ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ:15-09-2020

ದಿನಾಂಕ: 14-09-2020 ಸಂಜೆ 04:೦೦ ಗಂಟೆಯಿಂದ ದಿನಾಂಕ: 15-02-2020 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ

 

ಕಳವು:

ಕೋಲಾರ ನಗರ ಪೊಲೀಸ್‌ ಠಾಣೆಯಲ್ಲಿ ಕಳವಿಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ನಗರದ  ಟೇಕಲ್‌ ಬ್ರಿಜ್ಡ್ ಬಳಿಯ  ಚಲಪತಿ ಕಾರ್‌ ಗ್ಯಾರೆಜ್‌ ಬಳಿ ಘಟನೆ ಸಂಬವಿಸಿರುತ್ತದೆ, ತಿಮ್ಮಾಪುರ ಗ್ರಾಮ , ಕ್ಯಾಸಂಬಳ್ಳಿ ಹೋಬಳಿ,  ಕೆ.ಜಿ.ಎಪ್‌ ತಾಲ್ಲುಕು  ವಿಳಾಸದ ಹಾಲಿ  ನಗರದ ಚೌಡೇಶ್ವರಿ ನಗರದಲ್ಲಿ ವಾಸವಿದ್ದು, , ಪಿರ್ಯಾದಿ ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ ೧೩-೦೯-೨೦೨೦ ರಂದು ಪಿರ್ಯಾದಿ   ಕೋಲಾರ ನಗರದ  ಟೇಕಲ್‌ ಬ್ರಿಜ್ಡ್ ಬಳಿಯ  ಚಲಪತಿ ಕಾರ್‌ ಗ್ಯಾರೆಜ್‌ ಬಳಿ ತನ್ನ ಬಾಬತ್ತು  ಕೆ ಎ ೪೦ ಡಬ್ಲೂ ೦೦೪೯ ರಾಯಲ್‌ ಎನ್‌ಪೀಲ್ಡ್  ದ್ವಿಚಕ್ರ ವಾಹನವನ್ನು ಬಿಟ್ಟು ಬೀಗ ಹಾಕಿ ತಂಬಳ್ಳಿಗೆ ಕೆಲಸದ ನಿಮಿತ್ತ ಹೋಗಿ ಸಂಜೆ ಬಂದು ನೋಡಲಾಗಿ ಯಾರೋ ಕಳ್ಳರು    ಸದರಿ ಬಾಬತ್ತು  ಕೆ ಎ ೪೦ ಡಬ್ಲೂ ೦೦೪೯ ರಾಯಲ್‌ ಎನ್‌ಪೀಲ್ಡ್  ದ್ವಿಚಕ್ರ ವಾಹನವನ್ನು ಕಳವು ಮಾಡಿ ಪರಾರಿಯಾಗಿರುತ್ತಾರೆ.

 

ಮಾರಣಾಂತಿಕ ರಸ್ತೆ ಅಪಘಾತ:

ಮಾಲೂರು  ಪೊಲೀಸ್‌ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ  ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ಮಾಲೂರು –  ಹೊಸೂರು ರಸ್ತೆ  , ಮಾಸ್ತಿವೃತ್ತದ ಬಳಿ ಘಟನೆ ಸಂಬವಿಸಿರುತ್ತದೆ,  ೧೧ ನೆ ಸರ್ಕಲ್‌ ಇಂದಿರಾನಗರ ಮಾಲೂರು ನಿವಾಸಿಯಾದ  ಪವಿತ್ರ ಕೊಂ ವೆಂಕಟೇಶ್‌ ,ಎನ್ ಎಂಬುವರು ಠಾಣೆಗೆ  ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯ ಗಂಡ ವೆಂಕಟೇಶ್‌ ಎಂಬುವರು ದಿನಾಂಕ ೧೪-೦೯-೨೦೨೦ ರಂದು ತಮ್ಮ ಬಾಬತ್ತು ಕೆಎ೦೭ ಇಡಿ೩೨೪೧ ಸುಸುಕಿ  ಯಾಕ್ಸಿಸ್ ದ್ವಿಚಕ್ರ ವಾಹನದಲ್ಲಿ  ನಗರಕ್ಕೆ ಹೋಗಿ ಮನೆಗೆ ಹಿಂದುರುಗಿ ಮಾಲೂರು –  ಹೊಸೂರು ರಸ್ತೆ  , ಮಾಸ್ತಿವೃತ್ತದ ಬಳಿ ಬರುವಾಗ   ಮಾಸ್ತಿ ಕಡೆಯಿಂದ ಕೆಎ ೫೧ ಎ ಎ ೬೩೯೩ ಟಿಪ್ಪರ್‌ ವಾಹನದ ಚಾಲಕ ಸದರಿ ವಾಹನವನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು   ಪಿರ್ಯಾದಿಯ ಗಂಡನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತ ಉಂಟು ಮಾಡಿ  ಸದರಿ ಅಪಗಾತದಿಂದ ಪಿರ್ಯಾದಿಯ ಗಂಡನ ವಾಹನ ಸಮೇತ ಕೆಳಗೆ ಬಿದ್ದು, ಎಡಗೈ ಮೂಳೆ ಮುರಿದು ಹೊಗಿದ್ದು, ತಲೆಗೆ ತೀವ್ರ ಗಾಯವಾಗಿದ್ದು,  ಚಿಕಿತ್ಸೆಗೆ  ಕೋಲಾರದ ಗೌರವ ಹಾಸ್ಪಿಟಲ್‌ಗೆ ದಾಖಲು ಮಾಡಿದ್ದು  ಚಿಕಿತ್ಸೆ ಪಲಕಾರಿಯಾಗದೇ  ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *