ದಿನಾಂಕ: 23-09-2020 ಸಂಜೆ 04:೦೦ ಗಂಟೆಯಿಂದ ದಿನಾಂಕ: 24-02-2020 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ
ಮಹಿಳೆ ಕಾಣೆಯಾಗಿರುವ ಬಗ್ಗೆ:
ಮಾಸ್ತಿ ಪೊಲೀಸ್ ಠಾಣೆಯಲ್ಲಿ ಮಹಿಳೆ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ, ಮಾಲೂರು ತಾಲ್ಲೂಕು ಮಿಟ್ಟಗಾನಹಳ್ಳಿ ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ. ಸದರಿ ಗ್ರಾಮದ ವಾಸಿಯಾದ ಸೀನಪ್ಪ ಬಿನ್ ನಾರಾಯಣಪ್ಪ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತನ್ನ ಮಗಳು ಸೌಮ್ಯ(23) ಎಂಬುವರು ಕೋಲಾರದ ರವಿ ಬಿ.ಇಡಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಇಡಿ ಪದವಿ ವ್ಯಾಸಾಂಗ ಮಾಡಿತ್ತಿದ್ದು ಎಂದಿನಂತೆ ದಿನಾಂಕ ೧೯-೦೯-೨೦೦ ರಂದು ಮನೆಯಿಂದ ಕಾಲೇಗಿಗೆ ಹೋಗಿಬರುವುದಾಗಿ ಹೇಳಿ ಹೋದವಳು ಮರುಳಿ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ , ಎಲ್ಲಾ ನೆಂಟರ ಮನಯಲ್ಲಿ ವಿಚಾರಿಸಿ ಎಲ್ಲಿಯೂ ಕಾಣದೇ ಮನೆಗೂ ಬಾರದೇ ಕಾಣೆಯಾಗಿರುತ್ತಾರೆ , ಅದೇ ಗ್ರಾಮದ ವಾಸಿಯಾದ ಮಣಿ ಬಿನ್ ಆಂಜಪ್ಪ ಎಂಬುವರ ಮೇಲೆ ಪಿರ್ಯಾದಿ ಅನುಮಾನ ವ್ಯಕ್ತ ಪಡಿಸಿರುತ್ತಾರೆ,