ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ:16-09-2020

ದಿನಾಂಕ: 15-09-2020 ಸಂಜೆ 04:೦೦ ಗಂಟೆಯಿಂದ ದಿನಾಂಕ: 16-02-2020 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ

 

ಯುವತಿ ಕಾಣೆಯಾಗಿರುವ ಬಗ್ಗೆ:

ಕೋಲಾರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಯುವತಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ,  ಕೋಳಾರ ತಾಲ್ಲೂಕು  ಶೆಟ್ಟಿಮಾದಮಂಗಲ ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ.   ಸದರಿ ಗ್ರಾಮದ ವಾಸಿಯಾಗಿರುವ  ಅಶೋಕ್‌ ಬಿನ್ ಆಂಜಿನಪ್ಪ  ಎಂಬುವರು ಠಾನೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ಪಿರ್ಯಾದಿಯ ಸ್ವಂತ  ತಂಗಿಯಾದ  ಅರುಣಾ (೨೫) ವರ್ಷ   ಎಂಬುವರು ದಿನಾಂಕ ೦೩-೦೯-೨೦೨೦ ರಂದು ರಾತ್ರಿ ಮನೆಯಿಂದ ಹೊರಗೆ ಹೋದವರು  ಮನೆಗೆ ಹಿಂತುರಿಗದೇ ,ಇದುವರೆಗೂ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ.

 

ಕಳವು:

ಕೋಲಾರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಕಳವಿಗೆ ಸಂಬಂದಿಸಿದಂತೆ  ಬಗ್ಗೆ ಪ್ರಕರಣ ದಾಖಲಾಗಿರುತ್ತದೆ,  ಕೋಲಾರ ತಾಲ್ಲೂಕು   ಹೊಲ್ಲಂಬಲ್ಲಿ  ಗ್ರಾಮದ ಚೌಡೇಶ್ವರಿ ದೇವಾಲಯದಲ್ಲಿ ಘಟನೆ ಸಂಬವಿಸಿರುತ್ತದೆ, ಕೊಲಾರ ತಾಲ್ಲೂಕು ತಹಸಿಲ್‌ದಾರರಾದ ಶ್ರೀ ಶೋಬಿತಾ ರವರು ಮುಜುರಾಯಿ ಇಲಾಖೆ ಪಾರುಪತ್ತೆದಾರರಾದ ಶ್ರೀ ಸುರೇಶ್‌ಬಾಬು ಮುಖೇನ ಠಾಣೆಗೆ ನೀಡಿದ ದೂರಿನ ಸಾರಾಂಶವೇನೆಂದರೆ, ಕೋಲಾರ ತಾಲ್ಲೂಕು   ಹೊಲ್ಲಂಬಲ್ಲಿ  ಗ್ರಾಮದ ಚೌಡೇಶ್ವರಿ ದೇವಾಲಯದಲ್ಲಿ ದಿನಾಂಕ ೧೩-೦೯-೨೦೨೦ ರಂದು ರಾತ್ರಿ ಯಾರೋ ಕಳ್ಳರು ನುಗ್ಗಿ  ದೇವಸ್ಥಾನದ ಹುಂಡಿಗಳನ್ನು  ಮುರಿದು ಹುಂಡಿಯಲ್ಲಿನ  ಸಂಪೂರ್ಣ ಹಣವನ್ನು ಕಳವು ಮಾಡಿ ಪರಾರಿಯಾಗಿರುತ್ತಾರೆ.

Leave a Reply

Your email address will not be published. Required fields are marked *