ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ:28-10-2020

ದಿನಾಂಕ: 27-10-2020 ಸಂಜೆ 04:೦೦ ಗಂಟೆಯಿಂದ ದಿನಾಂಕ: 28-10-2020 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ

 

ಯುವತಿ ಕಾಣೆಯಾಗಿರುವ ಬಗ್ಗೆ .

ಮಾಸ್ತಿ ಪೊಲೀಸ್‌

ಠಾಣೆಯಲ್ಲಿ ಯುವತಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ತಾಲ್ಲೂಕು  ಮಿಟ್ಟಗಾನಹಳ್ಳಿ ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ.  ಸದರಿ ಗ್ರಾಮದ ವಾಸಿಯಾದ ಶ್ರೀಮತಿ  ಶೈಲಜ ಕೊಂ ಶ್ರೀನಿವಾಸಪ್ಪ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದುರಿನ ಸಾರಾಂಶವೆನೆಂದರೆ  ಪಿರ್ಯಾದಿ ಮಗಳು   ರಾಜೇಶ್ವರಿ (೨೧)  ಎಂಬುವರಿಗೆ ದಿನಾಂಕ ೨೮-೧೦-೨೦೨೦ ರಂದು ವಿವಾಹ ನಿಶ್ಚಯವಾಗಿದ್ದು ಅದರಂತೆ ದಿನಾಂಕ ೨೭-೧೦-೨೦೨೦ ರಂದು  ರಾಜೇಶ್ವರಿ ಎಂಬುವರು ಮನೆಯಿಂದ ಹೊರಗೆ ಹೋದವಳು ಮರುಲಿ ಮನೆಗೆ ಮತ್ತು ಸಂಬಂದಿಕರ ಮನೆಗೂ ಹೋಗದೆ  ಕಾಣೆಯಾಗಿರುತ್ತಾರೆ . ಪಿರ್ಯಾದಿಯು ಸದರಿ ಮಗಳ ಕಾಣೆಯಾಗಿರುವುದಕ್ಕೆ  ಮಾಲೂರು ತಾಲ್ಲೂಕು  ಬೆಟ್ಟಹಳ್ಳಿ ಗ್ರಾಮದ ವಾಸಿಯಾದ  ಮನು ಎಂಬುವರ ಮೆಲೆ ಅನುಮಾನ ವ್ಯಕ್ತಪಡಿಸಿ ದೂರು ದಾಖಲಿಸಿರುತ್ತಾರೆ.,

 

ಮಾರಣಾಂತಿಕ ರಸ್ತೆ ಅಪಘಗಾತ:

ಮಾಸ್ತಿ ಪೊಲಿಆಸ್‌ ಠಾಣೆಯಲ್ಲಿ ಮಾರಾಣಾಂತಿಕ ರಸ್ತೆ ಅಪಘಗಾತಕ್ಕೆ ಸಂಭಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ತಾಲ್ಲುಕು  ಮಲಕನಹಳ್ಳಿ ಬಳಿ ಘಟನೆ ಸಂಬವಿಸಿರುತ್ತದೆ. ಸದರಿ ಗ್ರಾಮದ ವಾಸಿಯಾದವೆಂಕಟಸಾಮಪ್ಪ ಬಿನ್ ಬಡಿಗಪ್ಪ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ ೨೫-೧೦-೨೦೨೦ ರಂದು ಪಿರ್ಯಾದಿಯ ಮಗ ಪುಟ್ಟಪ್ಪ ಎಂಬುವರು  ತನ್ನ ಬಾಬತ್ತು ಕೆ.ಎ ೦೮ ಆರ್‍ ೪೨೮೪ ದ್ವಿಚಕ್ರ ವಾಹನದಲ್ಲಿ  ಮಾಸ್ತಿ ಕಡೆಯಿಂದ ತನ್ನ ಗ್ರಾಮದ ಕಡೆಗೆ ಹೋಗುತ್ತಿರುವಾಗ ಎದುರುಗಡೆಯಿಂದ ಬಂದ ಕೆಎ೦೮ ಎಕ್ಸ್ ೭೧೭೭ ದ್ವಿಚಕ್ರ ವಾಹನವು ಅತಿವೇಗ ನತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪುಟ್ಟಪ್ಪ ರವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪುಟ್ಟಪ್ಪ ರವರು ವಾಹನ ಸಮೇತ ಕೆಳಗೆ ಬಿದ್ದು  ತಲೆಗೆ ತೀವ್ರ ಗಾಯವಾಗಿದ್ದು, ಚಿಕಿತ್ಸೆಗಾಗಿ ಸ್ಥಲೀಯರು ಕೋಲಾರ ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಿದ್ದು,  ಚಿಕಿತ್ಸೆ ಪಲಕಾರಿಯಾಗದೇ ಗಾಯಾಳು ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *