ದಿನಾಂಕ: 04-10-2020 ಸಂಜೆ 04:೦೦ ಗಂಟೆಯಿಂದ ದಿನಾಂಕ: 05-10-2020 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ
ಮಾರಣಾಂತಿಕ ರಸ್ತೆ ಅಪಘಾತ:
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ಕೋಲಾರ ತಾಲ್ಲೂಕು ವಕ್ಕಲೇರಿ ಹೋಬಳಿ , ನಿಯರ್ ಚಿನ್ನಾಪುರ ಬಳಿ ಘಟನೆ ಸಂಬವಿಸಿರುತ್ತದೆ, ಕೋಲಾರ ತಾಲ್ಲೂಕು ವಕ್ಕಲೇರಿ ಹೋಬಳಿ, ವಡಗೆರೆ ಗ್ರಾಮದ ವಾಸಿಯಾದ ನಾರಾಯಣಮ್ಮ ಕೊಂ ಸೀನಪ್ಪ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ ೦೩-೧೦-೨೦೨೦ ರಂದು ಪಿರ್ಯಾದಿಯ ತಮ್ಮ ಚಲಪತಿ ರವರು ಬೆಂಗಳೂರು ಖಾಸಗಿ ಕಂಪನಿಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅದರಂತೆ ತಮ್ಮ ಕರ್ತವ್ಯಕ್ಕೆ ೦೩-೧೦-೨೦೨೦ ರಂದು ಸುಮಾರು ೦೫:೦೦ ಗಂಟೆಗೆ ವಕ್ಕಲೇರಿಗೆ ಹೋಗಿಬರುವುದಾಗಿ ಹೇಳಿ ಹೋದವನು ನಿಯರ್ ಚಿನ್ನಾಪುರ ಬಳಿ ಚಿನ್ನಾಪುರದ ವಾಸಿಯಾದ ವೆಂಕಟೇಶ್ ಎಂಬುವರು ಕೆ.ಎ ೦೮ ಎಚ್.೯೮೫೪ ಸಂಖ್ಯೆಯ ದ್ವಿಚಕ್ರ ವಾಹನವನ್ನು ಅತಿವೇಗ ಮನತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ವೆಂಕಟೇಶ್ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಚಲಪತಿ ರವರಿಗೆ ತಲೆಗೆ ತೀವ್ರ ಗಾಯವಾಗಿ ಕೆಳಗೆ ಬಿದ್ದಿದ್ದು, ಚಿಕಿತ್ಸೆಗಾಗಿ ಸ್ಥಳೀಯರು ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಿದ್ದು, ವೈದ್ಯರ ಸಲಹೆ ಮೆರೆಗೆ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಾಖಲುಮಾಡಿದ್ದು, ಚಿಕಿತ್ಸೆ ಪಲಕಾರಿಯಾಗದೇ ೦೪-೧೦-೨೦೨೦ ರಂದು ಸುಮಾರು ೦೭:೧೫ ಗಂಟೆಗೆ ಮೃತಪಟ್ಟಿರುತ್ತಾರೆ.
ಕೊಲೆ:
ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಶ್ರೀನಿವಾಸಪುರ ತಾಲ್ಲೂಕು ಕುಲಗುರ್ಕಿ ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ, ಸದರಿ ಗ್ರಾಮದ ವಾಸಿಯಾದ ಮೋಹನ್ ಬಿನ್ ವರದಪ್ಪ ಎಂಬುವರು ಠಾಣೆಗೆ ಹಾಜರಾಗಿ ನಿಡಿದ ದೂರಿನ ಸಾರಾಂಶವೇನೆಂದರೆ ತಮಗೂ ಮತ್ತು ಅದೇ ಗ್ರಾಮದ ಆರೋಪಿಳಿಗೂ ಚರಂಡಿ ನೀರಿಮ ವಿಚಾರವಾಗಿ ಜಗಳವಿದ್ದು, ಅದರಂತೆ ದಿನಾಂಕ ೦೩-೧೦-೨೦೨೦ ರಂದು ಇಬ್ಬರ ಮದ್ಯೆ ಜಗಳ ಉಂಟಾಗಿ ಅದೇ ಗ್ರಾಮದ ವಾಸಿಯಾದ, ಪಿರ್ಯಾದಿಯನ್ನು ಕೊಲೆ ಮಾಡುವ ಉದ್ದೇಶದಿಂದ ಅಡ್ಡಬಂದ ಪಿರ್ಯಾದಿಯ ತಾಯಿಯಾದ ಮುನಿವೆಂಕಟಮ್ಮ ರವರನ್ನು ಹೊಡೆದು ಕೊಲೆ ಮಾಡಿರುವುದಾಗಿ ಪಿರ್ಯಾದಿ ದೂರು ದಾಖಲಿಸಿರುತ್ತಾರೆ.
ಆರೋಪಿಗಳ ವಿವರ:
೧) ವಿಶ್ವನಾಥ್. ಶ್ರೀನಿವಾಸಪುರ ತಾಲ್ಲೂಕು ಕುಲಗುರ್ಕಿ ಗ್ರಾಮ
೨) ವಿಜಯಪ್ಪ . ಶ್ರೀನಿವಾಸಪುರ ತಾಲ್ಲೂಕು ಕುಲಗುರ್ಕಿ ಗ್ರಾಮ
೩) ಸೀನಪ್ಪ . ಶ್ರೀನಿವಾಸಪುರ ತಾಲ್ಲೂಕು ಕುಲಗುರ್ಕಿ ಗ್ರಾಮ
೪) ಅಶೋಕ. ಶ್ರೀನಿವಾಸಪುರ ತಾಲ್ಲೂಕು ಕುಲಗುರ್ಕಿ ಗ್ರಾಮ
೫) ರಮೆಶಪ್ಪ . ಶ್ರೀನಿವಾಸಪುರ ತಾಲ್ಲೂಕು ಕುಲಗುರ್ಕಿ ಗ್ರಾಮ.
೬) ಶ್ರೀಮತಮ್ಮ . ಶ್ರೀನಿವಾಸಪುರ ತಾಲ್ಲೂಕು ಕುಲಗುರ್ಕಿ ಗ್ರಾಮ
೭) ಕಮಲಮ್ಮ . ಶ್ರೀನಿವಾಸಪುರ ತಾಲ್ಲೂಕು ಕುಲಗುರ್ಕಿ ಗ್ರಾಮ.