ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ:19-09-2020

ದಿನಾಂಕ: 18-09-2020 ಸಂಜೆ 04:೦೦ ಗಂಟೆಯಿಂದ ದಿನಾಂಕ: 19-02-2020 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ

 

ಕಳವು:

ಮುಳಬಾಗಿಲು ನಗರ ಪೊಲೀಸ್‌ ಠಾನೆಯಲ್ಲಿ ಕಳವಿಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ,  ಮುಳಬಾಗಿಲು ನಗರದ ಕೆ.ಜಿ.ಎಪ್‌ ರಸ್ತೆ  ಮುನೇಶ್ವರ ನಗರ ದಲ್ಲಿ ಘಟನೆ ಸಂಬವಿಸಿರುತ್ತದೆ,  ಸದರಿ ವಿಳಾಸದ ನಿವಾಸಿಯಾದ  ಮಂಜುಳ ಕೊಂ ಲೇಟ್‌ ನಾಗರಾಜ್‌ ಎಂಬುವರು ಠಾಣೆಗೆ ಹಾಜರಾಗಿ ನೀಓಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ ೧೮-೦೯-೨೦೨೦ ರಂದು ತಮ್ಮ ಮನೆಯನ್ನು ಬೀಗಹಾಕಿ ನಂಗಲಿಯಲ್ಲಿರುವ ಚೌಡೇಶ್ವರಿ ದೇವಸ್ಥಾನಕ್ಕೆ ಹೋಗಿ  ಸುಮಾರು ೧೩:೧೫ ಗಂಟೆಗೆ ಮನೆಗೆ   ಬಂರುವಷ್ಠರಲ್ಲಿ  ಯಾರು ಇಲ್ಲದ ಸಮಯ ನೋಡಿ ಯಾರೋ ಕಳ್ಳರು ಮನೆಯ ಬಾಗಿಲು ಮುರುದು  ಮನೆಯಲ್ಲಿ  ಮಗಳ ಮದುವೆಗಾಗಿ ಮಾಡಿಸಿದ್ದ ಸುಮಾರು ೨೬೫.೬ ಗ್ರಾಂ ಬಂಗಾರದ ಒಡವೆಗಳು , ಮತ್ತು ೮೯,೦೦೦ ರೂ ನಗದು ಮತ್ತು ೨೫,೦೦೦ ಬೆಲೆಬಾಳುವ ಸಿಲ್ವರ್‌ ಎಲ್ಲವನ್ನು ಒಟ್ಟು   ಸುಮಾರು ೯,೭೪,೫೦೦ ರೂ ಬೆಳೆಬಾಳುವವನ್ನು ಕಳವು ಮಾಡಿ ಪರಾರಿ ಯಾಗಿರುತ್ತಾರೆ.

ಬಂಗಾರದ ಒಡವೆಗಳ ವಿವರ:

೧) ಚಂದ್ರಹಾರ ೪೧ ಗ್ರಾಂ

೨) ಮಾಟಿ ೧೫ಗ್ರಾಂ.

೩) ಓಲೆ ೧೧ ಗ್ರಾಂ.

೪) ನಕ್ಲೀಸ್‌ ೨೦ ಗ್ರಾಂ.

೫) ಚೈನು ಡಾಲರ್‌ ೧೨ ಗ್ರಾಂ .

೬) ಸಾದಾ ಕತ್ತಿನ ಚೈನು ೩೨ ಗ್ರಾಂ.

೭) ತಾಳಿ ಚೈನು ೨೪ ಗ್ರಾಂ.

೮) ಲಕ್ಷ್ಮಿ ನಾಣ್ಯ ೪ ಗ್ರಾಂ.

೯)ಮುತ್ತಿನ ಕಲ್ಲಿನ ಓಲೆ ೪ ಗ್ರಾಂ.

೧೦) ೮ ಉಂಗುರಗಳು ೪೦ ಗ್ರಾಂ.

೧೧) ಡಾಲ್‌ ೨ ಗ್ರಾಂ.

೧೨) ಓಲೆ ಪ್ಲೇಟ್‌ ೩ ಗ್ರಾಂ.

೧೩)ಸ್ಟಾರ್‌ ಓಲೆ ೨ ಗ್ರಾಂ .

 

 

Leave a Reply

Your email address will not be published. Required fields are marked *