪುರ ನಗರದ  ನಾಡಕಛೇರಿ ಬಳಿ ಘಟನೆ ಸಂಬವಿಸಿರುತ್ತದೆ,  ಶ್ರೀನಿವಾಸಪುರ ತಾಲ್ಲೂಕು  ಚಿಲ್ಲರಪಲ್ಲಿ ಗ್ರಾಮದ ವಾಸಿಯಾದ  ವಿಶ್ವನಾಥ್‌ ಬಿನ್ ವೇಮರೆಡ್ಡಿ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ೩೦-೦೯-೨೦೨೦ ರಂದು ಪಿರ್ಯಾದಿಯು ತನ್ನ ಸ್ವಂತ ಕೆಲಸದ ಮೇಲೆ  ಶ್ರೀನಿವಾಸಪುರಕ್ಕೆ ಬಂದಿದ್ದು ಅದರಂತೆ  ಸುಮಾರು ೧೧:೦೦ ಗಂಟೆ ಸಮಯದಲ್ಲಿ ಚಿಲ್ಲರಪಲ್ಲಿ ಗ್ರಾಮದ ವಾಸಿಯಾದ   ಶ್ರೀನಿವಾಸರೆಡ್ಡಿ ರವರು ತಮ್ಮ ಬಾಬತ್ತು ಕೆ.ಎ೦೭ ಸಿ.೮೨೨೩ ಎಂಬ ದ್ವಿಚಕ್ರ ವಾಹನದಲ್ಲಿ ಹಿಂಬದಿಯಲ್ಲಿ ಅದೇ ಗ್ರಾಮದ ವಾಸಿಯಾದ  ವೆಂಕಟರಾಮರೆಡ್ಡಿ ಎಂಬುವರು ಕೂತಿದ್ದು,  ವಾಸಿಯಾದ   ಶ್ರೀನಿವಾಸರೆಡ್ಡಿ ರವರ ಅತಿ ವೇಗ ಮತ್ತ ಅಜಾಗರುಕತೆ ಚಾಲನೆಯಿಂದ  ಶ್ರೀನಿವಾಸಪುರ ನಗರದ  ನಾಡಕಛೇರಿ ಬಳಿ ವಾಹನ ಸಮೆತ ಇಬ್ಬರು ಕೆಳಗೆ ಬಿದ್ದು ಇದರಲ್ಲಿ ಹಿಂಬದಿ ಕೂತಿದ್ದ ವೆಂಕಟರಾಮರೆಡ್ಡಿ ಎಂಬುವರ ತಲೆಗೆ ತೀವ್ರ ಗಾಯವಾಗಿದ್ದು, ಚಿಕಿತ್ಸೆಗಾಗಿ ಗೌನಿಪಲ್ಲಿ  ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಿದ್ದು , ವೈದ್ಯರ ಸಲಹೆ ಮೇಲೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಹಾಸ್ಮೆಟ್‌ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಪಲಕಾರಿಯಾಗದೇ ೦೯-೦೯-೨೦೨೦ ರಂದು ೧೧:೦೦ ಗಂಟೆಗೆ ಮೃತಪಟ್ಟಿರುತ್ತಾರೆ ,

ಅಕ್ರಮ ಗಾಂಜಾ ಮಾರಾಟ ಮೂವರ ಬಂದನ:

ವೇಮಗಲ್‌ ಪೊಲೀಸ್‌ ಠಾಣೆಯಲ್ಲಿ  ಅಕ್ರಮ ಗಾಂಜಾ ಮಾರಟಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ,  ಕೋಲಾರ ತಾಲ್ಲೂಕು  ಶೆಟ್ಟಿಕಟ್ಟನೂರು ಗೇಟ್‌ ಬಳಿ ಘಟನೆ ಸಂಬವಿಸಿರುತ್ತದೆ,  ದಿನಾಂಕ ೦೯-೦೯-೨೦೨೦ ರಂದು  ಶೆಟ್ಟಿಕಟ್ಟನೂರು ಗೇಟ್‌ ಬಳಿ ಮೂವರು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ವೇಮಗಲ್‌ ಪೊಲೀಸ್‌ ಠಾಣೆಯ ಪಿ ಎಸ್ ಐ ವೆಂಕಟೇಶ್‌ ಮುರ್ತಿ ಮತ್ತು ತಮ್ಮ ತಂಡ ಪಂಚರ ಸಮಕ್ಷಮದಲ್ಲಿ  ಸುಮಾರು ೧:೦೦ ಗಂಟೆ ಸಮಯಕ್ಕೆ   ಶೆಟ್ಟಿಕಟ್ಟನೂರು ಗೇಟ್‌ ಬಳಿ ಇದ್ದ ಅನುಮಾನಸ್ಪದವಾಗಿ ಕೈಯಲ್ಲಿ ಕವರ್‌ ಹಿಡಿದು ನಿಂತಿದ್ದ ಯುವಕರನ್ನು ವಶಕ್ಕೆ ಪಡೆದು ಅವರ ಬಳಿ ಇದ್ದ ಕವರ್‌ ನ್ನು ಪರಿಶೀಲಿಸಿದಾ ಮಾಹಿತಿ ಕಚಿತ ವಾಗಿದ್ದು, ಸದರಿ ಕವರ್‌ ನಲ್ಲಿ ಸುಮಾರು ೨೫೦ ಗ್ರಾಂ ಗಾಂಜಾ ಇದ್ದು ಸದರಿ ಅರೋಪಿಗಳನ್ನು ವಶಕ್ಕೆ ಪಡೆದು, ಸದರಿ ಮಾಲ್ಲಿ ಪಂಚರ ಸಮಕ್ಷಮದಲ್ಲಿ  ವಶಕ್ಕೆ ಪಡೆದಿರುತ್ತಾರೆ ದರಿ ಮಾಲ್‌ನ ಬೆರೆ ಸುಮಾರು ೧೩,೦೦೦ ರೂ ಎಂದು ಅಂದಾಜಿಸಲಾಗಿರುತ್ತದೆ.

Leave a Reply

Your email address will not be published. Required fields are marked *