ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ ೨೨-೦೭-೨೦೧೯

ದಿನಾಂಕ ೨೧-೦೭-೨೦೧೯ ಸಂಜೆ ೦೪:೦೦ ಗಂಟೆಯಿಂದ ದಿನಾಂಕ ೨೨-೦೭-೨೦೧೯ ರ ಸಂಜೆ ೦೪:೦೦ ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

ಮಾರಣಾಂತಿಕ ರಸ್ತೆ ಅಪಘಾತ:

ಕೋಲಾರ ಗ್ರಾಮಾಂತರ  ಪೊಲೀಸ್‌ ಠಾಣೆಯಲ್ಲಿ. ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂದಿಸಿದಂತೆ  ಪ್ರಕರಣ ದಾಖಲಾಗಿರುತ್ತದೆ.  ಕೋಲಾರ ತಾಲ್ಲುಕು ಮೂರಾಂಡಹಳ್ಳಿ  ಗೇಟ್ , ಶನೇಶ್ವರ ದೇವಸ್ಥಾನ ದ ಬಳಿ ಘಟನೆ ಸಂಬವಿಸಿರುತ್ತದೆ,  ದಿನಾಂಕ ೨೧-೦೭-೨೦೧೯ ರಂದು   ಕೋಲಾರ ನಗರ ವಾಸಿಯಾದ ಮುನೀರುದ್ದೀನ್   ರವರು  ತಮ್ಮ ಬಾಬತ್ತು ದ್ವಿಚಕ್ರ ವಾಹನ ಸಂಖ್ಯೆ ಕೆ,ಎ ೦೭ ಯು ೭೫೨೮ ಹೀರೋಹೋಂಡಾ ಪ್ಯಶನ್ ಪ್ರೋ  ದಲ್ಲಿ ಕೋಲಾರಕ್ಕೆ ಬರುತ್ತಿರುವಾಗ , ಕೋಲಾರ ಕಡೆಯಿಂದ ಬಂದ ಕೆ,ಎ ೦೭ ಡಬ್ಲು ೩೧೬೩ ಸಂಖ್ಯೆಯ ದ್ವಿಚಕ್ರ ವಾಹನವನ್ನು ಸವಾರನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ,ಮುಂದೆ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ  ಪರಿಣಾಮ ಎರಡು  ವಾಹನದ ಸವಾರರು ವಾಹನ ಸಮೇತ ಕೆಳಕ್ಕಿ ಬಿದ್ದು ,ಮುನಿರುದ್ದೀನ್ ರವರಿಗೆ ತಲೆಗೆ ತೀವ್ರ ರಕ್ತ ಗಾಯವಾಗಿ  ಚಿಕಿತ್ಸೆಗೆ ಕೋಲಾರದ  ಎಸ್,ಎನ್, ಆರ್‍ ಆಸ್ಪತ್ರೆಗೆ ದಾಖಲಿಸಿದ್ದು,  ಮತ್ತು ಹೆಚ್ಚಿನ ಚಿಕಿತ್ಸೆಗಾಗಿ  ಜಾಲಪ್ಪ   ಆಸ್ಪತ್ರೆಗೆ ದಾಖಲಿಸಿದ್ದು  ,ಚಿಕಿತ್ಸೆ ಪಲಕಾರಿ ಯಾಗದೆ ದಿನಾಂಕ ೨೧-೦೭-೨೦೧೯ ರಂದು ಮುನೀರುದ್ದೀನ್ ರವರು ಮೃತ ಪಟ್ಟಿರುತ್ತಾರೆ.

 

ಮಾರಣಾಂತಿಕ ರಸ್ತೆ ಅಪಘಾತ:

ಕೋಲಾರ ಟ್ರಾಪಿಕ್ ಪೊಲೀಸ್‌ ಠಾಣೆಯಲ್ಲಿ. ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂದಿಸಿದಂತೆ  ಪ್ರಕರಣ ದಾಖಲಾಗಿರುತ್ತದೆ. ಕೋಲಾರ ನಗರ ,ಅಮ್ಮವರುಪೇಟೆ ವೃತ್ತದ ಬಳಿ ಘಟನೆ ಸಂಬವಿಸಿರುತ್ತದೆ. ದಿನಾಂಕ ೨೧-೦೭-೨೦೧೯ ರಂದು ಸುಮಾರು ೧೦:೧೫ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲ್ಲೂಕು ಕಂಗಾನಲ್ಲೂರು ,ಗ್ರಾಮದ ವಾಸಿಯಧ ರಾಮಕ್ರಿಷ್ಣಪ್ಪ ಎಂಬುವರು  ಕೋಲಾರ ನಗರ ,ಅಮ್ಮವರುಪೇಟೆ ವೃತ್ತದ ಬಳಿ ಚಿಕನ್ ತೆಗೆದುಕೊಂಡು ತನ್ನ ಬಾಬತ್ತು ದ್ವಿಚಕ್ರವಾಹನ  ಸಂಖ್ಯೆ ಕೆ,ಎ ೦೮ ಕ್ಯೂ ೯೭೭೨, ವಾಹನದಲ್ಲಿ ಸ್ವಗ್ರಾಮಕ್ಕೆ ಹೋಗುವಾಗ ಹಿಂದೆಯಿಂದ ಬಂದ ಕೆ,ಎ ೪೦ ಎ೨೫೪೨ ಸಂಖ್ಯೆಯ ಟ್ರಾಕ್ಟರ್‍ ನ್ನು ಚಾಲಕ ಅತಿವೇಗ ಮತ್ತು ಅಜಾಗರುಕತೆಯಿಂದ   ಚಾಲನೆ ಮಾಡಿಕೊಂಡು ಬಂದು ದ್ವಿಚಕ್ರ ವಾಹನಕ್ಕೆ  ,ಡಿಕ್ಕಿ ಹೊಡೆದ ಪರಿಣಾಮ ರಾಮಕ್ರಿಷ್ಣಪ್ಪ ಎಂಬುವರು ದ್ವಿಚಕ್ರವಾಹನ ಸಮೇತ ಕೆಳಗೆ ಬಿದ್ದಾಗ  ಟ್ರಾಕ್ಟರ್‍ ನ ಚಕ್ರ ಬಲಗಾಲಿನ ತೋಡೆಯ ಮೇಲೆ ಹರಿದು  ತೀವ್ರ ರಕ್ತ ಗಾಯವಾಗಿ ,ಚಿಕಿತ್ಸೆಗಾಗಿ ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಲಕಾರಿಯಾಗದೆ  ದಿನಾಂಕ ೨೧-೦೭-೨೦೧೯ ರಂದು ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *