ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ:14-09-2020

ದಿನಾಂಕ: 13-09-2020 ಸಂಜೆ 04:೦೦ ಗಂಟೆಯಿಂದ ದಿನಾಂಕ: 14-02-2020 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ

ಅಕ್ರಮ ಗಾಂಜಾ ಮಾರಾಟ ಮೂವರ ಬಂದನ:
ಗಲ್ಪೇಟೆ ಪೊಲೀಸ್ ಠಾಣೆಯಲ್ಲಿ ಅಕ್ರಮ ಗಾಂಜಾ ಮಾರಟಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ಕೋಲಾರ ತಾಲ್ಲೂಕು ಟಮಕ JADE ಪ್ಯಾಕ್ಟರಿ ಬಳಿ ಘಟನೆ ಸಂಬವಿಸಿರುತ್ತದೆ, ದಿನಾಂಕ ೧೩-೦೯-೨೦೨೦ ರಂದು ಕೋಲಾರ ತಾಲ್ಲೂಕು ಟಮಕ JADE ಪ್ಯಾಕ್ಟರಿ ಬಳಿ ಮೂವರು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಗಲ್ಪೇಟೆ ಪೊಲೀಸ್ ಠಾಣೆಯ ಪಿ ಎಸ್ ಐ ವೇದವತಿ ಮತ್ತು ತಮ್ಮ ತಂಡ ಪಂಚರ ಸಮಕ್ಷಮದಲ್ಲಿ ಸುಮಾರು ೦೩:೦೦ ಗಂಟೆ ಸಮಯಕ್ಕೆ ಕೆ.ಎ ೦೭ ಜಿ ೩೩೭ಸರ್ಕಾರಿ ವಾಹನದಲ್ಲಿ, ಟಮಕ JADE ಪ್ಯಾಕ್ಟರಿ ಬಳಿ ಇದ್ದ ಅನುಮಾನಸ್ಪದವಾಗಿ ಕೈಯಲ್ಲಿ ಕವರ್ ಹಿಡಿದು ನಿಂತಿದ್ದ ಯುವಕರನ್ನು ವಶಕ್ಕೆ ಪಡೆದು ಅವರ ಬಳಿ ಇದ್ದ ಕವರ್ ನ್ನು ಪರಿಶೀಲಿಸಿದಾ ಮಾಹಿತಿ ಕಚಿತ ವಾಗಿದ್ದು, ಸದರಿ ಕವರ್ ನಲ್ಲಿ ಸುಮಾರು ೩ ಕೆಜಿ ೨೪೦ ಗ್ರಾಂ ಗಾಂಜಾ ಇದ್ದು ಸದರಿ ಅರೋಪಿಗಳನ್ನು ವಶಕ್ಕೆ ಪಡೆದು, ಸದರಿ ಮಾಲ್ಲಿ ಪಂಚರ ಸಮಕ್ಷಮದಲ್ಲಿ ವಶಕ್ಕೆ ಪಡೆದಿರುತ್ತಾರೆ.
ಬಂದಿತ ಆರೋಪಿಗಳ ವಿವರ:
೧) ಯಾಸಿನ್ ಷರೀಪ್ ಬಿನ್ ಬಕರ್ ಷರೀಪ್ , ಯಶವಂತಪುರ ಬೆಂಗಳೂರು.
೨) ಮುಜಾಯಿಬ್ ಪಾಷ ಬಿನ್ಸಯ್ಯದ್ ಆಲಿ , ಡಿ.ಜೆ ಹಳ್ಳಿ ಬೆಂಗಳೂರು.
೩) ಅಯೂಬ್ ಪಾಷ ಬಿನ್ ಅಕ್ಬರ್ ಆಲಿ, ದರ್ಗಾಮೊಹೊಲ್ಲಾ, ಕೋಲಾರ.

 

 

ಪರಿಷಿಷ್ಟ ಜಾತಿ ಮತ್ತು ಪರಿಷಿಷ್ಟ ಪಂಗಡ ಜಾತಿ ಎಂಬ ನಿಂದನೆ ಮತ್ತು ಹಲ್ಲೆ ಮತ್ತು ಪ್ರಾಣ ಬೆದರಿಕೆ:
ಶ್ರೀನಿವಾಸಪುರ ಪೋಲಿಸ್ ಠಾಣೆಯಲ್ಲಿ ಪರಿಷಿಷ್ಟ ಜಾತಿ ಮತ್ತು ಪರಿಷಿಷ್ಟ ಪಂಗಡ ಜಾತಿ ಎಂಬ ನಿಂದನೆ ಮತ್ತು ಹಲ್ಲೆ ಮತ್ತು ಪ್ರಾಣ ಬೆದರಿಕಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ,ಶ್ರೀನಿವಾಸಪುರ ತಾಲ್ಲೂಕು ಕುಲಗುರ್ಕಿ ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ, ಸದರಿ ಗ್ರಾಮದ ವಾಸಿಯಾದ ಆನಂದ್ ಬಿನ್ ಮುನೆಪ್ಪ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರುನ ಸಾರಾಂಶವೇನೆಂದರೆಅದೇ ಗ್ರಾಮದ ವಾಸಿಯಾದ ಶ್ರೀನಿವಾಸ ಎಂಬುವರು ಪಿರ್ಯಾದಿಯ ಮೇಲೆ ಹಳೆ ದ್ವೇಷದ ವೈಶಮ್ಯ ವಿದ್ದು, ಹೀಗುರುವಾಗ ದಿನಾಂಕ ೧೧-೦೯-೨೦೨೦ ರಂದು ಪಿರ್ಯಾದಿ ಸೋಮಯಾಜಲಹಳ್ಳಿಗೆ ಹೋಗಿದ್ದು ಅಲ್ಲಿ ಮಂಜುನಾಥ ಬೇಕರಿ ಬಳಿ , ನಿಂತಿದ್ದಾಗ ಶ್ರೀನಿವಾಸ ಎಂಬುವರು ಬೇಕಂತಲೆ ಪಿರ್ಯಾದಿಯ ಬಲಗಾಲಿನ ಮೇಲೆ ತಮ್ಮ ಟಾ ಟಾ ಏಸ್ನ್ನು ಹತ್ತಿಸಿ ಅಲ್ಲಿಂದ ಹೊರಟು ಹೊಗಿದ್ದು, ಸದರಿ ವಿಷಯವನ್ನು ಅವರ ಮನೆಯ ಬಳಿ ಹೋಗಿ ಕೇಳಲಾಗಿ ಕುಡುಂಬ ಸಮೇತಹ ಏಕಾ-ಏಕಿ ದೊಣ್ಣೆಗಳು ಎತ್ತಿಕೊಂಡು, ಅವಾಚ್ಯ ಶಬ್ಗಳಿಂದ ಬೈದು, ಜಾತಿ ನಿಂದನೆ ಮಾಡಿ ,ಸಾಯಿಸಿಬಿಡುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ,
ಆರೊಪಿಗಳ ವಿವರ:
೧) ಶ್ರೀನಿವಾಸ , ಶ್ರೀನಿವಾಸಪುರ ತಾಲ್ಲೂಕು ಕುಲಗುರ್ಕಿ ಗ್ರಾಮ.
೨) ಪ್ರೇಮಮ್ಮ , ಶ್ರೀನಿವಾಸಪುರ ತಾಲ್ಲೂಕು ಕುಲಗುರ್ಕಿ ಗ್ರಾಮ.
೩) ಭಾರತಮ್ಮ , ಶ್ರೀನಿವಾಸಪುರ ತಾಲ್ಲೂಕು ಕುಲಗುರ್ಕಿ ಗ್ರಾಮ.

Leave a Reply

Your email address will not be published. Required fields are marked *