ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ:25-09-2020

ದಿನಾಂಕ: 24-09-2020 ಸಂಜೆ 04:೦೦ ಗಂಟೆಯಿಂದ ದಿನಾಂಕ: 25-02-2020 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ

 

ಮಾರಣಾಂತಿಕ ರಸ್ತೆ ಅಪಘಾತ:

ವೇಮಗಲ್‌ ಪೊಲೀಸ್‌ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ,  ಕೋಲಾರ ತಾಲ್ಲೂಕು  ವೇಮಗಲ್‌ ಹೋಬಳಿ,  ಕುರುಗಲ್‌ ಗೇಟ್‌ ಬಳಿ ಘಟನೆ ಸಂಬವಿಸಿರುತ್ತದೆ,  ಕೋಲಾರ ತಾಲ್ಲುಕು  ವೇಮಗಲ್‌ ಹೋಬಳಿ, ಶೆಟ್ಟಿಹಳ್ಳಿ ಗ್ರಾಮದ ವಾಸಿಯಾದ  ಪುನಿತ್‌ಕುಮಾರ್‍ ಬಿನ್ ರಾಮಚಂದ್ರಪ್ಪ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ ೨೫-೦೯-೨೦೨೦ ರಂದು ಪಿರ್ಯಾದಿಯ ತಂದೆಯವರಾದ ರಾಮಚಂದ್ರಪ್ಪ   ರವರು  ನರಸಾಪುರದ  ಕೆ.ಇ.ಬಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅದರಂತೆ ತಮ್ಮ ಕರ್ತವ್ಯಕ್ಕೆ ಕೆ ಎ ೦೭ ಟಿ೯೬೮೧ ದ್ವಿಚಕ್ರ ವಾಹನದಲ್ಲಿ  ಹೋಗುವಾಗ ಸುಮಾರು ೧೦:೦೦ ಗಂಟೆ ಸಮಯದಲ್ಲಿ  ಕೋಲಾರ ತಾಲ್ಲೂಕು  ವೇಮಗಲ್‌ ಹೋಬಳಿ,  ಕುರುಗಲ್‌ ಗೇಟ್‌ ಬಳಿ ವೇಮಗಲ್‌ ಕಡೆಯಿಂದ ಬಂದ ಕೆ.ಎ೦೧ ಜಿ.೪೬೭೬ ವಾಹನವನ್ನು ಅದರ ಚಾಲಕ ಅಇವೇಗ ಮತ್ತು ಅಜಾಗರುಕತಿಯಿಂದ ಚಾಲನೆ ಮಾಡಿಕೊಂಡು ಬಂದು ಬಂದು  ಕೆ ಎ ೦೭ ಟಿ೯೬೮೧ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಾಹನ ಸಮೇತ ಪಿರ್ಯಾದಿಯ ತಂದೆ ಕೆಳಗೆ ಬಿದ್ದು ತೀವ್ರ ಗಾಯಾವಾಗಿದ್ದು,  ಚಿಕಿತ್ಸೆಗಾಗಿ ಸ್ಥಳಿಯರು ಜಿಲ್ಲೆಯ ಎಸ್.ಎನ್.ಆರ್‌ ಆಸ್ಪತ್ರೆಗೆ ದಾಖಲು ಮಾಡಲು  ಹೋಗುವ ಮಾರ್ಗ ಮದ್ಯ ಮೃತಪಟ್ಟಿರುತ್ತಾರೆ,

 

ವರದಕ್ಷಿಣೆ ಕಿರುಕುಳ ಯುವತಿಯ ಹಲ್ಲೆ:

ಮಾಸ್ತಿ ಪೊಲೀಸ್‌ ಠಾಣೆಯಲ್ಲಿ  ವರದಕ್ಷಿಣೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಮಾಸ್ತಿ ಹೋಬಳಿ , ದೊಡ್ಡಕಲ್ಲಹಳ್ಳಿ ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ,   ಮಂಚನಹಳ್ಳಿ ಗ್ರಾಮ. ಆನೆಕಲ್‌ ಹೊಬಳಿ ಬೆಂಗಳೂರು ವಾಸಿಯಾದ ಶ್ರೀಮತಿ ಶಶಿಕಳಾ ಕೊಂ ಪ್ರಕಾಶ್‌ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ   ಮಾಸ್ತಿ ಹೋಬಳಿ , ದೊಡ್ಡಕಲ್ಲಹಳ್ಳಿ ಗ್ರಾಮದ ವಾಸಿಯಾದ ಗೋವಿಂದಪ್ಪ ರವರ ಮಗ ಮಹೇಶ್‌ಚಂದ್ರ ಎಂಬುವರಿಗೆ ಮಂಚನಹಳ್ಳಿ ಗ್ರಾಮ. ಆನೆಕಲ್‌ ಹೊಬಳಿ ಬೆಂಗಳೂರು ವಾಸಿಯಾದ ಶ್ರೀಮತಿ ಶಶಿಕಳಾ ಕೊಂ ಪ್ರಕಾಶ್‌ ರವರ ಮಗಳು  ಮೇಘ ಎಂಬುವರನ್ನು ಕೊಟ್ಟು ೨೦೧೯ ರಲ್ಲಿ ಸಾಂಪ್ರದಾಯಿಕವಾಗಿ ಸುಮಾರು ೨೨ ಸವರನ್‌ ಬಂಗಾರ ಹಾಕಿ ವಿವಾಹ ಮಾಡಿದ್ದು, ಮೊದಲಲ್ಲಿ ಇಬ್ಬರೂ ಚೆನ್ನಾಗಿದ್ದು  ಸುಮಾರು  ೬ ತಿಂಗಳಿಂದ ವರದಕ್ಷಿಣೆಗಾಗಿ ಹಣವನ್ನುತವರು ಮನರಯಿಂದ ಪಡೆದು ಬಾ ಎಂದು ಗಂಡ, ಅತ್ತೆ ಮಾವ ಕುಂಟುಂಬದವರು ಮಾನಸಿಕವಾಗಿ, ಶಾರಿರಿಕವಾಗಿ ಕಿರುಕುಳ ನೀಡುತ್ತಿದ್ದು, ಅದರಂತೆ ಇದೇ ಕಾರಣಕ್ಕೆ ಪಿರ್ಯಾದಿಯ ಮಗಳನ್ನು ಎಲ್ಲಾ ಕುಟುಂಬದವರು ಸೇರಿ ನೇಣು ಬಿಗಿಸಿ ಕೊಲೆ ಮಾಡಿರುವುದಾಗಿ ದೂರು ದಾಖಲಲಿಸಿರುತ್ತಾರೆ,

ಆರೋಪಿಗಳ ವಿವರ”

೧)  ಮಹೇಶ್‌ಚಂದ್ರ , ದೊಡ್ಡಕಲ್ಲಹಳ್ಳಿ ಗ್ರಾಮ ಮಾಸ್ತಿ ಹೋಬಳಿ ಮಾಲೂರು ತಾಲ್ಲೂಕು.

೨) ಸರಸ್ವತಮ್ಮ .  ದೊಡ್ಡಕಲ್ಲಹಳ್ಳಿ ಗ್ರಾಮ ಮಾಸ್ತಿ ಹೋಬಳಿ ಮಾಲೂರು ತಾಲ್ಲೂಕು.

೩) ಗೋವಿಂದಪ್ಪ . ದೊಡ್ಡಕಲ್ಲಹಳ್ಳಿ ಗ್ರಾಮ ಮಾಸ್ತಿ ಹೋಬಳಿ ಮಾಲೂರು ತಾಲ್ಲೂಕು.

೪) ವೀಣಾ , ಮಂಚನಹಳ್ಳಿ ಗ್ರಾಮ. ಆನೆಕಲ್‌ ಹೊಬಳಿ ಬೆಂಗಳೂರು

೫) ರಂಗಮ್ಮ . ದೊಡ್ಡಕಲ್ಲಹಳ್ಳಿ ಗ್ರಾಮ ಮಾಸ್ತಿ ಹೋಬಳಿ ಮಾಲೂರು ತಾಲ್ಲೂಕು.

೬) ರವಣ್ಣ. ದೊಡ್ಡಕಲ್ಲಹಳ್ಳಿ ಗ್ರಾಮ ಮಾಸ್ತಿ ಹೋಬಳಿ ಮಾಲೂರು ತಾಲ್ಲೂಕು.

೭) ಗಜೇಂದ್ರ. ದೊಡ್ಡಕಲ್ಲಹಳ್ಳಿ ಗ್ರಾಮ ಮಾಸ್ತಿ ಹೋಬಳಿ ಮಾಲೂರು ತಾಲ್ಲೂಕು.

೮) ರಾಜಮ್ಮ , ದೊಡ್ಡಕಲ್ಲಹಳ್ಳಿ ಗ್ರಾಮ ಮಾಸ್ತಿ ಹೋಬಳಿ ಮಾಲೂರು ತಾಲ್ಲೂಕು.

 

Leave a Reply

Your email address will not be published. Required fields are marked *