ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ ೧೮-೦೬-೨೦೧೯

ದಿನಾಂಕ ೧೭-೦೬-೨೦೧೯ ಸಂಜೆ ೦೪:೦೦ ಗಂಟೆಯಿಂದ ದಿನಾಂಕ ೧೮-೦೬-೨೦೧೯ ರ ಸಂಜೆ ೦೪:೦೦ ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

ಹಲ್ಲೆ;

ಕೋಲಾರ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದಂತೆ  ಅಪರಾದ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ಮುದವತ್ತಿ ಗ್ರಾಮದಲ್ಲಿ ಕ್ರುತ್ತ್ಯ ಸಂಬವಿಸಿರುತ್ತದೆ.ದಿನಾಂಕ ೧೭-೦೬-೨೦೧೯ ರಂದು ಸುಮಾರು ೨೦:೦೦ ಗಂಟೆಯಲ್ಲಿ ನರಸಾಪುರ ಗ್ರಾಮದ ವಾಸಿ ಲಕ್ಷ್ಮಿಪತಿ ಬಿ/ನ್ ಸುಬ್ರಮಣಿ (೨೯)ವರ್ಷ ಎಂಬುವರ ಮೇಲೆ ಮುದವತ್ತಿ ಗ್ರಾಮದ ವಾಸಿಗಳಾದ ಅಮರ್‍ ಮತ್ತು ಮುರಳಿ ಎಂಬುವರು ಜಗಳ ತೆಗೆದು ದೊಣ್ಣೆಯಿಂದ ಹಾಗೂ ಚಾಕುವಿನಂದ ಹಲ್ಲೆ ಮಾಡಿ ಗಾಯ ಪಡಿಸಿರುತ್ತಾರೆ.

ಮಹಿಳೆ ಕಾಣೆಯಾಗಿರುವ ಬಗ್ಗೆ:

ಕೋಲಾರ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಮಹಿಳೆ ಕಾಣೆಯಾಗಿರುವ ಬಗ್ಗೆ  ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ಶಿವರಾಮಪುರ ಗ್ರಾಮದ ವಾಸಿ ರೋಜಾ ಆರ್‍ (೨೧)ವರ್ಷ  ಎಂಬುವರು ಕಾಣೆಯಾದವರು ದಿನಾಂಕ ೧೫-೦೬-೨೦೧೯ ರಂದು ೨೩:೦೦ ಗಂಟೆಯಲ್ಲಿ ಮನೆಯಿಂದ ಹೊರಟ ರೋಜಾ ರವರು ಹಿಂತುರಿಗಿ ಬಾರದೆ ಕಾಣೆಯಾಗಿರುತ್ತಾರೆ.

ಕಾಣೆಯಾದ ಮಹಿಳೆಯ ವಿವರ:

ಹೆಸರು:ರೋಜ

ವಯಸ್ಸು: ೨೧

ಎತ್ತರ:  ೪.೫ ಅಡಿ

ಸಾದಾರಣ  ಮೈ ಕಟ್ಟು ,ಗೋದಿ ಬಣ್ಣ,ಕೋಲು ಮುಖ.

Leave a Reply

Your email address will not be published. Required fields are marked *