ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ:23-10-2020

ದಿನಾಂಕ: 22-10-2020 ಸಂಜೆ 04:೦೦ ಗಂಟೆಯಿಂದ ದಿನಾಂಕ: 23-10-2020 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ

 

ಯುವತಿ ಕಾಣೆಯಾಗಿರುವ ಬಗ್ಗೆ:

ಕೋಲಾರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ  ಯುವತಿ ಕಾಣೆಯಾಗಿರುವ ಬಗ್ಗೆ ಪ್ರಕರಣ ಧಾಖಲಾಗಿರುತ್ತದೆ.   ಕೋಲಾರ ತಾಲ್ಲುಕು  ಪಾರ್ಶ್ವಗಾನಹಳ್ಳಿ ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ.  ಸದರಿ ವಿಳಾಸದ   ವಾಸಿಯಾದ  ಶ್ರೀಮತಿ ರತ್ನಮ್ಮ ಕೊಂ ವೆಂಕಟೇಶ್‌ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಶಾರಾಂಶವೇನೆಂದರೆ  ದಿನಾಂಕ ೨೧-೧೦-೨೦೨೦ ರಂದು ಪಿರ್ಯಾದಿಯ ಮಗಳು ಪಾವನ (೧೯) ಎಂಬುವರು  ದರ್ಮಸ್ಥಳ ಸಂಘದ ಚೀಟಿ ಕಟ್ಟುವ ಸಲುವಾಗಿ ಸುಮಾರು ೧೧:೦೦ ಗಂಟೆಗೆ ಮನೆಯಿಂದ ಹೋದವಳು ಮರುಳಿ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಕುಟುಂಬಸ್ಥರ ಮತ್ತು ಸ್ನೇಹಿತರ ಮನೆಯಲ್ಲಿ ವಿಚಾರಿಸಿ ಅಲ್ಲಿಯೂ ಕಾಣದ ಕಾರಣ ದೂರು ದಾಖಲಿಸಿರುತ್ತಾರೆ.

 

ಕಳವು:

ಮುಳಬಾಗಿಲು ನಗರ ಪೊಲೀಸ್‌ ಠಾಣೆಯಲ್ಲಿ ಕಳವಿಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ನಗರದ ಶಮೀರ್‌ ಮೊಹೊಲ್ಲಾ ಬಳಿ ಘಟನೆ ಸಂಬವಿಸಿರುತ್ತದೆ,  ಮೂಲತಹ ಬಂಗಾರಪೇಟೆ ತಾಲ್ಲೂಕು ದೆಡ್ಡವಲಗಮಾದಿ ನಿವಾಸಿಯಾದ ಜಿಯಾಉಲ್ಲಾಖಾನ್‌ ಬಿನ್ ವಹಾಬ್‌ಖಾನ್‌ ಎಂಬುವರು ಠಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ಪಿರ್ಯಾದಿಯು   ಮುಳಬಾಗಿಲು ನಗರದ ಶಮೀರ್‌ ಮೊಹೊಲ್ಲಾ ದಲ್ಲಿ ಮನೆ ಮಾಡಿಕೊಂಡು  ಮುಳಬಾಗಿಲು ತಾಲ್ಲುಕು ಎಂ ಹೊಸಳ್ಳಿ ಬಳಿ ಕೋಳಿ ಪಾರಂ ನಡೆಸಿತ್ತಿದ್ದು ದಿನಾಂಕ ೨೨-೧೦-೨೦೨೦ ರಂದು ಹೆಂಡತಿ ಊರಿಗೆ ಹೋಗಿದ್ದು, ತಾನೂ ಸಹ ಮನೆ ಬೀಗ ಹಾಕಿ ಕೋಳಿ ಪಾರಂ ಬಳಿ ಹೋಗಿದ್ದದಾ ಇಧೆ ಸಮಯವನ್ನು ಉಪಯೋಗಿಸಿಕೊಂಡಿ ಯಾರೋ ಕಳ್ಳರು ಮನರಯ ಬಾಗಿಲು ಮುರಿದು ಮನೆಯಲ್ಲಿದ್ದ ೧) ೧೩ ಮೂಟೆ ರಾಗಿ.  ೨) ಗ್ಯಾಸ್‌ ಸಿಲೆಂಡರ್‌, ೩) ಸ್ಟೋವ್‌ ೩) ಟಿ.ವಿ  ಮತ್ತು ಬಂಗಾರದ ಒಡವೆಗಳನ್ನು ಕಳವು ಮಾಡಿ ಪರಾರಿಯಾಗಿರುತ್ತಾರೆ.

Leave a Reply

Your email address will not be published. Required fields are marked *