ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ ೨೩-೦೭-೨೦೧೯

ದಿನಾಂಕ ೨೨-೦೭-೨೦೧೯ ಸಂಜೆ ೦೪:೦೦ ಗಂಟೆಯಿಂದ ದಿನಾಂಕ ೨೩-೦೭-೨೦೧೯ ರ ಸಂಜೆ ೦೪:೦೦ ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲೆ ದೌರ್ಜನ್ಯ:

ಕೋಲಾರ ನಗರ ಪೊಲೀಸ್‌ ಠಾಣೆಯಲ್ಲಿ. ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲೆ ದೌರ್ಜನ್ಯಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ನಗರ ,ವಾರ್ಡ್ ನಂ: ೩ ,ಕೋಟೆ, ಎಂಬಲ್ಲಿ ಘಟನೆ ಸಂಬವಿಸಿರುತ್ತದೆ. ಸದರಿ ವಿಳಾಸದ ನಿವಾಸಿಯಾದ  ಬಾಬುಗಿರೀಶ್ ಬಿನ್ ವಂಕಟಗಿರಿ  ಎಂಬುವರ ಹೆಸರಿನಲ್ಲಿ ಸರ್ವೆ ನಂ;೧೯೯/೨೩೭ ರಲ್ಲಿ ೩ ಮನೆಗಳಿದ್ದು ಅವುಗಳನ್ನು ಗೋವಿಂದಪ್ಪ ಬಿನ್ ಮುನಿಯಪ್ಪ ,ರವರಿಗೆ ಬಾಡಿಗೆಗೆ  ನೀಡಿದ್ದು ,ಸದರಿ ಮನೆಗಳು ಮನೆಯ ಮಾಲಿಕನಾದ  ಬಾಬುಗಿರೀಶ್ ರವರಿಗೆ ಅವಶ್ಯಕತೆ ಇದ್ದು .ದಿನಾಂಕ ೨-೦೭-೨೦೧೯ ರಂದು ರಾತ್ರಿ  ಖಾಲಿ  ಮಾಡಿಕೊಡುವುದಾಗಿ ಮನವಿ ಮಾಡಿಕೊಂಡಿದ್ದು, ಇದರಿಂದ ಬಾಡಿಗೆಗೆ ನೆಲೆಸಿರುವ ಗೋವಿಂದಪ್ಪ ರವರು ಕೋಪಗೊಂಡು  ಕೆಳಜಾತಿ ಬೋಳಿ ಮಗನೆ, ಕೆಳಜಾತಿ ಸೂಳೆಮನೆ , ಎಂದು ಅವಾಚ್ಯ ಶಬ್ದಗಳಿಂದ ಬೈದು ,ಅವರ ಬಾಮೈದ, ವೆಂಕಟೇಶ್, ಮತ್ತು ಮಗ ರವಿ , ಎಲ್ಲರೂ ಒಟ್ಟಾಗಿ ಸೇರಿ ಹಲ್ಲೆ ಮಾಡಲು ಬಂದಿದ್ದು, ಪ್ರಾಣಬೆದರಿಕೆ ಹಾಕಿರುತ್ತಾರೆ.

ಕಳವು:

ಕೋಲಾರ ನಗರ ಪೊಲೀಸ್‌ ಠಾಣೆಯಲ್ಲಿ ಕಳವಿಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ನಗರ ,ಲಕ್ಷ್ಮಣಗೌಡ ನಿಲಯ ,ನ್ಯೂ ಎಕ್ಸಟೆನ್‌ಷನ್ ,ಡೂಂ ಲೈಟ್ ಸರ್ಕಲ್ . ಬಳಿ ಘಟನೆ ಸಂಬವಿಸಿರುತ್ತದೆ, ಸದರಿ ವಿಳಾಸದ  ವಾಸಿಯಾದ ರಾಹುಲ್ ,ಪಿ  ಬಿನ್  ಅಶೋಕ್ ,ಪಿ  ರವರು ತಮ್ಮ ಬಾಬತ್ತು  ಸಂಖ್ಯೆ : ಕೆ,ಎ ೦೭ ವಿ ೦೦೭೭ ರಾಯಲ್ ಎನ್ಫೀಲ್ಡ್, ದ್ವಿಚಕ್ರ ವಾಹನ ವನ್ನು ದಿನಾಂಕ ೦೪-೦೭-೨೦೧೯ ರಂದು ರಾತ್ರಿ ತಮ್ಮ ಮನೆಯ ಮುಂದೆ ನಿಲ್ಲಿಸಿದ್ದು , ೦೫-೦೭-೨೦೯ ರಂದು ಬೆಳಿಗ್ಗೆ ೭:೦೦ ಗಂಟೆ ಸಮಯದಲ್ಲಿ ನೊಡುವಸ್ಟರಲ್ಲಿ  ಯಾರೊ ಅಪರಿಚಿತರು  ಸಂಖ್ಯೆ : ಕೆ,ಎ ೦೭ ವಿ ೦೦೭೭ ರಾಯಲ್ ಎನ್ಫೀಲ್ಡ್, ದ್ವಿಚಕ್ರ ವಾಹನ ವನ್ನು ಕಳವು ಮಾಡಿ ಪರಾರಿ ಯಾಗಿರುತ್ತಾರೆ.

Leave a Reply

Your email address will not be published. Required fields are marked *