ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ:15-10-2020

ದಿನಾಂಕ: 14-10-2020 ಸಂಜೆ 04:೦೦ ಗಂಟೆಯಿಂದ ದಿನಾಂಕ: 15-10-2020 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ

ಮಾರಣಾಂತಿಕ ರಸ್ತೆ ಅಪಘಾತ:

ವೇಮಗಲ್‌ ಪೊಲೀಸ್‌ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ,    ಕೋಲಾರ ತಾಲ್ಲೂಕು  NH75 ರಸ್ತೆ ನರಸಾಪುರ ಬಳಿಯ ನಿಯರ್‌ ಲಕ್ಷ್ಮಿಸಾಗರ ಗೇಟ್‌ ಯೂಟರ್ನ್ ಬಳಿ ಘಟನೆ ಸಂಬವಿಸಿರುತ್ತದೆ,  ಆಂದ್ರಪ್ರದೇಶದ  ಕಡಪ ಜಿಲ್ಲೆ ಮಾಲದಾರಿಪಲ್ಲಿ ಗ್ರಾಮದ ನಿವಾಸಿಯಾದ  ವಜ್ರಾಲ ರಾಜಾರತ್ನಂ ಬಿನ್ ವಜ್ರಾಲದಾನಂ ಎಂಬುವರು  ನೀಡಿದ ದೂರಿನ ಸಾರಾಂಶವೇನೇಂದರೆ   ಪಿರ್ಯಾದಿಯ ಮಗ ವಜ್ರಾಲ ದನರಾಜ್‌ ಎಂಬುವರು ಕೋಲಾರತಾಲ್ಲೂಕು ನರಸಾಪುರ ಬಳಿ ಇರುವ ಆಟೋಟೆಕ್‌ ಕಂಪನಿಯಲ್ಲಿ ಕೆಲಸಮಾಡಿತ್ತಿದ್ದು,  ಇದರಂತೆ ದಿನಾಂಕ ೧೪-೧೦-೨೦೨೦ ರಂದು  ತನ್ನ ಬಾಬತ್ತು ಟಿ.ಎಸ್ ೦೭.ಜಿವಿ ೫೮೯೧ ದ್ವಿಚಕ್ರವಾಹನದಲ್ಲಿ ಕೆಲಸ ಮುಗಿಸಿ  ವಜ್ರಾಲ ದನರಾಜ್‌ ಮತ್ತು ಕುಡುಸುಬ್ರಮಣ್ಯಂ ಎಂಬುವರು ಬೆಂಗಳೂರು ಕಡೆಯಿಂದ ಕೋಲಾರದ ಕಡೆಗೆ ಬರುತ್ತಿರುವಾಗ ಅದೇ ಮಾರ್ಗವಾಗಿ ಬಂದ ಕೆಎ೫೩ ಬಿ ೩೭೯೯ ಸಂಖ್ಯೆಯ ಟಿಪ್ಪರ್‌ ವಾಹನವನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಯಾವುದೇ ಸೂಚನೆಗಳು ಇಲ್ಲದೇ ಕೋಲಾರ ತಾಲ್ಲೂಕು  NH75 ರಸ್ತೆ ನರಸಾಪುರ ಬಳಿಯ ನಿಯರ್‌ ಲಕ್ಷ್ಮಿಸಾಗರ ಗೇಟ್‌ ಯೂಟರ್ನ್ ಬಳಿ ಬೆಂಗಳೂರು ಕಡೆಗೆ ಯೂಟರ್ನ್‌ ಮಾಡಿದ ಕಾರಣ ಹಿಂಬದಿಯಲ್ಲಿ ಬಂದ  ಟಿ.ಎಸ್ ೦೭. ಜಿವಿ ೫೮೯೧ ದ್ವಿಚಕ್ರವಾಹನದಲ್ಲಿ ಕೆಲಸ ಮುಗಿಸಿ  ವಜ್ರಾಲ ದನರಾಜ್‌ ಮತ್ತು ಕುಡುಸುಬ್ರಮಣ್ಯಂ ಎಂಬುವರು ಟಿಪ್ಪರ್‌ ಹಿಂಬದಿಗೆ ಡಿಕ್ಕಿ ಹೊಡೆದು ತೀವ್ರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ .

 

ಕಳವು:

ಕೋಲಾರ ನಗರ ಪೊಲೀಸ್‌ ಠಾಣೆಯಲ್ಲಿ ಕಳವಿಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ  ಕೋಲಾರ ನಗರದ ಕೀಲುಕೋಟೆ ಎಂಬಲ್ಲಿ ಘಟನೆ ಸಂಬವಿಸಿರುತ್ತದೆ, ಸದಸರಿ ವಿಳಾಸದ ವಾಸಿಯಾದ  ಚಂದ್ರಪ್ಪ ಬಿನ್ ಲೇಟ್‌ ಮುನಿಯಪ್ಪ ಎಂಬುವರು  ಠಾಣೆಗೆ ಹಾಜರಾಗಿ ನೀಡಿದ ದೂರಿ ಸಾರಾಂಶವೇನೆಂದರೆ . ಪಿರ್ಯಾದಿಯು ಸುಗಟೂರನ ಸರ್ಕಾರಿ ಹಿರಿಯ ಪ್ರಾಥಮಿ ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ಮಾಡಿತ್ತಿದ್ದು,  ದಿನಾಂಕ ೧೨-೧೦-೨೦೨೦ ರಂದು ತನ್ನ ಸ್ನೇಹಿತನ ಹೆಂಡತಿ ಹೆರಿಗೆ ವಿಚಾರವಾಗಿ ಕೋಲಾರದ ಎಸ್‌.ಎನ್‌.ಆರ್‌ ಆಸ್ಪತ್ರೆಗೆ ಹೋಗುವ ಸಲುವಾಗಿ ತನ್ನ ಬಾಬತ್ತು ಕೆಎ೦೭ ಡಬ್ಲೂ೯೮೯೪ ದ್ವಿಚಕ್ರ ವಾಹನವನ್ನು ಮನೆಯ ಬಳಿ  ನಿಲ್ಲಿಸಿ ಬೀಗ ಹಾಕಿ ಕೋಲಾರಕ್ಕೆ ಹೋಗಿ ಮರುದಿನ ಬಂದು ನೋಡಲಾಗಿ ಯಾರೋ ಕಳ್ಳರು  ಪಿರ್ಯಾದಿಯ ಮನೆಯ ಬಾಗಿಲನ್ನು ಯಾವುದೋ ಆಯುದದಿಂದ ಹೊಡೆದು ಮನೆಯಲ್ಲಿನ ನಗದು ೩೫,೦೦೦ ರೂ ಮತ್ತು ತನ್ನ ಬಾಬತ್ತು  ಕೆಎ೦೭ ಡಬ್ಲೂ೯೮೯೪ ದ್ವಿಚಕ್ರ ವಾಹನವನ್ನು ಕಳವು ಮಾಡಿ ಪರಾರಿಯಾಗಿರುತ್ತಾರೆ.

 

 

Leave a Reply

Your email address will not be published. Required fields are marked *