ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ ೨೪-೦೭-೨೦೧೯

ದಿನಾಂಕ ೨೩-೦೭-೨೦೧೯ ಸಂಜೆ ೦೪:೦೦ ಗಂಟೆಯಿಂದ ದಿನಾಂಕ ೨೪-೦೭-೨೦೧೯ ರ ಸಂಜೆ ೦೪:೦೦ ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

ಹಲ್ಲೆ ಮತ್ತು ಪ್ರಾಣಬೆದರಿಕೆ  :

ಮುಳಬಾಗಿಲು ಗ್ರಾಮಾಂತರ ಪೊಲಿಸ್ ಠಾಣೆಯಲ್ಲಿ  ಹಲ್ಲೆ ಮತ್ತು ಪ್ರಾಣಬೆದರಿಕೆ ಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಲು ತಾಲ್ಲೂಕು   ವಿ ಗಂಗಾಪುರ  ಗ್ರಾಮದ ಬಳಿ ಘಟನೆ ಸಂಬವಿಸಿರುತ್ತದೆ. ಸದರಿ ವಿಳಾಸದ ವಾಸಿಯಾದ  ನಾಗರಾಜ್ ಬಿನ್ ಪಾಪುಲಪ್ಪ ರವರು  ಎನ್ ,ಅರ್‍,ಜಿ ಅಡಿಯಲ್ಲಿ ಕೆರೆ ಹೂಳು ತೆಗೆಸುವ ಸಲುವಾಗಿ ಕೂಲಿ ಕಾಮಿಕರಿಗೆ ಅದರ ವಿಸ್ತೀರ್ಣ ,ಮತ್ತು ಅಳತೆಗಳ ಬಗ್ಗೆ ತಿಳಿಸುತ್ತಿರುವಾಗ  ಮುಳಬಾಗಲು ತಾಲ್ಲೂಕು    ಪೂಜಾರಹಳ್ಳಿ ಗ್ರಾಮದ ವಾಸಿಯಾದ ವಾಸುದೇವರೆಡ್ಡಿ ,ಮತ್ತು ವಿ ಗಂಗಾಪುರ  ಗ್ರಾಮದ ವಾಸಿಗಳಾದ ಕೃಷ್ಣಪ್ಪ,ಪದ್ಮಮ್ಮ, ಮತ್ತು ಸಂತೋಶ್ ಕುಮಾರ್‍  ಬಿನ್ ಕೃಷ್ಣಪ್ಪ ರವರು ಒಟ್ಟಾಗಿ ಸೇರಿ ಕ್ಷುಲ್ಲಕ ಕಾರಣಕ್ಕೆ ಅವಾಚ್ಯ ಶಬ್ದಗಳಿಂದ ಬೈದು,  ನನ್ನನ್ನು ಹಾರಿಯಿಂದ ಬೆನ್ನಿಗೆ ಹೊಡೆದು  ಹಲ್ಲೆ ಮಾಡಿ ಸಾಯಿಸಿಬಿಡುವುದಾಗಿ  ಪ್ರಾಣಬೆದರಿಕೆ ಹಾಕಿರುತ್ತಾರೆ.

Leave a Reply

Your email address will not be published. Required fields are marked *