ದಿನಾಂಕ: 21-09-2020 ಸಂಜೆ 04:೦೦ ಗಂಟೆಯಿಂದ ದಿನಾಂಕ: 22-02-2020 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ
ಮಹಿಳೆ ಕಾಣೆಯಾಗಿರುವ ಬಗ್ಗೆ:
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಹಿಳೆ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ, ಕೋಲಾರ ತಾಲ್ಲೂಕು ಚಲವನಹಳ್ಳಿ ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ. ಸದರಿ ಗ್ರಾಮದ ವಾಸಿಯಾದ ರವಣಪ್ಪ ಬಿನ್ ಹನುಮಪ್ಪ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತನ್ನ ಹೆಂಡತಿ ನಂದಿನಿ ಎಂಬುವರು ದಿನಾಂಕ ೨೧-೦೯-೨೦೦ ರಂದು ಮನೆಯಿಂದ ಹೊರಗೆ ಹಹೋದವರು ಮರುಳಿ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ , ಎಲ್ಲಾ ನೆಂಟರ ಮನಯಲ್ಲಿ ವಿಚಾರಿಸಿ ಎಲ್ಲಿಯೂ ಕಾಣದೇ ಮನೆಗೂ ಬಾರದೇ ಕಾಣೆಯಾಗಿರುತ್ತಾರೆ , ದೇವನಹಳ್ಲಿಯ ತಾಲ್ಲೂಕು ಕಾರಹಳ್ಳಿ ಗ್ರಾಮದ ವಾಸಿಯಾದ ಪಿರ್ಯಾದಿಯ ಅಕ್ಕ ನಾಗರತ್ನಮ್ಮ ಎಂಬುವರ ಮೃಏಲೆ ಅನುಮಾನ ವ್ಯಕ್ತ ಪಡಿಸಿರುತ್ತಾರೆ,
ಅನುಮಾನಸ್ಪದ ಸ್ಪೋಟ:
ಮಾಲೂರು ಪೊಲೀಸ್ ಠಾಣೆಯಲ್ಲಿ ಅನುಮಾನಸ್ಪದಸ್ಪೋಟಕ್ಕೆ ಸಂಬಂದಿಸಿದಂತೆ ಪ್ರಕರಣ ಧಾಖಲಾಗಿರುತ್ತದೆ, ಮಾಲೂರು ತಾಲ್ಲುಕು ಕನ್ನಿಗಾನಹಳ್ಳಿ ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ, ಸದರಿ ಗ್ರಾಮದ ವಾಸಿಯಾದ ಸತೀಶ್ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ ೨೦-೦೯-೨೦೨೦ ರಂದು ಸುಮಾರು ೧೧:೩೦ ಗಂಟೆ ಸಮಯದಲ್ಲಿ ಅದೇ ಗ್ರಾಮದ ಪಿರ್ಯಾದಿಯ ಪಕ್ಕದ ಮನೆ ಯಾದ ಗೋಪಾಲರೆಡ್ಡಿ ಯವರ ಮನೆಯಲ್ಲಿ ಭಾರಿ ಶಬ್ದ ಕೇಳಿಸಿ ಹೋಗಿ ನೊಡಲಾಗಿ ಸದರಿ ಮನೆಯಲ್ಲಿ ಯಾವುದೋ ಸ್ಪೋಟಕ ವಸ್ತು ಸ್ಪೋಟಿಸಿದ್ದು, ಗೋಪಾಲರೆಡ್ಡಿ ಎಂಬುವರಿಗೆ ಕಣ್ಣಲ್ಲಿ ನೀರು ಬರುತ್ತಿದ್ದು, ಮನೆಯಲ್ಲಿ ತುಂಬಾ ಹೊಗೆ ತುಂಬಿಕೊಂಡಿದ್ದು, ಅವರನ್ನು ಮನೆಯಿಂದ ಹೊರತರುವಾಗ ಮತ್ತೆ ಬಾರಿ ಸ್ಪೋಟಕವಾಗಿದ್ದು ಕಿವಿ, ಮತ್ತು ಮೈಮೇಲೆ ರಕ್ತಗಾಯಗಳಾಗಿದ್ದು ಚಿಕಿತ್ಸೆಗೆ ಜಾಲಪ್ಪ ಆಸ್ಪತ್ತರೆಗೆ ದಾಖಲು ಮಾಡಿದ್ದು, ಅದರಂತೆ ಗೋಪಾರೆಡ್ಡಿಎಂಬುವರು ತನ್ನ ಮನೆಯಲ್ಲಿ ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಯಾವುದೋ ಸ್ಪೋಟಕ ವಸ್ತುಗಳನ್ನು ತಯಾರಿಸುವ ಕಾರಣದಿಂದಲೆ ಸ್ಪೋಟಕ್ಕೆ ಕಾರಣ ಎಂದು ಪಿರ್ಯಾದಿದಾರರು ದೂರು ದಾಖಲಿಸಿರುತ್ತಾರೆ.