ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ:11-09-2020

ದಿನಾಂಕ: 10-09-2020 ಸಂಜೆ 04:೦೦ ಗಂಟೆಯಿಂದ ದಿನಾಂಕ: 11-02-2020 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ

 

ಯುವಕ ಕಾಣೆಯಾಗಿರುವ ಬಗ್ಗೆ ;

 ಶ್ರೀನಿವಾಸಪುರ ಪೊಲಿಸ್‌ ಠಾಣೆಯಲ್ಲಿ ಯುವಕ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ, ಶ್ರೀನಿವಾಸಪುರ ತಾಲ್ಲೂಕು ಕೊಲ್ಲೂರು ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ,  ಸದರಿ ಗ್ರಾಮ ವಾಸಿಯಾದ  ಶಂಕರರೆಡ್ಡಿ ಬಿನ್ ಚಿಕ್ಕ  ನಾರಾಯಣರೆಡ್ಡಿ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಸವೇನೆಂದರೆ ತಮ್ಮ  ಎರಡನೆ ಮಗ  ಮಂಜುನಾಥ್‌ ಕೆ.ಎಸ್‌  ಎಂಬುವರು  ದಿನಾಂಕ ೧೩-೦೭-೨೦೨೦ ರಂದು ಮನೆಯಿಂದ ಹೊರಗೆ ಹೋದವನು ಇದುವರೆಗೂ ಮನೆಗೂ ಬಾರದೇ ಮತ್ತುಸಂಬಂದಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾನೆ .

 

ಕಳವು:

ಮಾಲೂರು ಪೊಲೀಸ್‌ ಠಾಣೆಯಲ್ಲಿ ಕಳವಿಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ಮಾಲೂರು ತಾಲ್ಲೂಕು ಉಪಾಸಪುರ ಮತ್ತು ಸೊಸಗೆರೆಯ ಮದ್ಯ ಘಟನೆ ಸಂಬವಿಸಿರುತ್ತದೆ,  ದಿನಾಂಕ ೧೦-೦೯-೨೦೨೦ ರಂದು ಮಾನ್ಯ ಪಿ.ಎಸ್.ಐ ರಂಗಲಕ್ಷ್ಮಿ  ರವರು ಸಿಬ್ಬಂದಿ ಜೊತೆ ಕೆ೦೭ಜಿ೨೩೪ ಸರ್ಕಾರಿ ವಾಹನದಲಿ ಗಸ್ತು ಮಾಡುತ್ತಿರುವಾಗ  ಸುಮಾರು ೧೦:೩೦ ಸಮಯದಲ್ಲಿ  ಯಾರೋ ಒಬ್ಬ ಯುವಕ ನಮ್ಮ ವಾಹನ ನೋಡಿ  ಉಪಾಸಪುರ ಮತ್ತು ಸೊಸಗೆರೆಯ ಬಳಿ  ಬಯದಿಂದ ತಾನು ತಂದಿದ್ದ ಕೆಎ೦೭ ಯು ೨೮೨೯ ದ್ವಿಚಕ್ರ ವಾಹನದಲ್ಲಿ  ಹಿಂತಿರುಗಿಸಿಕೊಂಡು ಜೋರಾಗಿ ಚಾಲನೆ ಮಾಡಿಕೊಂಡು ಹೊಗಿದ್ದು, ಮಾನ್ಯ ಪಿ.ಎಸ್.ಐ ರಂಗಲಕ್ಷ್ಮಿ  ರವರಿಗೆ ಎಣೊ ಅನುಮಾನ ಬಂದು ಸದರಿ ಆಸಾಮಿಯನ್ನು ಹಿಂಬಾಲಿಸಿ ಹಿಡಿದು ವಿಚಾರಿಸಲಾಗಿ  ತಾನು   ಮಾಲೂರು ತಾಲ್ಲೂಕು ಕಡದೇನಹಳ್ಲಿ ಗ್ರಾಮದ ವಾಸಿಯಾಗಿದ್ದು ತಾನು ತಂದಿದ್ದ ಕೆಎ೦೭ ಯು ೨೮೨೯ ದ್ವಿಚಕ್ರ ವಾಹನವನ್ನು ಮಾಲೂರು  ಬಾಲಾಜಿ ವೃತ್ತದಲ್ಲಿ ಕಳವು ಮಾಡಿದ್ದು ಪ್ರಸ್ತುತ ತನ್ನ ಸ್ವಂತ ಬಳಕೆಗೆ ಬಳಸಲಾಗುತ್ತಿದ್ದಿದ್ದು ತಿಳಿದು , ಸದರಿ ದ್ವಿಚಕ್ರ ವಾಹನವನ್ನು ಠಾಣೆಯ ವಶಕ್ಕೆ ಪಡೆದು, ಆರೋಪಿಯ ವಿರುದ್ದು ಕಾನೂನು ಕ್ರಮ ತೆಗೆದುಕೊಂಡಿರುತ್ತಾರೆ .

Leave a Reply

Your email address will not be published. Required fields are marked *